ಕವಯಿತ್ರಿ ಮಾಧವಿ ಭಂಡಾರಿ ಕೆರೆಕೋಣ ಅವರ ಎರಡನೇ ಕವನಸಂಕಲನ ಇದು. ಇಲ್ಲಿಯ ಕವನಗಳು ವೈಯಕ್ತಿಕ ನೆಲೆಯಲ್ಲೇ ಅರಳಿದರೂ, ಅದಕ್ಕೂ ಮೀರಿದ ಮಿಡಿತ, ನಿರೀಕ್ಷೆ, ಆಕಾಂಕ್ಷೆ ಇಲ್ಲಿ ಇದೆ ಎಂದಿದ್ದಾರೆ ಕವಯಿತ್ರಿ. ನಮ್ಮ ನಡುವಿನ ಹುಡುಗಿಯೊಬ್ಬಳು ಭವಿಷ್ಯದ ಕಾವ್ಯದಲ್ಲಿ ಸ್ಥಾನ ಹಿಡಿದಿದ್ದಾಳೆ ಎಂದು ಪ್ರತಿಭಾ ನಂದಕುಮಾರ್, ಹೊಸ ರೂಪಕ- ಹೊಸ ಕ್ರಿಯಾತ್ಮಕತೆಯನ್ನು ರೂಪಿಸಿದ್ದಾರೆ ಎಂದು ಕೆ ಕೇಶವ ಶರ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕನ್ನಡದ ಸೂಕ್ಷ್ಮ ಕವಯತ್ರಿ ಮಾಧವಿ ಭಂಡಾರಿ ಕೆರೆಕೋಣ ಅವರು 1962 ಜುಲೈ 22 ರಂದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಲ್ಲೂಕಿನ ಕೆರೆಕೋಣದಲ್ಲಿ ಜನಿಸಿದರು. ’ಹರಿದ ಸರ್ಟಿನ ಹುಡುಗಿ, ಕಡಲು ಕಳೆದಿದೆ' ಅವರ ಕವನ ಸಂಕಲನ. ’ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ’ ಸಂದಿದೆ ಅವರಿಗೆ. ...
READ MORE