ಕಾವ್ಯಬೋಧಿ

Author : ಎಚ್.ಎಸ್. ಅನುಪಮಾ

Pages 200

₹ 170.00




Year of Publication: 2014
Published by: ಕವಿ ಪ್ರಕಾಶನ
Phone: 9480 211320

Synopsys

ಮಹಿಳೆಯರೇ ಬರೆದ ಅಪಾರ ಪದ್ಯಗಳನ್ನು ಈ ಕೃತಿಯಲ್ಲಿ ಒಂದೆಡೆ  ಸಂಪಾದಕಿ ಡಾ. ಎಚ್. ಎಸ್. ಅನುಪಮಾ ಹಿಡಿದಿಟ್ಟಿದ್ದಾರೆ. ಕನ್ನಡದಲ್ಲಿ ಮಹಿಳಾ ಕಾವ್ಯಕ್ಕೆ ಪ್ರಾಚೀನ ಇತಿಹಾಸದ ಬೆಂಬಲ ತೀರಾ ಕಡಿಮೆ. ಅದು ಉಜ್ವಲವಾಗಿ ಹೊರಹೊಮ್ಮಿದ್ದು ಅಕ್ಕಮಹಾದೇವಿಯಂತಹ ಶರಣೆಯಿಂದ. ಅಂತೆಯೇ ಮುಂದೆ ಸಂಚಿಯ ಹೊನ್ನಮ್ಮನಂತಹ ಕವಯಿತ್ರಿಯರು ಹುಟ್ಟಿದರೂ ಅವರ ಕಾವ್ಯಕ್ಕೆ ಹದಿಬದೆಯ ಮಿತಿಗಳಿದ್ದವು. ಆದರೆ ಮಹಿಳೆಯ ಧ್ವನಿ ಮಾತ್ರ ಗುಪ್ತಗಾಮಿನಿಯಂತ ಕತೆಗಳಲ್ಲಿ, ಹಾಡುಗಳಲ್ಲಿ, ಜನಪದ ಕಾವ್ಯಗಳಲ್ಲಿ ಗುಟ್ಟಾಗಿ ಹರಿಯುತ್ತಲೇ ಇತ್ತು. ಭೂಮಿಯೊಳಗಿನ ಲಾವರಸದಂತೆ ಗುಟ್ಟಾಗಿ ಕುದಿಯುತ್ತಿತ್ತು. ಆಧುನಿಕ ದಿನಗಳಲ್ಲಿ ಕವಿತೆಗಳು ಆಸರೆಯಾದದ್ದು ಪುರುಷರಿಗಿಂತ ಮಹಿಳೆಯರಿಗೇ ಹೆಚ್ಚು. ಪುರುಷರ ಕವಿತೆಗಳು ಕ್ಲೀಷೆಗಳ ನಡುವೆ ತೊಳಲಾಡುತ್ತಿದ್ದರೆ, ಮಹಿಳೆಯ ಸಾಲುಗಳು ಒರೆಯಿಂದೆಳೆದ ಕತ್ತಿಯಂತ ಹಲವರ ಕಣ್ಣು ಕುಕ್ಕ ತೊಡಗಿದ್ದು ಸತ್ಯ. ಇಲ್ಲಿರುವ ಕವಿತೆಗಳಲ್ಲಿ ಅಂತಹ ಗುಣಲಕ್ಷಣಗಳುಳ್ಳ ಹಲವು ಕವಿತೆಗಳಿವೆ.

About the Author

ಎಚ್.ಎಸ್. ಅನುಪಮಾ

ಲೇಖಕಿ, ಕವಯತ್ರಿ ಎಚ್.ಎಸ್.ಅನುಪಮಾ ಅವರು ವೃತ್ತಿಯಲ್ಲಿ ವೈದ್ಯೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕವಲಕ್ಕಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ‘ಹೂ ಅರಳಿದ್ದಕ್ಕೆ ಯಾಕೆ ಸಾಕ್ಷಿ’. ಜೀವಕೋಶ, ಮಹಿಳಾ ಆರೋಗ್ಯ, ಅಸಮಾನ ಭಾರತ, ಮಹಿಳೆ: ದಲಿತತ್ವ ಮತ್ತು ರಾಜಕೀಯ ಪ್ರಜ್ಞೆ, ಭೀಮಯಾನ, ಉರಿಯ ಪದವು(ನಾಮದೇವ ಢಸಾಳ್ ಅನುವಾದ). ಅಂಬೇಡ್ಕರ್ ಮತ್ತು ಕಾರ್ಟೂನ್ ವಿವಾದ, ಮೋಟರ್ ಸೈಕಲ್ ಡೈರಿ ಸೇರಿದಂತೆ ಹಲವು ಕೃತಿಗಳು ಪ್ರಕಟವಾಗಿವೆ. ದಲಿತ, ಮಹಿಳಾ ಮತ್ತು ಪ್ರಗತಿಪರ ಸಂಘಟನೆಗಳೊಡನೆ ಗುರುತಿಸಿಕೊಂಡಿರುವ ಅನುಪಮಾ ಲಡಾಯಿ ಪ್ರಕಾಶನದ ಕಾರ್ಯಗಳಲ್ಲೂ ಸಹಭಾಗಿಯಾಗಿದ್ದಾರೆ.  ...

READ MORE

Related Books