ರತಿಯ ಕಂಬನಿ

Author : ನಂದಿನಿ ವಿಶ್ವನಾಥ ಹೆದ್ದುರ್ಗ

Pages 168

₹ 150.00
Year of Publication: 2021
Published by: ವಿಕಾಸ ಪ್ರಕಾಶನ
Address: #1541, ಸಿರಿಗಮಧ, 16ನೆ ಮುಖ್ಯರಸ್ತೆ, ಎಂ.ಸಿ ಲೇಔಟ್, ವಿಜಯನಗರ, ಬೆಂಗಳೂರು -40
Phone: 9900095204

Synopsys

ಕವಿ ನಂದಿನಿ ಹೆದ್ದುರ್ಗ ಅವರ ಕವನ ಸಂಕಲನ ‘ರತಿಯ ಕಂಬನಿ’. ಈ ಸಂಕಲನಕ್ಕೆ ಕವಿ ಲಲಿತಾ ಸಿದ್ದಬಸವಯ್ಯನವರು ಮುನ್ನುಡಿ ಬರೆದಿದ್ದು, ‘ಹೇಳಬೇಕಾದುದರ ಬಗ್ಗೆ ಖಚಿತತೆ, ಸ್ಪಷ್ಟವಾಗಿ ಹೇಳುವ ಪ್ರಾಮಾಣಿಕತೆ, ಪುನರಾವರ್ತಿತವಾಗುವ ಒಬ್ಬಳೇ ಕಾವ್ಯನಾಯಕಿಯನ್ನು ಪ್ರತಿಸಲವೂ ಹೊಸಬಳಂತೆ ಚಿತ್ರಿಸುವ ಪ್ರತಿಭೆ, ಪ್ರತಿ ಕವನದಲ್ಲೂ ವಸ್ತುಗೆ ಪೂರಕವಾಗುವಂತೆ ಪ್ರತಿಮೆಗಳನ್ನು ಅನಾಯಾಸ ಸೃಜಿಸಬಲ್ಲ ಭಾಷಾಶಕ್ತಿ ಇವು ನಂದಿನಿಯವರ ಆಸ್ತಿ’ ಎಂದಿದ್ದಾರೆ. ಸಾಹಿತಿ ಜೋಗಿ ಬೆನ್ನುಡಿಯಲ್ಲಿ ಬರೆದಿರುವಂತೆ, ‘ ಪ್ರೇಮ, ವಿರಹ, ವ್ಯಾಮೋಹ ಮತ್ತು ಕಾಮದ ಕುರಿತು ಬರೆದಿರುವುದು ಸಾಧ್ಯವೇ ಇಲ್ಲ ಎಂಬಂತಹ ಕಾವ್ಯ ಪರಿಸರದಲ್ಲಿ, ನಂದಿನಿ ಹೆದ್ದುರ್ಗ ಬರೆದಿರುವ ಕವಿತೆಗಳು ಗಂಡುಹೆಣ್ಣಿನ ಸಂಬಂಧದ ಸಂಕೀರ್ಣತೆಯನ್ನು ಕಟ್ಟಿಕೊಡುತ್ತವೆ. ಕನ್ನಡದ ಮಟ್ಟಿಗೆ ಪ್ರೇಮವನ್ನು ಮತ್ತೊಂದು ಎತ್ತರಕ್ಕೆ ಒಯ್ದಿರುವ ಕವಿತೆಗಳು ಈ ಸಂಕಲನದಲ್ಲಿವೆ’ ಎಂಬುದಾಗಿ ತಿಳಿಸಿದ್ದಾರೆ.

About the Author

ನಂದಿನಿ ವಿಶ್ವನಾಥ ಹೆದ್ದುರ್ಗ
(13 May 1975)

ಸಕಲೇಶಪುರದ ಹೆದ್ದುರ್ಗದ ಕಾಫೀ ಬೆಳೆಗಾರ್ತಿ ನಂದಿನಿ ಹೆದ್ದುರ್ಗ ಅವರು ಕೃಷಿಕ ಮಹಿಳೆ. ತಮ್ಮ 16 ನೇ ವಯಸ್ಸಿನಲ್ಲಿಯೇ ಮದುವೆಯಾಗಿ ಬದುಕಿನ ಸುಖ ದುಃಖಗಳನ್ನು ಕಂಡುಂಡವರು. ಕಳೆದ ಕೆಲವು ವರ್ಷಗಳಿಂದ ಕಾವ್ಯ ರಚನೆಯ ಮೂಲಕ ಕಾವ್ಯ ಲೋಕ ಪ್ರವೇಶಿಸಿದ್ದಾರೆ. ಅವರ ಎರಡು ಸಂಕಲನಗಳು ಪ್ರಕಟವಾಗಿವೆ. ಪ್ರೀತಿ ಪ್ರೇಮಗಳೇ ಇವರ ಕಾವ್ಯದ ಪ್ರಮುಖ ವಸ್ತು. ನಿರ್ಭಿಡೆಯಿಂದ ಹೆಣ್ಣಿನ ಅಂತರಂಗದ ಭಾವನೆಗಳನ್ನು ತಮ್ಮ ಕವಿತೆಗಳಲ್ಲಿ ಹೊರ ಹಾಕುವ ನಂದಿನಿ ಅವರು ಯಾವುದೇ ಮುಲಾಜಿಲ್ಲದೇ ಅಭಿವ್ಯಕ್ತಿಸುವುದು ವಿಶೇಷ.   ...

READ MORE

Related Books