ಭಾವೋಲ್ಲಾಸ

Author : ವಿಜಯ ಪದ್ಮಶಾಲಿ

Pages 94

₹ 100.00




Year of Publication: 2019
Published by: ಕಾವ್ಯ ಮಿತ್ರ ಪ್ರಕಾಶನ
Address: 31/482 ಸದಾನಂದ ಕಾಲೋನಿ ಬಸವಕಲ್ಯಾಣ, ಬೀದರ್, ಕರ್ನಾಟಕ- 585327
Phone: 9738482040

Synopsys

ಕವಿಯ ಮನದಂತರಾಳದ ಭಾವನೆಗಳು ಹೊರಹೊಮ್ಮಿ ಕವನಗಳಾಗಿ ರೂಪುಗೊಂಡು ''ಭಾವೋಲ್ಲಾಸ" ಕವನ ಸಂಕಲನದ ಮೂಲಕ ಹೊರಹೊಮ್ಮಿವೆ.

ವಿಜಯ ಪದ್ಮಶಾಲಿ ಅವರ ಪ್ರಥಮ ಕೃತಿ ಇದು. 80 ಕವನಳಿವೆ. ಅಕ್ಕನ ವ್ಯಕ್ತಿಚಿತ್ರವನ್ನು ನಿರೂಪಿಸುವ ಅವರ ಕವನದ ಸಾಲು ಹೀಗಿದೆ; ಅರಿವಿನ ಹೊದಿಕೆಯೊಳಗೆ ಅರಿವೆಯ ಪರಿವೇ ಇಲ್ಲದೆ ಗುರುವಿನ ಮಹಿಮೆಯನರಿತು ಪರಶಿವನೇ ಎನಗೆ ಪತಿಯೆಂದವಳು ನೀನಕ್ಕಾ…' ಅಧ್ಯಾತ್ಮದಿಂದ ನೋವು, ನಲಿವುಗಳ ಸೂಕ್ಷ್ಮಚಿತ್ರಣ ಸಿಗುತ್ತದೆ. ಪ್ರಕೃತಿ,ಪ್ರೇಮ, ಭಕ್ತಿ, ದೇಶಭಕ್ತಿ ,ತತ್ವ ಪುರುಷ ಪ್ರಧಾನತೆ, ಹೆಣ್ಣಿನ ಅಳಲು, ಉಪದೇಶ, ಬಡ ರೈತನ ಬವಣೆ,ವ್ಯಕ್ತಿಚಿತ್ರ, ಹೀಗೆ ಹಲವಾರು ವಿಷಯಗಳು ಅವರ ಮನದಂಗಳದಲ್ಲಿ ತುಮುಲಗೊಂಡು ಭಾವ,ವಿಭಾವ, ಸಂಚಾರಿ ಭಾವಗಳಾಗಿ ಹೊಸೆದು ಕೊಂಡು ಕವನಗಳು ಮೂರ್ತ ರೂಪ ತಾಳಿವೆ.

About the Author

ವಿಜಯ ಪದ್ಮಶಾಲಿ
(03 July 1969)

ಕವಯತ್ರಿ ವಿಜಯ ಪದ್ಮಶಾಲಿ ಅವರು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಯಲ್ದೂರಿನವರು. ತಂದೆ ರಂಗಸಂದ್ರಂ ಹನುಮಂತಪ್ಪ ತಾಯಿ ವೆಂಕಟಮ್ಮ.  ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರೆ. ಪುಸ್ತಕಗಳನ್ನು ಓದುವುದು ಅವರ ನೆಚ್ಚಿನ ಹವ್ಯಾಸ. ಕತೆ, ಕವನ, ಲೇಖನ, ಷಟ್ಪದಿ, ಮುಕ್ತಕ, ಚುಟುಕು, ಹನಿಗವನ ಬರೆಯುವುದರಲ್ಲಿ ಆಸಕ್ತಿ ಹೊಂದಿದವರು. ಹದಿನೈದು ವರ್ಷಗಳಿಂದ ಸ್ಥಳೀಯ ಪತ್ರಿಕೆಗಳಿಗೆ ಪದಬಂಧ ರಚನೆಕಾರರು. ’ಭಾವೋಲ್ಲಾಸ’ ಅವರ ಪ್ರಥಮ ಕವನ ಸಂಕಲನ. ಕಾವ್ಯ ಕಲ್ಪವಲ್ಲಿ ಎಂಬುದು ಕಾವ್ಯನಾಮ. ಪ್ರಶಸ್ತಿಗಳು :  ತ್ರಿಕಾಲಜ್ಞಾನಿ ಕೈವಾರ ತಾತಯ್ಯ ರಾಷ್ಟ್ರ ಪ್ರಶಸ್ತಿ ,ಕನ್ನಡ ಸಾಹಿತ್ಯರತ್ನ ರಾಜ್ಯ ಪ್ರಶಸ್ತಿ, ಸಾಹಿತ್ಯ ಸುಮ ಪ್ರಶಸ್ತಿ  ಕೃತಿಗಳು :  ಭಾವೋಲ್ಲಾಸ ಕವನ ಸಂಕಲನ , ...

READ MORE

Related Books