ಏಕಾಂಗಿಯ ಕನವರಿಕೆಗಳು

Author : ಜಬೀವುಲ್ಲಾ ಎಂ. ಅಸದ್

Pages 170

₹ 150.00
Year of Publication: 2015
Published by: ಸಿ ವಿ ಜಿ ಇಂಡಿಯಾ ಪಬ್ಲಿಕೇಷನ್ಸ್
Address: ಬೆಂಗಳೂರು.
Phone: 9740556305

Synopsys

ಜಬೀವುಲ್ಲಾ ಎಂ. ಅಸದ್ ಅವರ ಕವನಸಂಕಲನ ‘ಏಕಾಂಗಿಯ ಕನವರಿಕೆಗಳು’. ಡಾ. ಲೋಕೇಶ ಅಗಸನಕಟ್ಟೆ ಅವರು ಈ ಸಂಕಲನಕ್ಕೆ ಮುನ್ನುಡಿ ಬರೆದಿದ್ದು, ‘ಪ್ರೇಮವು ಹದಿಹರೆಯದಲ್ಲಿ ಸಂಭವಿಸುವ ಒಂದು ಅವಸ್ಥೆಯಂತೆ, ಅದು ಕೈಗೆಟುಕದ ನಿಧಿಯಂತೆ - ಎಂಬಂತೆ ಭಾವಿಸಿ, ಪ್ರಲಾಪಿಸಿ ಕವಿತೆಗಳನ್ನು ಬರೆಯುವವರ ನಡುವೆ ಜಬೀವುಲ್ಲಾ ಅವರ ಕವಿತೆಗಳು ನವಿರಾದ ಭಾವಭಿವ್ಯಕ್ತಿಯಾಗಿ ಸಣ್ಣ ಹಣತೆಯೊಂದು ಉರಿದಂತೆ ಉರಿಯುತ್ತವೆ. ತುಡಿತ, ತಲ್ಲಣ, ಬದುಕಿನ ಯಾತನೆ, ಜೀವನ ಪ್ರೀತಿಯ ಹೃದಯ ಸಂವಾದವನ್ನು, ಭಾವಸ್ಪಂದನವನ್ನು ಹಿಡಿದಿಡುವ ಪರಿಯ, ಕಾವ್ಯದ ಪರಿಮಳ ಚೆಲ್ಲಿದ ಹಾದಿಯ ಪಯಣದ ನಡುವೆ, ಇಕ್ಕೆಲದಲ್ಲಿ ತೆಂಗು, ಕಂಗುಗಳ ಸಾಲಿನ ನಡುವೆ ನಡೆದು ಬಕುಲದ ಹೂವನ್ನು ಅರಸುವ ತವಕ ಬೀಜವಾಗುವ, ಉಳಿದದ್ದೆಲ್ಲ ಪಲ್ಲವಿಸುವ, ಹಂಬಲಿಸುವ, ರೋಧಿಸುವ, ಯಾತನಾಮಯ ಆದರೂ ಆಪ್ತವಾಗುವ ಇಲ್ಲಿನ ೧೮೩ ಕವಿತೆಗಳಲ್ಲಿ ಒಂದು ಸಾತತ್ಯತೆ ಇದೆ. ಅದೇ ಈ ಸಂಕಲನದ ವಿಶೇಷ. ಪ್ರೇಮದ ಚರಿತ್ರೆ ಹಾಗೂ ಅದರ ನಾನಾ ಮಗ್ಗುಲುಗಳನ್ನು ಕಾಣುವ ತುಡಿತ ತೀವ್ರವಾಗಿ ಪ್ರಕವಾಗಿದೆ. ಭಾವ ತೀವ್ರತೆಯಿಂದ ಕವಿತೆಗಳು ಭಾಷೆಯಲ್ಲಿ ಕಾವ್ಯಾತ್ಮಕ ಪರಿವೇಷ ತೊಟ್ಟು ಸಹ್ಯವಾಗುವಂತಾ ರಚನೆಗಳಾಗಿವೆ. ಜಬೀವುಲ್ಲಾ ತನ್ನಂತರಂಗದ ಪಿಸುಮಾತಿಗೆ ದನಿಯಾದಾಗಲೆಲ್ಲಾ ಉತ್ತಮ ಕವಿತೆಗಳು ಮೂಡುತ್ತವೆ ಎನ್ನುವುದಕ್ಕೆ ಈ ಸಂಕಲನದ ಅನೇಕ ಕವಿತೆಗಳು ಸಾಕ್ಷಿ. ಸಂತೆಯ ಗದ್ದಲದ ನಡುವೆ ನಿಂತಿರುವ ಕವಿ ಸಂತೆಯ ಮರೆತು ತನ್ನೊಳಗಿನ ದನಿಗೆ ಕಿವಿಯಾಗಿ, ಅದು ಮಾತಾಗಬೇಕು. ಇದು ಕಷ್ಟದ ಹಾದಿಯನ್ನು ಹಿಡಿದಿರುವ ಕವಿ ಕಷ್ಟವನ್ನು ಸಹ ಒಂದು ತಪವಾಗಿ, ಧ್ಯಾನವಾಗಿ ಸ್ವೀಕರಿಸಲೇ ಬೇಕು. ನವಿರಾದ ಭಾಷೆಯನ್ನು, ನುಡಿಗಟ್ಟನ್ನು, ಉಪಮೆ, ರೂಪಕಗಳನ್ನು ಸಮರ್ಥವಾಗಿ ಬಳಸುವುದರ ಮುಖಾಂತರ ಸಾಹಿತ್ಯ ಲೋಕದಲ್ಲಿ ಮೊದಲ ಹೆಜ್ಜೆ ಇಡಲು ಸಿದ್ಧವಾಗಿದ್ದಾರೆ ಎನ್ನಬಹುದು....’ ಎಂದಿದ್ದಾರೆ.

