ಚೈತ್ರಾಕ್ಷಿ

Author : ಕೀರ್ತಿ ಪಿ. (ಸೂರ್ಯ ಕೀರ್ತಿ)

Pages 88

₹ 120.00
Year of Publication: 2017
Published by: ಮಿಂಚುಳ್ಳಿ ಪ್ರಕಾಶನ
Address: ಇಂದಿರಾ ಬಡಾವಣೆ, 6ನೇ ತಿರುವು, ಗುರುಪುರ, ಶಿವಮೊಗ್ಗ-577204
Phone: 9591367320

Synopsys

ಕೀರ್ತಿ ಪಿ. ಅವರ ಮೊದಲ ಕವನ ಸಂಕಲನ ಚೈತ್ರಾಕ್ಷಿ. ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಇವರ ಧನಸಹಾಯ ಪಡೆದ ಕೃತಿ ಇದಾಗಿದೆ. ಚೈತ್ರಾಕ್ಷಿಗೆ 2018ನೇ ಸಾಲಿನ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ‘ಸುಮನ್ ಸೋಮಶೇಖರ ಸೋಮವಾರಪೇಟೆ’ದತ್ತಿ ಪ್ರಶಸ್ತಿ ಲಭಿಸಿದೆ. 

ಕಾವ್ಯದ ಸಮಸ್ತ ಪ್ರಕಾರಗಳನ್ನು ತಮ್ಮ ಕವಿತೆಗಳಲ್ಲಿ ಬಳಸಲು ಯತ್ನಿಸಿರುವುದು ಕೀರ್ತಿ ಅವರ ಕಾವ್ಯಪ್ರತಿಭೆಗೆ ಸಾಕ್ಷಿ ಎನ್ನುತ್ತಾರೆ ಡಾ.ಸರಜೂ ಕಾಟ್ಕರ್. ಬೆನ್ನುಡಿ ಬರೆದಿರುವ ಸರಜೂ ಕಾಟ್ಕರ್ ಅವರು ಚೈತ್ರಾಕ್ಷಿ ಮತ್ತು ಕವಿ ಕೀರ್ತಿಯವರ ಬಗ್ಗೆ ಭರವಸೆಯ ಮಾತುಗಳನ್ನಾಡುತ್ತಾರೆ. ಸೃಷ್ಟಿ ಹಾಗೂ ನಿಖರವಾದ ವಿಚಾರಗಳಿಗೆ ಕಾವ್ಯ ಒಂದು ರೀತಿಯಲ್ಲಿ ಪ್ರತಿಭಟನೆಯ ಅಸ್ತ್ರವಾಗಿದೆ ಎಂಬುದು ಅವರ ಅಭಿಪ್ರಾಯ. ಇನ್ನು ಕೀರ್ತಿ ಅವರ ಕವಿತೆಗಳಲ್ಲಿ ವಸ್ತು ವೈವಿಧ್ಯವಿದೆ. ಅಭಿವ್ಯಕ್ತಿಯಲ್ಲಿ ಪ್ರಾಮಾಣಿಕತೆ ಇದೆ ಎನ್ನುತ್ತಾರೆ ಲೇಖಕಿ ಎಂ.ಆರ್. ಕಮಲಾ. ನಿಸರ್ಗ ರಮ್ಯತೆಯ ಬಗ್ಗೆ ರುಚಿಯಿದೆ. ಭಾಷೆಯಲ್ಲಿ ಭಾವಗೀತಾತ್ಮಕ ಗುಣವಿದೆ. ಕತ್ತಲನ್ನು ಒಪ್ಪಿಕೊಂಡೇ ಬೆಳಕಿನ ಬಟ್ಟೆಯನ್ನು ಕವಿತೆಗಳು ಅರಸುತ್ತವೆ. ಪ್ರತೀ ಕವಿತೆಯಲ್ಲೂ ಹೊಸತನಕ್ಕಾಗಿ ತುಡಿವ ಕೀರ್ತಿ ಅವರು ಸಾಹಿತ್ಯದ ಹಲವು ಮಜಲುಗಳಲ್ಲಿ ಕೃಷಿ ಮಾಡುತ್ತಿದ್ದಾರೆ. 

About the Author

ಕೀರ್ತಿ ಪಿ. (ಸೂರ್ಯ ಕೀರ್ತಿ)
(29 January 1994)

ಕೀರ್ತಿ ಪಿ. ಅವರು ಮೂಲತಃ ತುಮಕೂರಿನವರು. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಬೆಟ್ಟಹಳ್ಳಿ ಅವರ ಹುಟ್ಟೂರು.  'ಸೂರ್ಯಕೀರ್ತಿ' ಎನ್ನುವ  ಕಾವ್ಯನಾಮದ ಮೂಲಕ ಬರವಣಿಗೆಯಲ್ಲಿ ತೊಡಗಿರುವ ಕೀರ್ತಿ, ಕನ್ನಡದ ಭರವಸೆಯ ಕವಿ. ಗ್ರಾಮೀಣ ಬದುಕಿನ ವಿಸ್ತಾರಗಳನ್ನುಅವರ ಬರಹಗಳಲ್ಲಿ ಕಾಣಬಹುದು. ಬೆಂಗಳೂರು ವಿಶ್ವವಿದ್ಯಾಲಯದಿಂದ ವಾಣಿಜ್ಯಶಾಸ್ತ್ರದಲ್ಲಿ  ಸ್ನಾತಕೋತ್ತರ ಪದವಿಯನ್ನು ( ಎಂ.ಕಾಂ) ಉನ್ನತ ಶ್ರೇಣಿಯಲ್ಲಿ ಪಡೆದಿರುವ ಕೀರ್ತಿ, ಸಾಹಿತ್ಯದ ಆಸಕ್ತಿಯಿಂದ ಈಗ ಕನ್ನಡ ಎಂ.ಎ ಓದುತ್ತಿದ್ದಾರೆ. ಜೊತೆಗೆ ಹಲವು ರಾಷ್ಟ್ರೀಯ ಮತ್ತು ಅಂತರ  ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರೆ.  2017 ನೇ ಸಾಲಿನಲ್ಲಿ ಕರ್ನಾಟಕ ಸರಕಾರ, ಕನ್ನಡ ಪುಸ್ತಕ ಪ್ರಾಧಿಕಾರದಿಂದ " ಚೈತ್ರಾಕ್ಷಿ" ಎಂಬ ಕವಿತಾ ಸಂಕಲನ ಧನ ...

READ MORE

Related Books