ಉಪ್ಪು ನೀರಿನ ಸೆಲೆ

Author : ಸಮೀರ್ ಹಾದಿಮನಿ

Pages 108

₹ 100.00




Year of Publication: 2023
Published by: ಶಾಫಿಯಾ ಪ್ರಕಾಶನ
Address: ಆಲಮೇಲ, ವಿಜಯಪುರ ಜಿಲ್ಲೆ- 586202

Synopsys

‘ಉಪ್ಪು ನೀರಿನ ಸೆಲೆ’ ಸಮೀರ್ ಹಾದಿಮನಿ ಅವರ ಹಾಯ್ಕುಗಳ ಸಂಕಲನ. ಈ ಕೃತಿಗೆ ಹಿರಿಯ ಸಾಹಿತಿ ಎ.ಎಸ್. ಮಕಾನದಾರ ಅವರ ಬೆನ್ನುಡಿ ಬರಹವಿದೆ. ಪುಸ್ತಕದ ಕುರಿತು ಬರೆಯುತ್ತಾ ‘ಸಮಾಜ ಸೇವೆ, ವೈದ್ಯಕೀಯ ಸೇವೆಯ ಜೊತೆ ಜೊತೆಗೆ ಕಲೆ, ಸಾಹಿತ್ಯ, ಸಂಗೀತ ಕ್ಷೇತ್ರಗಳಲ್ಲೂ ಆಸಕ್ತಿ ಯನ್ನು ರೂಢಿಸಿಕೊಂಡ ಯುವಕವಿ ಮಿತ್ರ ಡಾ. ಸಮೀರ್ ಹಾದಿಮನಿ ಅವರದು ಬಹುಮುಖ ಪ್ರತಿಭೆ, ವಿಜಯ ಪುರದ ಮಾಲ ದಂಡಿ ಜೋಳದ ರುಚಿಯಂತಹ ಫಳಫಳ ಹೊಳೆಯುವ 234ಹಾಯ್ಕುಗಳುಳ್ಳ ಉಪ್ಪು ನೀರಿನ ಸೆಲೆ `ಕಾವ್ಯ ಚಿತ್ರಕಲೆಯ ಜುಗಲ್ಬಂದಿಯಾಗಿದೆ. ಕಾವ್ಯ ಕಲೆಯ ನಿರ್ಮಾರ್ತರು ಡಾ.ಸಮೀರ್ ಅವರೇ ಎಂಬುದು ಅಭಿಮಾನದ ಸಂಗತಿ. ತನ್ನ ಅನುಯಾಯಿಗಳಿಗೆ ಏನನ್ನೂ ಕಲಿಸದೇ ತಾನು ಸವಿಸಿದ ಹೆಜ್ಜೆ ಗುರುತುಗಳಿಂದಲೇ ಅರಿತು, ಕಲಿತು, ಬದುಕಿ ಬಾಳಿ ಎಂದು ಸಾರುವ ಮಾರ್ಗ ಬೌದ್ಧ ಧರ್ಮದ ಝನ್ನನ ಆಶಯ, ಝನ್ ಎಂದರೆ ಬದುಕಿನ ಅರಿವಿನ ಕುರುಹು.

ಈ ಸಮಾಜಕ್ಕೆ ನಮ್ಮಿಂದ ಏನನ್ನೂ ಕೊಡಲಾಗದಿದ್ದರೂ ಉಪದೇಶವನ್ನು ಧಾರಾಳವಾಗಿ ಕೊಡುತ್ತೇವೆ. ಆದರೆ, ಝನ್‌ ಉಪದೇಶಿಸುವ ಮಾರ್ಗವಲ್ಲ, ಅನುಭವ ಜನ್ಯ ಮಾರ್ಗ, ಕನ್ನಡ ಕಾವ್ಯ ಪರಂಪರೆಗೆ ಹಲವು ತೊರೆಗಳು ಹರಿದು ಬಂದಿದೆ. ಜಪಾನ್ ನ ಜನಪ್ರಿಯ ಕಾವ್ಯ ಪ್ರಕಾರಗಳಲ್ಲಿ ಹಾಯ್ಕು ಕೂಡ ಒಂದು, ನಿರ್ಜಲೀಕರಣದಿಂದ ಬ್ಯಾಕ್ಟೀರಿಯಾ ಬೆಳವಣಿಗೆ ತಡೆಯುವ ನೋವು ಉರಿಯೂತ ಶಮನಗೊಳಿಸುವದರ ಜೊತೆಗೆ ಸೌಂದರ್ಯ ವರ್ಧನೆಗೊಳಿಸುವ ಶಕ್ತಿ ಉಪ್ಪು ನೀರಿಗಿದೆ, ಸಂಕಲನದ ಹಾಯ್ಕು ಗಳು ರೋಗಿಗೆ ನೀಡಿದ ಕಹಿಗುಳಿಗೆಗಳಂತೆ ಸಮಕಾಲಿನ ತಲ್ಲಣಗಳಿಗೆ ಮುಖಾಮುಖಿಯಾಗಿಸುತ್ತಲೇ ಸಾಮಾಜಿಕ ಸ್ವಾಸ್ಥ್ಯ, ದೈಹಿಕ ಸ್ವಾಸ್ತ್ಯ, ಅಕ್ಷರ ಗಳ ಸ್ವಾಸ್ತ್ಯಕ್ಕಾಗಿ ಹಪಾಹಪಿಸುತ್ತಿರುವ ಡಾ. ಸಮೀರ್ ಅವರ ಹಾಯ್ಕುಗಳಲ್ಲಿ ಗಹನವಾದ ವಿಚಾರ ಅರ್ಥವಂತಿಕೆಗಳ ಹಿನ್ನಲೆಯಲ್ಲಿ ರೂಪಿತಗೊಂಡ ಹಾಯ್ಕುಗಳು ಓದುಗರಿಗೆ ಅನುಭವವೇದ್ಯ ವಾಗಿಸುತ್ತವೆ.

ತನ್ನ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ರೋಗಿಗಳಷ್ಟೇ ಅಲ್ಲ, ಪ್ರವತ್ತಿಯ ದೂತ್ಯಕವಾಗಿರುವ ಸೂಜಿ, ಸೂಜಿ ಮೊನೆ, ಕುಂಚ, ಬಣ್ಣ, ಕೆನವಾಸಗಳ ನಾಡಿಮಿಡಿತವನ್ನೂ ಬಲ್ಲವರು, ಕಲಾವಿದ ಸಮೀರ್ ಅವರು ಸಾಹಿತ್ಯ ಕ್ಷೇತ್ರಗಳಲ್ಲಿ ಎತ್ತರ ಎತ್ತರಕೆ ಬೆಳೆಯಲೆಂದು ಶುಭ ಕೋರುವೆ ಎಂದಿದ್ದಾರೆ.

About the Author

ಸಮೀರ್ ಹಾದಿಮನಿ

ಸಮಾಜಸೇವೆ, ವೈದ್ಯಕೀಯ ಸೇವೆಯ ಜೊತೆಗೆ ಗುರುತಿಸಿಕೊಂಡಿರುವ ಸಮೀರ್ ಹಾದಿಮನಿ ಕಲೆ, ಸಾಹಿತ್ಯ, ಸಂಗೀತ ಕ್ಷೇತ್ರಗಳಲ್ಲೂ ಆಸಕ್ತಿಯನ್ನು ಹೊಂದಿದ್ದಾರೆ. ಕೃತಿಗಳು: ಉಪ್ಪು ನೀರಿನ ಸೆಲೆ ...

READ MORE

Related Books