ಈ ಶಬ್ದ

Author : ತೇರಳಿ ಎನ್. ಶೇಖರ್

Pages 92

₹ 60.00
Year of Publication: 2008
Published by: ಮೇಘ ಪಬ್ಲಿಕೇಷನ್ಸ್
Address: ಸೈಟ್ ನಂ 419, ಡಿ.ನಂ.119, 4ನೇ ತಿರುವು, ರಾಜ್ ಗೋಪಾಲ್ ನಗರ್, ಬೆಂಗಳೂರು- 560058

Synopsys

‘ಈ ಶಬ್ದ’ ಲೇಖಕ, ಅನುವಾದಕ ತೇರ್ ಳಿ ಎನ್.ಶೇಖರ್ ಅವರ ಮೊದಲ ಕವನ ಸಂಕಲನ. ಈ ಕೃತಿಗೆ ಶ್ರೀಧರ ಪಿಸ್ಸೆ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ.. ‘ಅನುಭವದ ತಳವನ್ನು ಬಿಸಿಲು ಕೋಲಿನ ಹಾಗೆ ಶಬ್ದಗಳ ಮೂಲಕ ಸಮರ್ಥವಾಗಿ ಕಾಣಿಸುವ ತೇರಳಿ ಎನ್. ಶೇಖರ್ ತಮ್ಮ ಬಿಡಿ ರಚನೆಗಳ ಮೂಲಕ ಈಗಾಗಲೇ ಕನ್ನಡದ ಕಾವ್ಯಾಸಕ್ತರಿಗೆ ಪರಿಚಿತವಿರುವ ಕವಿ. ಏಕಕಾಲಕ್ಕೆ ಮಲಯಾಳಿಯೂ, ಕನ್ನಡಿಗರೂ ಆಗಿರುವ ಇವರು ಎರಡೂ ಭಾಷೆಯ ಸಂವೇದನೆಯನ್ನು ಕಡೆದು ಹೊಸ ಕಾವ್ಯ ರಚಿಸಿದ್ದಾರೆ.

ಕವಿತೆ ಕಟ್ಟುವಲ್ಲಿ ಇವರು ಅಳವಡಿಸಿಕೊಂಡಿರುವ ವಿಧಾನ, ಸಾಧಿಸಿರುವ ಶೈಲಿ ಹೊಸಬಗೆಯದಾಗಿ ಒಡೆದು ಕಾಣುತ್ತದೆ’ ಎಂದಿದ್ದಾರೆ. ಜೀವನದ ನಿತಾಂತ ತಾಣವನ್ನರಸಿ ಮನದ ಚಿತ್ತಾರ ಬಿಡಿಸಿಟ್ಟಿರುವ ಆಮೆ, ಎಲ್ಲೋ ಇದ್ದೀಯಾ ನೀನು, ನವಿಲು ಗರಿ, ಬೆಕ್ಕು, ಉಪ್ಪು, ಹಳೆಯ ಸಾಮಾನು, ಮರ ಬರಡಾದಾಗ, ಮುಂತಾದ ಕವಿತೆಗಳು ಒಂದು ಬಗೆಯಲ್ಲಿ ಅನುಭಾವಿಕ ನೆಲೆಗೇರುತ್ತವೆ. ಇವು ಮಧುರಚೆನ್ನ, ಶಿವಪ್ರಕಾಶರಿಗಿಂತ ಭಿನ್ನವಾಗಿ ಜೀವನ ಮತ್ತು ಜೀವನ ಗ್ರಹಿಸುವ ಸಂಬಂಧದ ಸೂಕ್ಷ್ಮ ನೆಲೆಯಲ್ಲಿ ಮೈ ತಳೆಯುತ್ತ ಹೋಗುತ್ತದೆ. ಓದುಗರ ಮನೋಭಾವವಾಗಿ ರೂಪ ತಳೆದು, ಅವರ ಭಾವ ಜಗತ್ತಿನ ಭಾಗವಾಗುತ್ತವೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

About the Author

ತೇರಳಿ ಎನ್. ಶೇಖರ್

ಕವಿ, ಬರಹಗಾರ ತೇರಳಿ ಎನ್. ಶೇಖರ್ ಅವರು ಮೂಲತಃ ದಕ್ಷಿಣ ಕನ್ನಡ ಗುರುವಾಯೂರುನವರು. ಮಲಯಾಳದಿಂದ ಕನ್ನಡಕ್ಕೆ ಹಾಗೂ ಕನ್ನಡದಿಂದ ಮಲಯಾಳಕ್ಕೆ ಕೃತಿಗಳ ಅನುವಾದಕರು. ಅವರು, ಮಲಯಾಳದ ಆಧುನಿಕ ಪ್ರಮುಖ ಕವಿಗಳಲ್ಲಿ ಒಬ್ಬರಾದ ಕೆ. ಜೆ. ಶಂಕರಪಿಳ್ಳೆ ಯವರ ಆಯ್ದ ‘ಕೆ. ಜಿ ಶಂಕರ ಪಿಳ್ಳೆಯವರ ಕವಿತೆಗಳು’ ಸಂಕಲನವನ್ನು ಸಾಹಿತ್ಯ ಅಕಾಡೆಮಿಗಾಗಿ ಅನುವಾದಿಸಿದ್ದಾರೆ. ಕೃತಿಗಳು : ಮರೆತಿಟ್ಟ ವಸ್ತುಗಳು (ಅನುವಾದ), ಕೆ. ಜಿ ಶಂಕರ ಪಿಳ್ಳೈಯವರ ಕವಿತೆಗಳು (ಅನುವಾದ) ...

READ MORE

Related Books