ಜುಗಲ್ ಬಂದಿ ಕವಿತೆಗಳು

Author : ಶರಣು ಹುಲ್ಲೂರು

Pages 74

₹ 70.00




Year of Publication: 2006
Published by: ಚಿತ್ತಾರ ಪಬ್ಲಿಕೇಷನ್ಸ್
Address: ಇನ್ ಮಿಡಿಯಾ ನೆಟ್ ವರ್ಕ್ಸ್, ನಂ. 216, 1ನೇ ಮಹಡಿ, 5ನೇ ಮುಖ್ಯರಸ್ತೆ, ಹಂಪಿನಗರ, ಆರ್. ಪಿ. ಸಿ ಲೇ ಜೌಟ್, ವಿಜಯನಗರ 2ನೇ ಹಂತ, ಬೆಂಗಳೂರು -560104
Phone: 080 40902312

Synopsys

ಕವಯತ್ರಿ ಪಿ. ಚಂದ್ರಿಕಾ ಮತ್ತು ಶರಣು ಹುಲ್ಲೂರು ಅವರು ಬರೆದ ’ ಜುಗಲ್ ಬಂದಿ ಕವಿತೆಗಳು’ ಪದ್ಯಕ್ಕೆ ಪದ್ಯ ಸಂವಾದಿಯಾಗುವ ಕಾವ್ಯ ರಚನೆಗಳು. ಅರ್ಧ ಉಂಡು ಎದ್ದವಳಿಗೆ ಎನ್ನುವ ಶರಣು ಅವರ ಕವಿತೆಗೆ ಸಂವಾದಿಯಾಗಿ ಅರ್ಧ ಉಂಡಿದ್ದು ಯಾಕೆ ಗೊತ್ತಾ? ಎನ್ನುವ ಚಂದ್ರಿಕಾ ಅವರ ಮರುಪ್ರಶ್ನೋತ್ತರಗಳ ರಚನೆ ಅಪರೂಪವಾಗಿವೆ.

ಪ್ರೀತಿ ಎಂಬ ಮಾಯೆ , ಹೇಗೆ ಕರೆಯಲಿ ಪ್ರೀತಿಯ ಮಾಯೆಯೆಂದು , ಕೇಳಬೇಕೆನಿಸದ್ದು ನನಗೂ ಕೇಳಬೇಕೆನಿಸಿದೆ ಎನ್ನುವ ಹಲವಾರು ಸಂವಾದಿ ಕವಿತೆಗಳು ಕವಿ ಶರಣು ಮತ್ತು ಚಂದ್ರಿಕಾ ಅವರ ರಚನೆಗಳಲ್ಲಿ ಜುಗಲ್ ಬಂದಿಯಾಗಿ ಸೇರಿ ’ ಜುಗಲ್ ಬಂದಿ ಕವಿತೆಗಳು’ ಓದುಗರ ಕೈ ಸೇರಿದೆ.

About the Author

ಶರಣು ಹುಲ್ಲೂರು

ವೃತ್ತಿಯಿಂದ ಪತ್ರಕರ್ತರಾಗಿರುವ ಡಾ. ಶರಣು ಹುಲ್ಲೂರು ಹುಟ್ಟಿದ್ದು ಗದಗ ಜಿಲ್ಲೆ ರೋಣ ತಾಲೂಕಿನ ಹುಲ್ಲೂರು ಗ್ರಾಮದಲ್ಲಿ. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ ಪದವಿ ಪಡೆದಿರುವ ಅವರು ವಿಜಯ ಕರ್ನಾಟಕ ಪತ್ರಿಕಾ ಬಳಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.  'ತಪ್ಪು ಮಾಡಿದ ತಾತ', 'ಮುಂದಿರುವ ಮೌನ', 'ಜುಗಲ್ಬಂದಿ' ಎಂಬ ಕವನ ಸಂಕಲನಗಳನ್ನು, ’ಚಂದನ ಸಿಂಚನ’ ಎಂಬ ಬಿ.ಜೆ.ಅಣ್ಣಿಗೇರಿ ಅವರ ಜೀವನ ಚರಿತ್ರೆಯನ್ನು,  ’ಮಲ್ಲಿಗೆ’, ’ಕನಸಿನ ಹುಡುಗ’ ನಾಟಕವನ್ನು ರಚಿಸಿದ್ದಾರೆ. ತಕಧಿಮಿಕಾ, ಮುಂಗಾರಿನ ಕನಸು ಕಾರ್ತೀಕ ದೀಪ, ಬದುಕು, ಮದರಂಗಿ ಮುಂತಾದ ಧಾರಾವಾಹಿಗಳಿಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ರಚಿಸಿದ್ದಾರೆ. ಕಾರ್ಯನಿರತ ಪತ್ರಕರ್ತರ ಸಂಘದ 'ಅತ್ಯುತ್ತಮ ...

READ MORE

Related Books