ಭವಸಾರ

Author : ಕೊಟ್ರೇಶ್ ಅರಸೀಕೆರೆ

Pages 94

₹ 100.00
Year of Publication: 2020
Published by: ಗೋಮಿನಿ ಪ್ರಕಾಶನ
Address: 6ನೇ ಕ್ರಾಸ್, ಚನ್ನಕೇಶವ ಲೇಔಟ್, ಗೂಳೂರು ಗೃಹ ಮಂಡಳಿ ಹತ್ತಿರ, ಗೂಳೂರು - 572118, ತುಮಕೂರು
Phone: 9986692342

Synopsys

ಕವಿ ಕೊಟ್ರೇಶ್‌ ಅರಸೀಕೆರೆ ಅವರ ಚೊಚ್ಚಲ ಕವನ ಸಂಕಲನ ‘ಭವಸಾರ’. ಕಾಮ, ಪ್ರೇಮ, ವಾತ್ಸಲ್ಯ,ಮಮತೆ, ಅಂತಃಕರಣ, ನೋವು, ಸಿಟ್ಟು, ಸೆಡವು ಹೀಗೆ ಭವದ ಸಾರವನ್ನೆಲ್ಲ ಬಸಿದು ಕೊಟ್ರೇಶ್ ಕವಿತೆಗಳನ್ನಾಗಿಸಿದ್ದಾರೆ. ಬದುಕೇ ಬರಹವಾಗಿರುವ ಕೊಟ್ರೇಶ್ ಅವರ ಸಹಜತೆ, ಪ್ರಾಮಾಣಿಕ ಕತೆಗಳೇ ಈ ಕವಿತೆಗಳ ಜೀವಾಳವಾಗಿದೆ. ನನ್ನಮ್ಮ, ಹೂ ಮಕ್ಕಳು ಮತ್ತು ಅಮ್ಮ, ಹಣತೆ ಮತ್ತು ನನ್ನ ದಾರಿ, ಮಗಳು ಮತ್ತು ಮಳೆ, ಕಾಡತಾವ ಕಾಡ ಗಣ, ಮಳೆಯ ಮಾರನೆಯ ದಿನ, ಅಣ್ಣಾ, ರಾತ್ರಿ ಮೂರರ ಮಳೆ, ಪ್ರಿಯೇ, ಇರುಮುಡಿಯ ಸಹಜತೆ, ನೀಲಿ, ರಂಗ, ಓಂಕಾರ , ಹತ್ತನೇ ಕ್ಲಾಸಿನ ಹುಡುಗ, ಹಕ್ಕಿ- ಹಿಕ್ಕೆ, ನಗ್ನ, ಪ್ರಾರ್ಥನೆ, ಬದುಕು ಮತ್ತು ವಿದಾಯ, ಬಾರೆ ಕಟ್ಟು, ಶ್ರಾವಣ, ಮುಕ್ತಿ, ಬಂಡಾಯ, ಉತ್ತರ ಧೃವದಿಂ ದಕ್ಷಿಣ ಧೃವಕೂ, ಯುಗ ಪುರುಷ, ಮಕ್ಕಳೂಟ, ನಿಜ ಶರಣರ ಕ್ಷಮೆ ಕೋರಿ, ಸಖಿ ಗೆ, ಕಲಬುರ್ಗಿ ಸರ್ ಗೆ, ದೇವರಿಗೆ, ಬದುಕಿನ ಧ್ಯಾನ, ಮಾನಸಿಗಳ್ಳಿ, ಭವಸಾರ, ಬದುಕಿನ ದಾರಿ, ಯೌವ್ವನದ ಚಳಿ, ಗಾಳಿ ಗೋಪುರ, ದರ್ಶನ, ಹಸಿವು, ನಿಶೆ, ಬಾಳಿನ ಬವಣೆ, ಮೌನ, ಮಗಳಿರುವ ಅಪ್ಪನೊಬ್ಬನ ಕವನ, ಹೃದಯದ ಹಾಡು, ಸರೋವರದ ಹಾಡು ಹೀಗೆ 43 ಶೀರ್ಷಿಕೆಗಳನ್ನು ಈ ಕವನಸಂಕಲನ ಒಳಗೊಂಡಿದೆ. ಇಲ್ಲಿಯ ಹಲವಾರು ಕವನಗಳು ಕನ್ನಡ ಪತ್ರಿಕೆಗಳಲ್ಲಿ ಪ್ರಕಟಣೆ ಕಂಡಿವೆ. ಕವನ ಸಂಕಲನಕ್ಕೆ ಮುನ್ನುಡಿ ಬರೆದ ಲೇಖಕ ಡಿ.ಎಸ್.ರಾಮಸ್ವಾಮಿ , ‘ಬಲವಂತ ಬಸಿರು ಮತ್ತು ಅನಿವಾರ್ಯ ಹೆರಿಗೆಗಳಿಂದ ಈ ಪದ್ಯಗಳು ಬಚಾವಾಗಿವೆ. ಸಹಜತೆ ಮತ್ತು ಕವಿಸಮಯ ಇಲ್ಲಿಯ ಬಹುತೇಕ ಕವಿತೆಗಳ ಹಿಂದೆ ಇರುವುದು ಶೃತವಾಗುವ ಅಂಶ.  ಬಹುತೇಕ ಪದ್ಯಗಳ ಮೊದಲ ಸಾಲು ಅಥವ ಶೀರ್ಷಿಕೆಗಳು ಈ ಕವಿಯ ವಿಸ್ತಾರವಲ್ಲದಿದ್ದರೂ ಮೇಲ್ನೋಟದ ಪೂರ್ವ ಸೂರಿಗಳ ಓದನ್ನು ದಾಖಲಿಸಿವೆ. ಯಾರನ್ನೂ ಓದದೆ ತಮಗೆ ತೋಚಿದ್ದೇ ಪ್ರಪಂಚ ಅನ್ನುವವರ ನಡುವೆ ಈ ಕವಿ ಭರವಸೆ ಹುಟ್ಟಿಸುತ್ತಾರೆ' ಎಂದು ಪ್ರಶಂಸಿಸಿದ್ದಾರೆ.

 

About the Author

ಕೊಟ್ರೇಶ್ ಅರಸೀಕೆರೆ

ಕವಿ ಕೊಟ್ರೇಶ್ ಅರಸೀಕೆರೆ ಅವರು 1975ರಲ್ಲಿ ಅರಸೀಕೆರೆಯಲ್ಲಿ ಜನಿಸಿದರು. ತಂದೆ ನೀಲಕಂಠ ಸ್ವಾಮಿ, ತಾಯಿ ಸುಗುಣಾಂಬ. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ವನ್ನು ಅರಸೀಕೆರೆಯಲ್ಲಿಯೇ ಪೂರೈಸಿದರು. ಅರಸೀಕೆರೆಯಲ್ಲಿ ಸಣ್ಣದೊಂದು ಬೆಣ್ಣೆ ದೋಸೆ ಕ್ಯಾಂಟೀನ್ ನಡೆಸುತ್ತಿದ್ದಾರೆ. ಸಾಹಿತ್ಯ, ರಂಗಭೂಮಿಯಲ್ಲಿಯೂ ಆಸಕ್ತರು. ‘ಭವಸಾರ’ ಅವರ ಚೊಚ್ಚಲ ಕವನ ಸಂಕಲನ. ...

READ MORE

Related Books