About the Author

ಜಬೀವುಲ್ಲಾ ಎಂ. ಅಸದ್

ಕವಿ ಜಬೀವುಲ್ಲಾ ಎಂ. ಅಸದ್ ರವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರಿನವರು. ತಂದೆ ಮಹಮ್ಮದ್ ಬಾಷ,ತಾಯಿ ಪ್ಯಾರಿ ಜಾನ್. ಪದವಿಪೂರ್ವವರೆಗಿನ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿಯೇ ಮುಗಿಸಿ, ನಂತರ ಪದವಿ ಶಿಕ್ಷಣವನ್ನು ಜಿಲ್ಲಾಕೇಂದ್ರವಾದ ಚಿತ್ರದುರ್ಗ ದಲ್ಲಿ ಆಂಗ್ಲ ಸಾಹಿತ್ಯವನ್ನು ಐಚ್ಛಿಕ ವಿಷಯವಾಗಿ ಅಧ್ಯಾನಿಸಿ ನಂತರ ಹೊಸ ವೈದ್ಯಕೀಯ ವಿಷಯಗಳೆಡೆಗೆ ಆಸಕ್ತಿ ಹರಿದು, ಬಳ್ಳಾರಿಯಲ್ಲಿ ಡಿಪ್ಲೊಮಾ ಇನ್ ಜನರಲ್ ನರ್ಸಿಂಗ್ ಮಿಡ್ವೈಫ್ರಿ ಮುಗಿಸಿ, ಅಲ್ಲಿಯೇ ಕೆಲವು ವರ್ಷಗಳ ಕಾಲ ಸಹಾಯಕ ಶಸ್ತ್ರಚಿಕಿತ್ಸಕನಾಗಿ ಕಾರ್ಯನಿರ್ವಹಿಸಿ ರಾಜಧಾನಿ ಬೆಂಗಳೂರಿನಲ್ಲಿ ಕರುಣಾ ಟ್ರಸ್ಟ್ ಎಂಬ ವೈದ್ಯಕೀಯ NGO ನಲ್ಲಿ ಕಳೆದ ಆರು ವರುಷಗಳಿಂದ ತಮ್ಮ ...

READ MORE

Related Books