ಅಭ್ಯುದಯ

Author : ವಿ.ಕೃ. ಗೋಕಾಕ (ವಿನಾಯಕ)

Pages 129

₹ 1.00
Year of Publication: 1946
Published by: ಕರ್ನಾಟಕ ಸಂಘ
Address: ಕೊಪ್ಪಳ

Synopsys

ಕವಿ ವಿ.ಕೃ.ಗೋಕಾಕ (ವಿನಾಯಕ) ಅವರು ಬರೆದ ಕವನ ಸಂಕಲನ-ಅಭ್ಯುದಯ. ಕವಿಗಳು ಹೇಳುವಂತೆ ‘ಮೊದಲ 12 ಕವಿತೆಗಳು ಅಭ್ಯುದಯ  (ಪ್ರಗತಿಪರ) ಮಾದರಿಯವು. ಉಳಿದ 51 ಕವಿತೆಗಳು ಅಷ್ಟಷಟ್ಪದಿಯಲ್ಲಿವೆ. ಮೊದಲ ಕೆಲವು ಅಷ್ಟಷಟ್ಪದಿಗಳಲ್ಲಿ ವ್ಯಕ್ತಿ ಚಿತ್ರಗಳು ಹಾಗೂ ಕಲ್ಪನಾಚಿತ್ರಗಳೂ ಇವೆ. ಕೆಲವು ಕವಿತೆಗಳು ರೂಪಕ-ಸುನೀತಗಳು, ಮತ್ತೇ ಕೆಲವು ಮಾನವ ಸ್ವಭಾವದ ನಿರಂತರ ಅರಳಿಸಿ ತೋರುತ್ತವೆ. ಸನ್ನಿವೇಶ-ಸುನೀತಗಳು, ಸಂಭಾಷಣಾ ಸುನೀತಗಳು, ಹಾಸ-ಪರಿಹಾಸ-ವಿಡಂಬನೆಗಳು ಸೇರಿದಂತೆ ವಿವಿಧ ವಿಷಯಗಳು ಮುಸುಕುವ ಭಾವನಾ ಲಹರಿಗಳಾಗಿವೆ. ‘ಸಾನೆಟ್’ ಯಾವ ಭಾಷೆಯಿಂದ ಕನ್ನಡಕ್ಕೆ ಬಂದಿತೋ ಆ ಭಾಷೆಯ ಕವಿಗಳು ತಮ್ಮ ಸುನೀತಗಳನ್ನು ಅಲಂಕರಿಸಲು ರಚಿಸಿದ ಬೇರೆ ಬೇರೆ ಪ್ರಾಸ ಮಾಲಿಕೆಗಳ ರಚನೆಗಳನ್ನು ಕನ್ನಡಕ್ಕೆ ತಿರುಗಿಸಲು ಈ ಸುನೀತಗಳಲ್ಲಿ ಹವಣಿಸಿದ್ದೇನೆ. ಕೆಲವು ಸುನೀತಗಳು ಮಾನವ ಸ್ವಭಾವದ ಕೆಲವೊಂದು ನಿರಂತರ ಪ್ರಕಾರಗಳನ್ನು ಅರಳಿಸಿ ತೋರಿಸುತ್ತವೆ. ಇಲ್ಲಿರುವ  ಅಷ್ಟಷಟ್ಪದಿಗಳು ಬಹುತರವಾಗಿ ದೃಶ್ಯಾತ್ಮಕ ಇಲ್ಲವೇ ಸಂಭಾಷಣಾ ಸುನೀತಗಳಾಗಿವೆ’ ಎಂದು ಕವಿ ವಿನಾಯಕ ಅವರು ತಮ್ಮ ಮಾತುಗಳಲ್ಲಿ ಸ್ಪಷ್ಟಪಡಿಸಿದ್ದಾರೆ.

