ಸುಪ್ತಸಾಗರ

Author : ಶ್ರೀವಲ್ಲಿ ಮಂಜುನಾಥ

Pages 101

₹ 80.00




Year of Publication: 2019
Published by: ಹೆಮ್ಮರ ಪ್ರಕಾಶನ
Address: 3/1, ಎರಡನೇ ಮಹಡಿ, ಕೆ ಎಸ್ ಆರ್ ಪ್ಲಾಜಾ, ದೇವರಚಿಕ್ಕನಹಳ್ಳಿ, ಬೆಂಗಳೂರು-560076
Phone: 9531418418

Synopsys

ಸುಪ್ತಸಾಗರ ಭಾವದಲೆಗಳು ಕವನ ಸಂಕಲನ.

About the Author

ಶ್ರೀವಲ್ಲಿ ಮಂಜುನಾಥ
(08 April 1967)

ಸದ್ಯ ಬೆಂಗಳೂರು ನಿವಾಸಿ ಆಗಿರುವ ಶ್ರೀವಲ್ಲಿ ಮಂಜುನಾಥ ಅವರು ಹಲವು ಲೇಖನಗಳನ್ನು ಬರೆದಿದ್ದಾರೆ. ತುಷಾರ, ತರಂಗ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಅವರ ಬರೆಹಗಳು ಪ್ರಕಟವಾಗಿವೆ. ಅವರು ಸುಪ್ತಸಾಗರ ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ...

READ MORE

Excerpt / E-Books

ಕಂಡಿದ್ದು, ಕೇಳಿದ್ದು, ಅನುಭವಿಸಿದ್ದು, ಚಿಂತಿಸಿದ್ದು, ಚಿಂತನೆಗೈದದ್ದು ಹೀಗೆ ವಿಸ್ತರಿಸುತ್ತಾ ಹೋದಂತೆ ಕಾವ್ಯದ ಕಥಾವಸ್ತು ವಿಸ್ತರಿಸುತ್ತಾ ಹೋಗುತ್ತದೆ. ಇಂತಹದ್ದನ್ನೆ ಇಟ್ಟುಕೊಂಡು ಭಾವತುಂಬಿ ಬರೆದಿರುವ ಕವನ ಸಂಕಲನವೇ ಸುಪ್ತಸಾಗರ. ಈ ಸುಪ್ತಸಾಗರವನ್ನು ಕವಯತ್ರಿ ಭಾವದಲೆಗಳ ಎಂದು ಕರೆದಿದ್ದಾರೆ.  ಇಲ್ಲಿರುವ ಹಲವಾರು ಕವಿತೆಗಳು ಹಾಗೂ ಅವುಗಳಲ್ಲಿ ಮೂಡಿಬಂದಿರುವ ಸಾಲುಗಳು ಓದುಗರ ಗಮನವನ್ನು ಖಂಡಿತವಾಗಿಯೂ ಸೆಳೆಯುತ್ತವೆ.

’ಹರಿವ ನದಿಯಂತೆ ಹೀಗೆ ಬಂದು ಹಾಗೆ ತೆರಳಬೇಕು. ಇಂತಹ ಅನೇಕ ಕವಿತೆಗಳು ಇಲ್ಲಿವೆ.  "ಪ್ರಕೃತಿ", "ಅರಿವು", "ಆತ್ಮ ಸಾಂಗತ್ಯ", "ಸಂವಾದ", "ಮುಖವಾಡ", "ಸರಿದ ತೆರೆ", "ರಾಧೆ", "ಬಾ, ಮಳೆಯೇ ಬಾ" - ಹೀಗೆ ನನಗೆ ಪ್ರಿಯವೆನಿಸಿದ ಕೆಲವು ಕವಿತೆಗಳನ್ನು ನಾನಿಲ್ಲಿ ಉದಾಹರಿಸಿದ್ದೇನಷ್ಟೆ. ಎಂದು ಮುನ್ನುಡಿಯಲ್ಲಿ ಕವಯತ್ರಿಯ ಬರಹ ವೈಶಾಲ್ಯತೆಯನ್ನು ವಿವರಿಸಿದ್ದಾರೆ ಸತ್ಯೇಶ್. 

"ಅರಿವು" ಕವನದಲ್ಲಿನ ಸಾಲುಗಳು ವಿಭಿನ್ನ ರೀತಿಯಲ್ಲಿ ಮಗದೊಂದು ದನಿಯನ್ನು ಕಟ್ಟಿಕೊಡುತ್ತವೆ. ಅವು ಹೀಗಿವೆ:

ಕಾಡುವ ನನ್ನೆಲ್ಲ

ತೊಂದರೆಗಳಿಗೆ

ನಾ ನೋಯುವುದು

ಬೇಕಿಲ್ಲವೆಂಬುದರ

ಅರಿವಾಗುತ್ತಿದೆ !

Related Books