ಜೀವಧ್ವನಿ

Author : ಚೆನ್ನವೀರ ಕಣವಿ

Pages 70

₹ 45.00




Published by: ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ
Address: ಸಂ. 9, ’ರಮ್ಯ’, ಗೋಕುಲಂ, 3ನೆಯ ಹಂತ, ಮೈಸೂರು
Phone: 2513821/9880749412

Synopsys

ಕಣವಿಯವರ ಕಾವ್ಯ ಧ್ವನಿಯೇ 'ಜೀವ ಧ್ವನಿ' ಆಗಿ ಮನ್ನಣೆ ಗಳಿಸಿದೆ. 1980ರಲ್ಲಿ ಮೊದಲ ಬಾರಿಗೆ ಪ್ರಕಟವಾಗಿದ್ದ ಈ ಸಂಕಲನದಲ್ಲಿ40 ಕವಿತೆಗಳಿವೆ. ಗ್ರಾಮೀಣ ಬದುಕಿನಿಂದ ಬಂದ ಕವಿ ಕಣವಿಯವರು ಹಳ್ಳಿಯ ಅನುಭವಗಳನ್ನು ಶಿಷ್ಟ ಭಾಷೆಯ ಕವಿತೆಗಳಲ್ಲಿ ದಾಖಲಿಸುತ್ತ ಬಂದಿದ್ದಾರೆ. ಗ್ರಾಮೀಣ ಬದುಕಿನ ವಿಕಾಸದಲ್ಲಿ ಆಸಕ್ತರಾಗಿರುವ ಕಣವಿ ಅವರಿಗೆ ಗ್ರಾಮೀಣ ಸಂಸ್ಕೃತಿಯಲ್ಲಿ ವಿಶೇಷ ಆಸಕ್ತಿ. ಬಡತನದ ಬವಣೆಯನ್ನು ದಾಖಲಿಸುವ ಕವಿ ಅದೇ ರೀತಿಯಲ್ಲಿ ಬಡತನಕ್ಕೆ ಕಾರಣ ಸೂಚಿಸುತ್ತಲೇ ಬಂಡಾಯದ ದನಿಯನ್ನೂ ಪ್ರಕಟಿಸುತ್ತಾರೆ.

ಬದುಕಿನಲ್ಲಿ ಇರುವ ವಿಷಾದ ಕವಿಗೆ ತಳಮಳ ಉಂಟು ಮಾಡದೇ ಇರಲಾರದು ಹಾಗೆಯೇ ಆ ಮಧ್ಯೆಯೂ ತಳೆಯುವ ಸಮಾಧಾನದ ನಿಲುವು ಕವಿತೆಗಳಲ್ಲಿ ದಾಖಲಾಗುವ ಪರಿ ಮೆಚ್ಚುಗೆಗೆ ಪಾತ್ರವಾಗದೇ ಇರದು. ಕಣವಿ ಅವರು ಕನ್ನಡನಾಡು ಒಂದಾಗಬೇಕೆಂದು ಹಂಬಲಿಸಿದವರು ಹಾಗೂ ಹಾಡಿದವರು. ಕರ್ನಾಟಕ ಏಕೀಕರಣವಾದ ನಂತರ ಕನ್ನಡ ಪ್ರಜ್ಞೆಯ ಕಳಕಳಿಯನ್ನು ತಮ್ಮ ಕವಿತೆಗಳಲ್ಲಿ ಪ್ರಕಟಿಸಿದ್ದಾರೆ. ಅಂತಹ ಕವಿತೆಗಳು ಈ ಸಂಕಲನದ ಭಾಗವಾಗಿವೆ.

About the Author

ಚೆನ್ನವೀರ ಕಣವಿ
(28 June 1928)

‘ಸಮನ್ವಯ ಕವಿ’ ಎಂದು ಗುರುತಿಸಲಾಗುವ ಚೆನ್ನವೀರ ಕಣವಿ ಅವರು ನವೋದಯ ಮತ್ತು ನವ್ಯ ಸಾಹಿತ್ಯಗಳೆರಡರಲ್ಲಿಯೂ ಸಕ್ರಿಯವಾಗಿ ಪಾಲುಗೊಂಡವರು. ಧಾರವಾಡ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ 1928ರ ಜೂನ್ 28ರಂದು ಜನಿಸಿದರು. ತಂದೆ ಸಕ್ರಪ್ಪ- ತಾಯಿ ಪಾರ್ವತವ್ವ. ಶಿರುಂಡ, ಗರಗಗಳಲ್ಲಿ ಪ್ರಾಥಮಿಕ ಅಭ್ಯಾಸ ಮುಗಿಸಿದ ಮೇಲೆ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ೧೯೫0ರಲ್ಲಿ ಬಿ.ಎ. ಪದವಿ (1950), ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ.ಪದವಿ (1952) ಗಳಿಸಿದರು. ಕರ್ನಾಟಕದ ವಿಶ್ವವಿದ್ಯಾನಿಲಯದ ಪ್ರಸಾರಾಂಗದಲ್ಲಿ ಕಾರ್ಯದರ್ಶಿ (1952) ಯಾಗಿ ಸೇವೆ ಪ್ರಾರಂಭಿಸಿದ ಕಣವಿ ಅವರು ಅನಂತರ 1958ರಲ್ಲಿ ಅದರ ನಿರ್ದೇಶಕರಾದರು. ಹಲವಾರು ಪ್ರಶಸ್ತಿಗಳು ಕಣವಿ ಅವರ ಸಾಹಿತ್ಯ ...

READ MORE

Awards & Recognitions

Related Books