ಚಿತ್ತ ಭಿತ್ತಿ

Author : ರೂಪಶ್ರೀ ಕಲ್ಲಿಗನೂರ್‌

Pages 110

₹ 90.00
Year of Publication: 2015
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

2014ರ ವಿಭಾ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಕೃತಿ ’ಚಿತ್ತ ಭಿತ್ತಿ’. ರೂಪಶ್ರೀ ಕಲ್ಲಿಗನೂರ ಅವರ ಮೊದಲ ಕವನ ಸಂಕಲನ ಇದು. ರೂಪಶ್ರೀ ಮೂಲತಃ ಚಿತ್ರ ಕಲಾವಿದೆ, ಪತ್ರಕರ್ತೆ. ಅವರು ಬರೆವ ಅಕ್ಷರಗಳಿಗೂ ಚಿತ್ರವತ್ತತೆ ಇರುತ್ತದೆ ಎಂಬುದನ್ನು ಇಲ್ಲಿನ ಕವನಗಳು ಸಾಬೀತು ಪಡಿಸುತ್ತವೆ.

ಕೃತಿ ಕುರಿತು ಸ್ಪರ್ಧೆಯ ತೀರ್ಪುಗಾರರೂ ಆಗಿದ್ದ ಸವಿತಾ ನಾಗಭೂಷಣ ಹೀಗೆ ಹೇಳುತ್ತಾರೆ: ಹಿಂದೆ ಹೀಗೆ ಒಮ್ಮೆ ಕಾವ್ಯ ಸ್ಪರ್ಧೆಗೆ ತೀರ್ಪುಗಾರಳಾಗಿದ್ದೆ. ನಾಲೈದು ಸಂಕಲನಗಳನ್ನು ಕೈಯಲ್ಲಿರಿಸಿಕೊಂಡು ಎಷ್ಟೋ ಹೊತ್ತು ಹಾಗೇ ಸುಮ್ಮನೇ ಕುಳಿತಿದ್ದೆ. ಯಾವುದಕ್ಕೆ ಬಹುಮಾನ ಕೊಡಲಿ ಯಾವುದಕ್ಕೆ ಬಿಡಲಿ ಎಂಬ ಸಂದಿಗ್ಧ ಪರಿಸ್ಥಿತಿ! ಆದರೀಗ ಚಿತ್ರ ಸಂಪೂರ್ಣ ಬದಲಾಗಿದೆ. ಒಂದಾದರೂ ಅಂಥ ಹಸ್ತಪ್ರತಿ ಸಿಗುವಂತಾಗಲಿ ಎಂದು ಪ್ರಾರ್ಥಿಸುವ ಪರಿಸ್ಥಿತಿ. ಸಧ್ಯ ಒಂದು ಸಿಕ್ಕಿತಲ್ಲಾ ಎಂಬ ನೆಮ್ಮದಿ. ರೂಪ ಅವರ ಕವನಗಳು ಪ್ರೇಮ-ವಿರಹ-ವಿಷಾದದಲ್ಲಿ ಅದ್ದಿ ತೆಗೆದಂತಿವೆ. ಅಪ್ಪಟ ಕಾವ್ಯದ ಹಾದಿಯಲ್ಲಿರುವ ಹಲವು ರಚನೆಗಳನ್ನು ಅವರು ನೀಡಿದ್ದಾರೆ. ಕಾವ್ಯ ಬಗ್ಗೆ passion ಜಗತ್ತಿನ ಬಗ್ಗೆ Compassion ಇಟ್ಟುಕೊಂಡು ಮುನ್ನಡೆಯಲಿ ಎಂದು ಹಾರೈಸುವೆ.

ಕಥೆಗಾರ್ತಿ ಸುನಂದಾ ಪ್ರಕಾಶ ಕಡಮೆ ಅವರ ಪ್ರಕಾರ ’ಈ ಚಿತ್ತಭಿತ್ತಿಯ ಕವನಗಳಲ್ಲಿ ಒಮ್ಮೆಲೇ ಎದ್ದು ತೋರುವ ಅಂಶವೆಂದರೆ, ನಮ್ಮೆಲ್ಲ ಹೊಸ ಯುಗದ ಅನುಭವ ಸಾಮಗ್ರಿಗಳು ರೂಪಶ್ರೀ ಕವಿತೆಗಳಲ್ಲಿ ತಾಜಾ ಆಗಿ ಮೂಡುತ್ತವೆ. ವರ್ತಮಾನದ ವ್ಯಂಗ್ಯಗಳನ್ನು ಕೆಣಕುವ ರೀತಿಯಲ್ಲಿ ರೂಪಶ್ರೀಯ ಭಾವನೆಗಳು ತುಡಿಯುತ್ತವೆ. ಮತ್ತು ಅವುಗಳನ್ನು ಕಾವ್ಯದಲ್ಲಿ ಸಮರ್ಥವಾಗಿ ಬೆಸೆಯುವ ಕೌಶಲ ಅವಳಿಗೆ ಒಲಿದಿದೆ’. 

About the Author

ರೂಪಶ್ರೀ ಕಲ್ಲಿಗನೂರ್‌

ರೂಪಶ್ರೀ ಕಲ್ಲಿಗನೂರ್ ಅವರು ಜನಿಸಿದ್ದು 1989 ರಲ್ಲಿ. ಬೆಂಗಳೂರಿನ ಕಲಾಮಂದಿರ ಕಲಾಶಾಲೆಯಲ್ಲಿ ಪದವಿ ಪಡೆದು, ಪ್ರಸ್ತುತ ಮೈಸೂರಿನ ಕಲಾಶಾಲೆಯಲ್ಲಿ ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.  ಪ್ರಜಾವಾಣಿಯಲ್ಲಿ ಕಲಾವಿದೆಯಾಗಿ ಹಾಗೂ ಟ್ರಯೋ ವರ್ಲ್ಡ್ ಶಾಲೆಯಲ್ಲಿ ಕಲಾಶಿಕ್ಷಕಿಯಾಗಿ ಕೆಲಸ ಮಾಡಿದ ಅನುಭವವಿದೆ. ಇಲ್ಲಸ್ಟ್ರೇಷನ್ ಹಾಗೂ ಚಿತ್ರಕಲಾವಿದೆಯಾಗಿ ಕಾರ್ಯನಿರ್ವಹಿಸುತ್ತಿರುವ ರೂಪಶ್ರೀ ಪ್ರಜಾವಾಣಿ ಪತ್ರಿಕೆಗೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಬಗ್ಗೆ ಬರೆಯುತ್ತಿರುತ್ತಾರೆ. ಈ ಮೊದಲು ’ಕಾಡೊಳಗ ಕಳದಾವು ಮಕ್ಕಾಳು' ಎಂಬ ಮಕ್ಕಳ ನಾಟಕ ಕೃತಿಯನ್ನು ಪ್ರಕಟಿಸಿದ್ದರು.  ಮೊದಲ ಪ್ರಕಟಿತ ಕೃತಿಗೇ ಕನ್ನಡ ಸಾಹಿತ್ಯ ಪರಿಷತ್ತಿನ ಬಿಬಿಎಂಪಿ ಅರಳು ಸಾಹಿತ್ಯ ಪ್ರಶಸ್ತಿ ದೊರೆತಿದೆ. ಹಲವು ...

READ MORE

Related Books