ಅವನಿಗೊಂದು ಪತ್ರ

Author : ಸಿದ್ಧಲಿಂಗಪ್ಪ ಬೀಳಗಿ

Pages 44

₹ 80.00




Year of Publication: 2022
Published by: ಅಶ್ವಿನಿ ಪ್ರಕಾಶನ
Address: ಮಹಂತಾನಾಗರ್, ಹುನ್ ಗುಂದ್ -587118, ಬಾಗಲಕೋಟೆ ಜಿಲ್ಲೆ

Synopsys

ಲೇಖಕ ಸಿದ್ಧಲಿಂಗಪ್ಪ ಬೀಳಗಿ ಅವರ ಕವನಗಳ ಸಂಕಲನ ಅವನಿಗೊಂದು ಪತ್ರ. ಈ ಕೃತಿಗೆ ಮುರ್ತುಜಾ ಬ.ಒಂಟಿ ಅವರು ಬೆನ್ನುಡಿ ಂಆತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಬಾಗಲಕೋಟೆ ಜಿಲ್ಲೆ ಹುನಗುಂದದ ಸಿದ್ದಲಿಂಗಪ್ಪ ಬೀಳಗಿಯವರು ತಮ್ಮ ಪಾಡಿಗೆ ತಾವು ತಣ್ಣಗೆ ಬರೆಯುತ್ತಿರುವ ಸೃಜನಶೀಲ ಹಿರಿಯ ಲೇಖಕರು. ಆಕಾಶವಾಣಿ, ದೂರದರ್ಶನದಲ್ಲಿ ಹಲವು ಕಾರ್ಯಕ್ರಮ ನೀಡಿದ ಇವರು ಪತ್ರಿಕೆಗಳ ಮೂಲಕ ೫೦೦ ಕ್ಕೂ ಹೆಚ್ಚು ಚಿತ್ರಲೇಖನ ಬರೆದು ನಾಡಿನ ಓದುಗರ ಆ ಗಮನ ಸೆಳೆದಿದ್ದಾರೆ.ಇತ್ತೀಚಿಗೆ ಧ್ಯಾನಸ್ಥವಾಗಿ ಹಾಯ್ಕು ಬರಹದಲ್ಲಿ ತಮ್ಮನ್ನು ತೊಡಗಿಸಿಕೊಂಡ ಸಿದ್ದಲಿಂಗಪ್ಪ ಬೀಳಗಿಯವರು ಹಾಯ್ಕು ಬರಹಗಾರರು ಮತ್ತು ಓದುಗರ ವಲಯದಲ್ಲಿ ಹೊಸ ಸಂಚಲನ ಮೂಡಿಸುವುದರೊಂದಿಗೆ ಸಶಕ್ತ ಹಾಯ್ಕು ಬರಹಗಾರರೆನಿಸಿಕೊಂಡಿದ್ದಾರೆ. ಈಗಾಗಲೇ ಚಿಂತನ ಬರಹ, ಲೇಖನ ಬರಹ, ಕವಿತೆ, ಚುಟುಕು, ಹಾಯ್ಕು ಸಂಕಲನ ಹೊರತಂದಿರುವ ಸಿದ್ದಲಿಂಗಪ್ಪ ಬೀಳಗಿಯವರ 'ಸಾವಿರದ ಸಾಲುಗಳು' ಹಾಯ್ಕು ಸಂಕಲನ, 'ಅವನಿಗೊಂದು ಪತ್ರ' ಕವನ ಸಂಕಲನ ಸಧ್ಯದಲ್ಲಿಯೇ ಓದುಗರ ಕೈ ಸೇರುತ್ತಿರುವದು ಸಂತಸದ ಸಂಗತಿ ಎಂದಿದ್ದಾರೆ.

About the Author

ಸಿದ್ಧಲಿಂಗಪ್ಪ ಬೀಳಗಿ

ಲೇಖಕ ಸಿದ್ಧಲಿಂಗಪ್ಪ ಬೀಳಗಿ ಅವರು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಯಡಹಳ್ಳಿ ಗ್ರಾಮದವರು. ಹುನಗುಂದ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರು. ವ್ಯಕ್ತಿತ್ವ ವಿಕಸನ ಮಾರ್ಗದರ್ಶಕರು. ಎಂ.ಎ. ಎಂ. ಈಡಿ ಪದವೀಧರರು.  ಛಾಯಾಗ್ರಹಣ ಇವರ ಹವ್ಯಾಸ. ನಾಡಿನ ವಿವಿಧ ಪತ್ರಿಕೆಗಳಲ್ಲಿ ಸುಮಾರು 500ಕ್ಕೂ ಅಧಿಕ ಚಿತ್ರಲೇಖನಗಳು ಪ್ರಕಟವಾಗಿವೆ. ಧಾರವಾಡ ಆಕಾಶವಾಣಿಯಿಂದ ಚಿಂತನಗಳು, ಭಾಷಣಗಳು, ಕಥೆ, ಸಂವಾದ, ಕವಿತೆಗಳು ಪ್ರಸಾರಗೊಂಡಿವೆ. ದೂರದರ್ಶನ ಚಂದನವಾಹಿನಿಯ 'ಬೆಳಗು' ನೇರಪ್ರಸಾರ ಮತ್ತು 'ವಚನಾಮೃತ' ಕಾರ್ಯಕ್ರಮ ಪ್ರಸಾರಗೊಂಡಿವೆ. ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಸಾಹಿತ್ಯ ಅಕಾಡೆಮಿ, ಶರಣ ಸಾಹಿತ್ಯ ಪರಿಷತ್ತು, ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯಮಟ್ಟದ ಕಮ್ಮಟ, ಕವಿಗೋಷ್ಠಿಗಳಲ್ಲಿ ಭಾಗಿ ಮತ್ತು ಅಖಿಲ ...

READ MORE

Related Books