ಕಸವರ

Author : ಹರಿಹರಪ್ರಿಯ (ಸಾತವಲ್ಲಿ ವೇಂಕಟವಿಶ್ವನಾಥಭಟ್ಟ)

Pages 96

₹ 116.00
Year of Publication: 2015
Published by: ಪುಸ್ತಕ ಮನೆ
Address: 702, ಬಿ.ಸಿ.ಸಿ.ಹೆಚ್.ಎಸ್. ಲೇಔಟ್, ವಾಜರ ಹಳ್ಳಿ, ತಲಘಟ್ಟಪುರ, ಬೆಂಗಳೂರು-560109
Phone: 9242221506

Synopsys

ಕಾವ್ಯಕಟ್ಟುವ ವಿನ್ಯಾಸದ ಬಗ್ಗೆ ತಾಕಲಾಟಕ್ಕೆ ಸಿಗದೆ, ಒಂದೇ ಓಟದಲ್ಲಿ ಒಂದು ಕವಿತೆ ಪೂರ್ಣಗೊಳ್ಳುವ ಶೈಲಿ ಇಲ್ಲಿನ ವಿಶೇಷ. ಹರಿಪ್ರಿಯ ಕುವೆಂಪು ಅವರ ಪ್ರಭಾವಕ್ಕೆ ಒಳಗಾದವರು ಹಾಗಾಗಿ ಇಲ್ಲಿನ ಕವನಗಳಲ್ಲಿಯೂ ವೈಚಾರಿಕ ಪ್ರಜ್ಞೆಯ ಕಡೆಗೆ, ಸಮಾಜದಲ್ಲಿರುವ ಅಸಮಾನತೆಗಳನ್ನು ಪ್ರತಿಭಟಿಸುವ ಕವನಗಳೇ ಹೆಚ್ಚು.

About the Author

ಹರಿಹರಪ್ರಿಯ (ಸಾತವಲ್ಲಿ ವೇಂಕಟವಿಶ್ವನಾಥಭಟ್ಟ)

ಆಂಧ್ರಮೂಲದ ಸಾತವಲ್ಲಿ ವೇಂಕಟವಿಶ್ವನಾಥಭಟ್ಟ ಅವರು ಹರಿಹರಪ್ರಿಯ ಎಂದೇ ಪರಿಚಿತರು. ಮೈಸೂರಿನಲ್ಲಿ ಜನಿಸಿದ (ಜ. 1952) ಅವರು ಬೆಳೆದದ್ದು ಮಂಡ್ಯದಲ್ಲಿ. ಪ್ರೌಢಶಾಲೆಯವರೆಗೆ ಓದಿ ನಂತರ ’ಕನ್ನಡ ಜಾಣ’ದಲ್ಲಿ ಉನ್ನತಮಟ್ಟದ ಯಶಸ್ಸು ಸಾಧಿಸಿದ ಅವರು ರಾಷ್ಟ್ರಕವಿ ಕುವೆಂಪು ಅವರನ್ನು ಕನ್ನಡದ ಗುರು ಎಂದು ಕೊಂಡ ಹಾಗೆ ತೆಲುಗಿನ ಮಹಾಕವಿ ಶ್ರೀಶ್ರೀ ಅವರು ಹೋರಾಟಕ್ಕೆ ಗುರು. ಕಾವ್ಯ, ಕಾದಂಬರಿ, ಕತೆ, ನಾಟಕ, ವಿಚಾರ ವಿಮರ್ಶೆ, ಸಂಶೋಧನೆ, ವ್ಯಕ್ತಿಚಿತ್ರ, ತೌಲನಿಕ ಅಧ್ಯಯನ, ಗ್ರಂಥಸಂಪಾದನೆ, ಅಂಕಣ ಬರಹ ಮುಂತಾದ ಪ್ರಕಾರಗಳಲ್ಲಿ ಕೃತಿ ರಚನೆ ಮಾಡಿದ್ದಾರೆ. ನಾನ್ ಅಕಾಡೆಮಿಕ್ ಚಳವಳಿಗಾರ, ಸಾಂಸ್ಕೃತಿಕ ರಾಯಭಾರಿ ಎಂದು ಹೆಸರು. ...

READ MORE

Related Books