ಪರ್ಜನ್ಯ

Author : ಪ್ರಶಾಂತ್ ಕುಮಾರ್ ಡಿ.ಕೆ ( ಗುರುನಂದನ)

Pages 56

₹ 62.00
Year of Publication: 2019
Published by: ಗರುಡ ಪ್ರಕಾಶನ
Address: ಮಂದಾರ, ಲಕ್ಷ್ಮಿ ನಗರ, ಸಿದ್ದಾಪುರ-581355
Phone: 7892348675

Synopsys

ಗುರುನಂದನ' ಎಂಬ ಕಾವ್ಯನಾಮದ ಡಾ. ಪ್ರಶಾಂತ್ ಕುಮಾರ್ ಡಿ.ಕೆ.ಅವರು ಪರ್ಜನ್ಯ ಕವನ ಸಂಕಲನ ಬರೆದಿದ್ದಾರೆ. ಪ್ರಕೃತಿಗೀತ ಕವನ ದೀರ್ಘ ಮಳೆ ಸುರಿಸುವ ಮೇಘದ ವರ್ಣನೆಯೊಂದಿಗೆ ಪ್ರಾಕೃತಿಕ ವಿದ್ಯಮಾನವೊಂದರ ಸೊಬಗು, ಸಂಭ್ರಮ, ಸಡಗರವನ್ನು ಅವಿರ್ಭವಿಸುತ್ತ ಹೋಗುತ್ತದೆ. ವಿಶೇಷವಾಗಿ ಮಲೆನಾಡಿನ ಮೋಡಗಳ ಸೌಮ್ಯ ಸೌಂದರ್ಯ ರುದ್ರ ನರ್ತನಗಳು ಹೃದಯಂಗಮ ಇದಾಗಿದೆ. ಕವಿ ಕುವೆಂಪು ಅವರ ಬರಹಗಳಿಂದ ಲೇಖಕರು ಪ್ರಭಾವಿತರಾಗಿರುವುದು ಅವರ ಕವನಗಳಲ್ಲಿ ಕಂಡು ಬರುತ್ತದೆ. ಪ್ರಕೃತಿಯ ಸೊಬಗು, ಮಲೆನಾಡಿನ ಬದುಕು, ಹಕ್ಕಿ, ಗಿಡ, ಮರ, ತಾರೆ, ಹೀಗೆ ಕವಿಯ ಕಣ್ಣಿಗೆ ಕಂಡದ್ದೆಲ್ಲವೂ ಕವನ ವಸ್ತು ವಿಷಯವಾಗಿದೆ. 

 

About the Author

ಪ್ರಶಾಂತ್ ಕುಮಾರ್ ಡಿ.ಕೆ ( ಗುರುನಂದನ)
(31 August 1985)

ಗುರುನಂದನ ಎಂಬ ಕಾವ್ಯನಾಮದಿಂದ ಹೆಸರಾಗಿರುವ ಡಾ. ಪ್ರಶಾಂತ್ ಕುಮಾರ್ ಡಿ.ಕೆ . ಸಾಗರ ತಾಲ್ಲೂಕಿನ ಸುಪ್ರಸಿದ್ಧ ಜೋಗ ಸಮೀಪದವರು. ಇವರು ಜನಿಸಿದ್ದು 1985 ಆಗಸ್ಟ್‌ 31ರಂದು. ಮೂಲತಃ ಆಯುರ್ವೇದದ ವೈದ್ಯರಾಗಿರುವ ಇವರು ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡಿದ್ದಾರೆ.  ...

READ MORE

Related Books