ಸತ್ತ ಪ್ರೀತಿಯ ಅರಸುತ್ತಾ...

Author : ಸಿದ್ದರಾಮ ಕಲ್ಮಠ

Pages 56

₹ 75.00
Year of Publication: 2005
Published by: ರೋಶನಿ ಪ್ರಕಾಶನ
Address: ಪಾರ್ವತಿ ನಗರ, ಬಳ್ಳಾರಿ.583101

Synopsys

ಬಯಲು ಸೀಮೆಯ ಬಿರುಬಿಸಿಲ ನಾಡಿನಲ್ಲಿ ಸುಂದರವಾದ ಒಂದು ಹೂವರಳಿದಂತೆ ಯುವಕವಿ ಸಿದ್ದರಾಮ ಕಲ್ಮಠರ ಕವನಗಳು ಅರಳಿವೆ. ಇವರ ಎಲ್ಲ ಕವಿತೆಗಳು ಯಾವುದೋ ಒಂದು ಬಂಧ, ಪ್ರಕಾರಗಳಿಗೆ ಅಂಟಿಕೊಳ್ಳದೇ ಬದುಕಿನ ಎಲ್ಲ ಭಾವನೆಗಳಿಗೂ ತೆರೆದುಕೊಂಡಿವೆ. ಸಹಜತೆ ಹಾಗೂ ಸರಳತೆಯನ್ನು ಹೊಂದಿರುವ ಈ ಕವಿತೆಗಳ ಗುಚ್ಚದಲ್ಲಿ ಪ್ರೀತಿ, ನೋವು, ನಲಿವು, ದುಮ್ಮಾನ, ಅಚ್ಚರಿ, ಆಕ್ರೋಶ ಎಲ್ಲವೂ ಇವೆ. ಹೀಗಾಗಿಯೇ ಇಲ್ಲಿಯ ಕವಿತೆಗಳು ಒಂದೇ ಓದಿಗೆ ಮನಸೆಳೆಯುವಂತಿವೆ.

About the Author

ಸಿದ್ದರಾಮ ಕಲ್ಮಠ
(27 September 1984)

ಲೇಖಕ ಸಿದ್ದರಾಮ ಕಲ್ಮಠ ಅವರು 1984 ಸೆಪ್ಟೆಂಬರ್ 27ರಂದು ರಾಯಚೂರು ಜಿಲ್ಲೆಯ ರೌಡಕುಂದದಲ್ಲಿ ಜನಿಸಿದರು. ಪ್ರಸ್ತುತ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಬಳ್ಳಾರಿಯ ಪ್ರಜ್ಞೆ ಪ್ರತಿಷ್ಠಾನದ ಅಧ್ಯಕರಾಗಿದ್ದಾರೆ. ಇವರು ಬರೆದಿರುವ ಕಾವ್ಯವೆಂದರೆ  ಸತ್ತ ಪ್ರೀತಿಯ ಅರಸುತ್ತ. ...

READ MORE

Related Books