ಉಮಾಪತಿಯ ಸ್ಕಾಲರ್ ಶಿಪ್ ಯಾತ್ರೆ ಮತ್ತು ಇತರ ಕತೆಗಳು

Author : ಪಿ. ಲಂಕೇಶ್

Pages 98

₹ 90.00




Year of Publication: 2007
Published by: ಲಂಕೇಶ್ ಪ್ರಕಾಶನ
Address: ಬಸವನಗುಡಿ, ಬೆಂಗಳೂರು

Synopsys

‘ಉಮಾಪತಿಯ ಸ್ಕಾಲರ್ ಶಿಪ್ ಯಾತ್ರೆ ಮತ್ತು ಇತರ ಕತೆಗಳು’ ಕೃತಿಯು ಪಿ. ಲಂಕೇಶ್ ಅವರ ಕತಾ ಸಂಕಲನವಾಗಿದೆ. ಸಾಮಾನ್ಯ ಜನರ ಜೀವನವನ್ನು ಬಿಂಬಿಸುವ ಈ ಕೃತಿಯು ಸ್ಕಾಲರ್ ಶಿಪ್ ಕುರಿತು ವಿಶ್ಲೇಷಣೆ ಮಾಡುತ್ತದೆ. ಉಮಾಪತಿಯ ಪಾತ್ರದ ಮುಖೇನ ಸಾಮಾನ್ಯ ವರ್ಗದ ಜನರ ಬದುಕನ್ನು ಬಿಂಬಿಸುವ ಈ ಕೃತಿಯು, ಶಿಕ್ಷಣ ಕ್ಷೇತ್ರದಲ್ಲಿ ಸ್ಕಾಲರ್ ಶಿಪ್ ಹೇಗೆ ಮುಖ್ಯ ಪಾತ್ರವಹಿಸುತ್ತದೆ ಎನ್ನುವುದನ್ನು ತಿಳಿಸುತ್ತದೆ.

 

About the Author

ಪಿ. ಲಂಕೇಶ್
(08 March 1935 - 25 January 2000)

ಪಿ. ಲಂಕೇಶ್ ಕನ್ನಡ ಸಾಹಿತ್ಯದ ಪ್ರಮುಖ ಲೇಖಕರಲ್ಲಿ ಒಬ್ಬರು. ಪತ್ರಕರ್ತ-ಸಾಹಿತಿಯಾಗಿ ಜನಪ್ರಿಯರಾಗಿರುವ ಪಾಳ್ಯದ ಲಂಕೇಶ್ ಅವರ ಬದುಕು-ಬರಹ ವೈವಿಧ್ಯದಿಂದ ಕೂಡಿವೆ. ಕವಿ, ಕಥೆಗಾರ, ಕಾದಂಬರಿಕಾರ, ಅನುವಾದಕ, ನಾಟಕಕಾರ, ನಟ, ಚಲನಚಿತ್ರ ನಿರ್ದೇಶಕ, ಸಂಪಾದಕ, ಕೃಷಿಕ ಹೀಗೆ ಅವರ ಪ್ರತಿಭೆಗೆ ಹಲವು ಮುಖ. ಕೆಲಸ ಮಾಡಿದ ಕ್ಷೇತ್ರದಲ್ಲೆಲ್ಲ ತನ್ನದೇ ಛಾಪು ಮೂಡಿಸಿದವರು ಲಂಕೇಶ್. ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕೊನಗವಳ್ಳಿ 1935ರ ಮಾರ್ಚ್‌ 8ರಂದು ಜನಿಸಿದರು., ತಂದೆ ನಂದಿ ಬಸಪ್ಪ, ತಾಯಿ ದೇವೀರಮ್ಮ. ಕೊನಗವಳ್ಳಿ ಮತ್ತು ಹಾರನಹಳ್ಳಿಯಲ್ಲಿ ಪ್ರಾಥಮಿಕ, ಮಾಧ್ಯಮಿಕ ವಿದ್ಯಾಭ್ಯಾಸ ಮಾಡಿದ ಅವರು ಪ್ರೌಢಶಾಲೆ ಮತ್ತು ಇಂಟರ್ ...

READ MORE

Related Books