ಬುದ್ಧ ಚರಿತೆ-ಖಂಡ ಕಾವ್ಯ

Author : ಎಚ್.ಎಸ್. ಅನುಪಮಾ

Pages 122

₹ 90.00
Year of Publication: 2016
Published by: ಲಡಾಯಿ ಪ್ರಕಾಶನ
Address: #21, ಪ್ರಸಾದ್ ಹೋಟೆಲ್, ಗದಗ- 582101
Phone: 9480286844

Synopsys

ಲೇಖಕಿ ಡಾ.ಎಚ್.ಎಸ್. ಅನುಪಮಾ ಅವರ ಖಂಡಕಾವ್ಯ ‘ಬುದ್ಧ ಚರಿತೆ’. ಈ ಕೃತಿಗೆ ಮೂಡ್ನಾಕೂಡು ಚಿನ್ನಸ್ವಾಮಿ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ..ಕಳೆದೆರಡು ದಶಕದಿಂದೀಚೆಗೆ ಕರ್ನಾಟಕ ಮತ್ತು ದೇಶದಲ್ಲಿ ಬುದ್ಧ ತಳಸಮುದಾಯಗಳಲ್ಲಿ ಸಾಂಸ್ಕೃತಿಕ ಎಚ್ಚರವನ್ನು ಉಂಟುಮಾಡುತ್ತಿದ್ದಾನೆ ಎಂಬುದು ತಿಳಿದ ವಿಷಯವೇ ಆಗಿದೆ. ದುಡಿಯುವ ವರ್ಗದ ಆ ಜನರಿಗೆ ಬುದ್ಧನನ್ನು ಅರ್ಥ ಮಾಡಿಸುವುದು ಹೇಗೆ? ಈ ದೇವರಲ್ಲದ ದೇವರನ್ನು ತಿಳಿಯುವ ಬಗೆ ಹೇಗೆ..ಎಂಬುದೇ ಸಂಸ್ಕೃತಿ ಚಿಂತಕರ ಸಮಸ್ಯೆಯಾಗಿದೆ. ಧರ್ಮವೆಂಬ ಸಾಂಸ್ಥಿಕ ಚೌಕಟ್ಟಿನ ಒಳಗಡೆ ಚೀವರ(ಕಾವಿ ಹೊದಿಕೆ) ಧರಿಸುವ ಭಂತೇಜಿಯವರ ಭಾಷೆಯನ್ನು ಒಮ್ಮೆಲೆ ಗ್ರಹಿಸುವುದು ಕಷ್ಟಸಾಧ್ಯ. ಅದಕ್ಕೆ ಸಾಂಸ್ಕೃತಿಕ ದನಿಯೊಂದರ ಅಗತ್ಯವಿದೆ. ಅದನ್ನು ಕಾವ್ಯ, ನಾಟಕ, ಮುಂತಾದವು ಪೂರೈಸಬಲ್ಲವು. ಈ ದೃಷ್ಟಿಯಲ್ಲಿ ನೋಡಿದಾಗ ಬುದ್ಧ ಚರಿತೆ ನಿರಾಳ ಓದಿಸಿಕೊಳ್ಳುವ ಕೃತಿ. ತಿಳಿಯಾಗಿ ಒಳಗಿಳಿಯುವ ಕೃತಿ ಎಂದಿದ್ದಾರೆ ಮೂಡ್ನಾಕೂಡು ಚಿನ್ನಸ್ವಾಮಿ. ಹಾಗೇ ಕಾಡನ್ನು ಇವರು ಅಳವಡಿಸಿಕೊಂಡಿರುವ ಕಥನ ಕ್ರಮವೂ ಆಕರ್ಷಕವಾಗಿದೆ. ಸದಾ ಜುಂಯ್ಜ್ಞ್ ಗುಡುವ ಜೀರುಂಡೆಗೆ ಕಛೆ ಹೇಳುತ್ತಾರೆ. ಅದರ ಸದ್ದು ನಿಲ್ಲಿಸಿ ಆಥ್ಮ ನಿರೀಕ್ಷೆಗೆ ಹಚ್ಚುತ್ತಾರೆ. ಅದು ಓದುಗರ ಅನುಭವವೂ ಆಗಬಲ್ಲದು. ಬಹಳ ಮುಖ್ಯವಾಗಿ ಗಮನಿಸಬೇಕಾದ ಅಂಶವೇನೆಂದರೆ ಅನುಪಮಾ, ಸಿದ್ಧಾರ್ಥ ಗೌತಮನ ಅಭಿನಿಷ್ಕ್ರಮಣವನ್ನು ಕುರಿತಾದ ತಥಾಕಥಿಕ ಮಾದರಿಯಿಂದ ಹೊರಗೆ ಬಂದು ಬಾಬಾ ಸಾಹೇಬ್ ಅಂಬೇಡ್ಕರರ ಮಾರ್ಗವನ್ನು ಅನುಸರಿಸಿರುವುದು ಎಂದು ಮೆಚ್ಚುಗೆ ಸೂಚಿಸಿದ್ದಾರೆ.

About the Author

ಎಚ್.ಎಸ್. ಅನುಪಮಾ

ಲೇಖಕಿ, ಕವಯತ್ರಿ ಎಚ್.ಎಸ್.ಅನುಪಮಾ ಅವರು ವೃತ್ತಿಯಲ್ಲಿ ವೈದ್ಯೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕವಲಕ್ಕಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃತ್ತಿಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಅವರು ಕಾಡುಹಕ್ಕಿಯ ಹಾಡು, ಸಹಗಮನ, ಬುದ್ಧ ಚರಿತೆ (ಖಂಡ ಕಾವ್ಯ), ನೆಗೆವ ಪಾದದ ಜಿಗಿತ, ಸಬರಮತಿ- ನೀಳ್ಗವಿತೆ ಎಂಬ ಐದು ಕವನ ಸಂಕಲನಗಳು, ಹೂವರಳಿದ್ದಕ್ಕೆ ಯಾಕೆ ಸಾಕ್ಷಿ?, ಚಿವುಟಿದಷ್ಟೂ ಚಿಗುರು, ಕೋವಿಡ್: ಡಾಕ್ಟರ್ ಡೈರಿ - ಗ್ರಾಮಭಾರತದ ಕಥೆಗಳು  ಎಂಬ ಮೂರು ಕಥಾಸಂಕಲನಗಳು, ಡಾ. ಬಾಬಾಸಾಹೇಬ್ ಅಂಬೇಡ್ಕರ್ – ಕಿರು ಜೀವನ ಚರಿತ್ರೆ , ಮೋಚಕನ ಹೆಜ್ಜೆಗಳು - ಡಾ. ...

READ MORE

Related Books