ಐಸಿರಿಯ ಐನೂರು ಮಿನಿ ಕವಿತೆಗಳು

Author : ಕಾಶೀನಾಥ ಅಂಬಲಗೆ

Pages 116

₹ 100.00
Year of Publication: 2018
Published by: ಪ್ರಗತಿ ಪ್ರಕಾಶನ
Address: ಜಯನಗರ ವಿಶ್ವವಿದ್ಯಾಲಯ ರಸ್ತೆ, ಕಲಬುರ್ಗಿ- 595105
Phone: 9449619162

Synopsys

ಲೇಖಕ ಕಾಶಿನಾಥ ಅಂಬಲಗೆ ಅವರ ಮಿನಿ ಕವಿತೆಗಳ ಸಂಕಲನ ‘ಐಸಿರಿಯ ಐನೂರು ಮಿನಿ ಕವಿತೆಗಳು’. ಶಬ್ದಕ್ಕೆ ಮಾಂತ್ರಿಕ ಶಕ್ತಿ ಇದೆ. ಅದು 'ಇಬ್ಬನಿ'ಯಂತೆ. ಅದರಲ್ಲಿ ಇಡೀ ಸೂರ್ಯನನ್ನು ಸಾಕ್ಷಾತ್ಕರಿಸಿಕೊಳ್ಳುವ ಆಕರ್ಷಣೆ ಇದೆ. ಈ ಶಬ್ದಗಳ ತುಂಟಾಟದಲ್ಲಿಯೇ ಕಾವ್ಯದ ಕಟ್ಟಡವಿದೆ, ಮನೆ ಇದೆ. ಆ ಮನೆಯಲ್ಲಿ ನೆರಳಿದೆ, ರಕ್ಷಣೆ ಇದೆ, ವಿಶ್ವದಲ್ಲಿಯೇ ಅತ್ಯಂತ ಸುರಕ್ಷಿತ ಆಶ್ರಯ ಈ ಮನುಷ್ಯನಿಗೆ ಕಾವ್ಯದ ಮನೆಯಲ್ಲಿ ದೊರಕುತ್ತದೆ, ದೊರಕಿದೆ. ಹನಿಗವಿತೆ, ಮಿನಿಕವಿತೆ, ಚುಟುಕು, ಕುಟುಕು ಎಂಬಿತ್ಯಾದಿ ಹೆಸರಿನಿಂದ ಗುರುತಿಸಲ್ಪಡುವ ಕಾವ್ಯದ ಅತಿ ಸಣ್ಣ ಘಟಕ ಈ ಮಿನಿ ಕವಿತೆಗಳು. 'ಬೌದ್ದಿಕ ಚಮತ್ಕಾರದಿಂದಾಗಿ ಒಂದು ಚುಟುಕು ಖಾಯಂ ಆಗಿ ನಮ್ಮೊಳಗೆ ನೆಲೆಗೊಳ್ಳಬಹುದು. ಗಾದೆಯ ಮಾತಾಗಿ ನಿರಂತರ ಕಾಡಬಹುದು. ಇಂತಹ ಅನೇಕ ರಚನೆಗಳು ಕಾಶೀನಾಥ ಅಂಬಲಗೆ ಅವರ ಸಂಕಲನದಲ್ಲಿವೆ' ಎಂದು ನಾಡಿನ ಹಿರಿಯ ಕವಿ ಪ್ರೊ. ಚಂದ್ರಶೇಖರ ಪಾಟೀಲರು ಹೇಳುತ್ತಾರೆ.

ಡಿ. ಎಸ್. ನಾಗಭೂಷಣ ಅವರು - “ಅಂಬಲಗೆಯವರಲ್ಲಿ ಕವಿ ಇದ್ದಾನೆ ಎಂಬ ಸೂಚನೆ ನಮಗೆ ದೊರಕುವುದು ಅವರ ಸಣ್ಣ ಪದ್ಯಗಳಲ್ಲಿ ಎಂದು ಮಿನಿಕವಿತೆಗಳ ಕುರಿತು ಪ್ರತಿಕ್ರಿಯಿಸಿದ್ದಾರೆ.

About the Author

ಕಾಶೀನಾಥ ಅಂಬಲಗೆ
(10 July 1947)

ಕಾಶೀನಾಥ ಅಂಬಲಗೆ ಅವರು ಹುಟ್ಟಿದ್ದು 10-07-1947 ರಲ್ಲಿ. ಬೀದರ ಜಿಲ್ಲೆಯ, ಬಸವಕಲ್ಯಾಣ ತಾಲೂಕಿನ ಮುಚಳಂಬಿ ಎಂಬ ಗ್ರಾಮದಲ್ಲಿ. ಇವರ ತಂದೆ ರಾಚಪ್ಪ ಅಂಬಲಗೆ, ತಾಯಿ ಗುರಮ್ಮ ಅಂಬಲಗೆ. ಕನ್ನಡದಲ್ಲಿ ಎಂ.ಎ ಪದವಿ ಪಡೆದ ಅಂಬಲಗೆ ಹಿಂದಿ ಭಾಷೆಯಲ್ಲೂ ಎಂ.ಎ ಪದವಿ ಗಳಿಸಿದ್ದಾರೆ. ಬಿ.ಎಡ್ ಜೊತೆಗೆ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಪಿಎಚ್.ಡಿ ಪದವಿಯನಂತರ ಅಧ್ಯಾಪಕ ವೃತ್ತಿಯನ್ನು ಆಯ್ದುಕೊಂಡ ಅವರು ಮಹಾವಿದ್ಯಾಲಯದಲ್ಲಿ 21ವರ್ಷ, ವಿಶ್ವವಿದ್ಯಾಲಯದಲ್ಲಿ 12 ವರ್ಷ ಹಿಂದಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಜೊತೆಗೆ ಪಿಎಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿಯೂ ತೊಡಗಿಸಿಕೊಂಡಿದ್ದಾರೆ.  ಕವಿ, ಲೇಖಕ, ಸಾಹಿತಿ, ಕಾದಂಬರಿಗಾರರಾದ ಅಂಬಲಗೆ ಅನುವಾದಕರಾಗಿಯೂ ಪ್ರಸಿದ್ಧರು. ಜೊತೆಗೆ ...

READ MORE

Related Books