ಕೃತಿಗೆ ಮುನ್ನುಡಿ ಬರೆದಿರುವ ಕವಿ ವಿ. ಸೀ ಅವರು ‘ಎಷ್ಟೋ ವೇಳೆ ಪಾಶ್ಚಾತ್ಯರ ಸಾನೆಟ್ ಗಳ ಬರವಣಿಗೆ ನೆರವೇರಿಲ್ಲ. ನಮ್ಮಲ್ಲಿ ಈ ಸಾನೆಟ್ ಬರವಣಿಗೆ ಹಲವು ಮೇಧಾವಿಗಳಾದ ಕವಿಗಳ ಕೃತಿಗಳಲ್ಲಿ ರೂಪಗೊಳ್ಳುತ್ತಿದೆ. ಅಂತಹ ಪ್ರಯತ್ನಗಳಿಗೆ ಗೋಕಾಕರ ಈ ಎಪ್ಪತ್ತು ಸಾನೆಟ್ಟುಗಳು ಸಾಕ್ಷಿ. ಗಂಡು-ಹೆಣ್ಣುಗಳ ಸಾಮಾಜಿಕ ಹಾಗೂ ಆಂತರಂಗಿಕ ಸಮಸ್ಯೆಗಳು ಅಲ್ಲೆಲ್ಲ ಎಷ್ಟೋ ಬಗೆಯಲ್ಲಿ ಅವರ ಮನಸ್ಸು ಕಾದಿದೆ. ಕುದಿದಿದೆ. ಅದರ ಫಲಪಾಕವೆಲ್ಲ ಇಲ್ಲಿಯ ಕವಿತೆಗಳಿಗೆ ಇಳಿದಿದೆ. ಇಂಗ್ಲಿಷಿನಲ್ಲಿ ಅವರು ಓದಿದ ಛಂದೋ ರೀತಿ, ಕವಿತಾ ಮಾರ್ಗಗಳು, ಬಿಡಿ ವೃತ್ತ, ವಿಷಮ ವೃತ್ತಗಳು ನಮ್ಮ ವಚನ ಸಾಹಿತ್ಯದ ಲಯಗಳು ಅವರ ರಸಾಯನಗಳಲ್ಲಿ ಸೇರಿದ ರುಚಿಗಳು. ಒಳಗಿನವು, ಹೊರಗಿನವು, ಪರಕೀಯವಾದವು, ರಾಷ್ಟ್ರವಾದವು, ಅಂತರ್ ರಾಷ್ಟ್ರೀಯವಾದವು, ವ್ಯಕ್ತಿಗಳವು, ಸಮಷ್ಠಿಗಳವು-ಪ್ರಬಲಿಸಿವೆಯೋ ಆ ಎಲ್ಲದರ ಕಡೆ ಅವರ ಒಲವು-ಒಲೆತ ಹೇಗೆ ನಡೆದಿದೆ ಎಂಬುದರ ದರ್ಶನ ಅಲ್ಲಿ ಸೇರಿಕೊಂಡಿದೆ. ಹೀಗಾಗಿ, ಚುರುಕಾದ ಒಂದು ವಿಶೇಷ ಬಗೆಯ ಜೀವಚೈತನ್ಯ ಅವರ ಕವಿತೆಗಳಿಂದ ಎದ್ದು ಕಾಣುವುದು. ಇಲ್ಲಿಯ ಕವಿತೆಗಳು ಉಜ್ವಲ ಚೈತನ್ಯ ಪ್ರಕಾಶ, ಹೊಸ ಹೊಂಚನ್ನು ಹಾಕುತ್ತಿರುವ ಶ್ರಾವಣಾದಿಗಳ ಉತ್ಸಾಹ ಇವುಗಳಲ್ಲಿಯೂ ಅಷ್ಟ ಷಟ್ಪದಿಗಳಲ್ಲಿ ವರ್ಣಿತವಾಗಿರುವ ಪ್ರಕೃತಿ ಶಕ್ತಿ ಹಾಗೂ ವ್ಯಕ್ತಿಚಿತ್ರಗಳ ಶಕ್ತಿಸೌಂದರ್ಯಗಳಲ್ಲಿಯೂ ಗೋಕಾಕರ ಮನಸ್ಸು ಎಷ್ಟು ದೊಡ್ಡ ಲೋಕಹಿತಕ್ಕೂ, ಸೌಭಾಗ್ಯಕ್ಕೂ ಹಾತೊರೆಯುತ್ತವೆ. ಗೋಕಾಕರ ಸಾನೆಟ್ಟುಗಳ ರಚನಾಶಕ್ತಿಗೆ ನಾನು ಕೈಮುಗಿಯುತ್ತೇನೆ’  ಎಂದು ಪ್ರಶಂಸಿಸಿದ್ದಾರೆ.

About the Author

ವಿ.ಕೃ. ಗೋಕಾಕ (ವಿನಾಯಕ)
(09 August 1909 - 28 April 1992)

‘ವಿನಾಯಕ’ ಕಾವ್ಯನಾಮದಿಂದ ಕೃತಿಗಳ ರಚನೆ ಮಾಡಿರುವ ವಿನಾಯಕ ಕೃಷ್ಣ ಗೋಕಾಕ್ ಅವರು ಇಂಗ್ಲಿಷ್ ಮತ್ತು ಕನ್ನಡ ಸಾಹಿತ್ಯದಲ್ಲಿ ದೊಡ್ಡ ಹೆಸರು. ಕರ್ನಾಟಕದಿಂದ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಮೊದಲ ವ್ಯಕ್ತಿ ಗೋಕಾಕ್ ಅವರು. ಭಾರತದಲ್ಲಿಯೇ ಅತ್ಯಂತ ಪ್ರತಿಷ್ಠಿತ ಲೇಖಕ-ಸಾಹಿತಿ ಅವರಾಗಿದ್ದರು. ಧಾರವಾಡ ಜಿಲ್ಲೆಯ (ಈಗಿನ ಹಾವೇರಿ) ಸವಣೂರಿನಲ್ಲಿ 1909ರ ಆಗಸ್ಟ್ 9ರಂದು ಜನಿಸಿದರು. ತಂದೆ ಕೃಷ್ಣರಾಯ ತಾಯಿ ಸುಂದರಮ್ಮ. ಸವಣೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿ ಧಾರವಾಡದಲ್ಲಿ ಕರ್ನಾಟಕ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದು. ಪುಣೆಯ ಫರ್ಗ್ಯೂಸನ್  ಕಾಲೇಜಿನಲ್ಲಿ ಅನಂತರ ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ಉನ್ನತ ...

READ MORE

Related Books