ಖರ್ಚಾಗದ ಪದ್ಯಗಳು

Author : ರಮೇಶ್ ಹೆಗಡೆ

Pages 1




Published by: ಅಭಿನವ ಪ್ರಕಾಶನ
Address: 17/18-3, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
Phone: 9448804905

Synopsys

Ostiogenesis inperfectta ಎಂಬ ಅಪರೂಪದ ಎಲುಬಿನ ಕಾಯಿಲೆಯಿಂದ ಬಳಲುತ್ತಿದ್ದ ರಮೇಶ್‌ ಹೆಗಡೆ ಅರಳುವ ಮುನ್ನವೇ ಬಾಡಿ ಹೋದ 'ಅಕ್ಷರ ಪುಷ್ಪ'. ಕುಳಿತಲ್ಲಿಂದ ಏಳಲು ಸಾಧ್ಯವಾಗದಿದ್ದ ಅವರು ಜಗತ್ತು ಸುತ್ತಲು ಬಳಸಿದ್ದು ಕಾವ್ಯ ಎಂಬ ರೆಕ್ಕೆಯನ್ನು. 

’ಖರ್ಚಾಗದ ಪದ್ಯಗಳು’ ಕುರಿತು ಬರೆದಿರುವ ಪ್ರಸಿದ್ಧ ಸಾಹಿತಿ ಜಯಂತ ಕಾಯ್ಕಿಣಿ, ’ಪರಿಚಿತ ಲಯ, ಪದಲಾಸ್ಯಗಳ ಚಕಮಕಿಯಲ್ಲಿ ಫಳಫಳನೆ ಹೊಸದೊಂದು ಅಡಿಯೊಂದನ್ನು ಹೊಮ್ಮಿಸುವ, ಭಾವನತ್ಯವೊಂದನ್ನು ಸೂಕ್ಷ್ಮವಾಗಿ ಹೊಳೆಯಿಸುವ ರಮೇಶನ ಕವಿತೆಗಳ ಸಹವಾಸ ಆಪ್ತತೆಯನ್ನು ಹೆಚ್ಚಿಸುವಂಥದ್ದು...ಬರೆಯುವುದನ್ನು ಸಲೀಸು ಮಾಡಿಕೊಂಡುಬಿಟ್ಟಿರುವ ಕವಿಗಳ ನಡುವೆ, ರಮೇಶನ ತಹತಹ, ಪದಗಳ ಮಿತವ್ಯಯ ಒಂದು ಮಹತ್ವದ ಸಂಗತಿಯಾಗಿ ನನಗೆ ತೋರುತ್ತದೆ. ಇನ್ನೂ ನಿಖರವಾಗಿ, ಚೆನ್ನಾಗಿ ಬರೆಯುವುದು ಹೇಗೆ' - ಎಂಬುದರ ಜಿಜ್ಞಾಸೆಯಲ್ಲೇ ಸದಾ ಇರುವ ಅಪರೂಪದ ಕವಿ ರಮೆಶನ, ಚಡಪಡಿಕೆಯೊಂದಿಗೆ ಅವನ ಸಾಲುಗಳ ಕಂಪನ ವಿಸ್ತಾರವೂ ಹೆಚ್ಚುತ್ತಲೇ ಇರಲಿ ಎಂದು ಹಂಬಲಿಸುತ್ತೇನೆ' ಎಂದಿದ್ದಾರೆ. 

About the Author

ರಮೇಶ್ ಹೆಗಡೆ

ರಮೇಶ ಹೆಗಡೆ ಮೂಲತಃ ಶಿರಸಿಯವರು. ಪ್ರಾಥಮಿಕ ಶಿಕ್ಷಣ ಪೂರೈಸಿದ್ದು, ಹಲವು ಸಮಸ್ಯೆಗಳಿಂದ ಶಿಕ್ಷಣ ಮುಂದುವರಿಸಲಾಗಲಿಲ್ಲ. ನಂತರ, ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಕಲಾ ವಿಭಾಗದಲ್ಲಿ ಪದವಿ ಪೂರೈಸಿದರು. ಕತೆ-ಕವನ ರಚಿಸುವುದು ಇವರ ಹವ್ಯಾಸ.  ಕೃತಿಗಳು: ಕಾವ್ಯ ಚಿಗುರು (ಕವನ ಸಂಕಲನ), ಮನದಲ್ಲಿ ಮನೆಯ ಮಾಡಿ (ಕನವ ಸಂಕಲನ), ಚಿಣ್ಣ-ಚಿನ್ನಾಟ (ಮಕ್ಕಳ ಕವಿತೆಗಳು), ಖರ್ಚಾಗದ ಪದ್ಯಗಳು (ಕವನ ಸಂಕಲನ), ನೋವಿನಲಿ ನವಿಲುಗರಿ (ಗಜಲ್), ಕಿಟಕಿಯೊಳಗಿನ ಕಣ್ಣು (ಸಾಲ್ಮಿಂಚುಗಳು). ಪ್ರಶಸ್ತಿ-ಪುರಸ್ಕಾರಗಳು: ಲಯನ್ಸ್ ಸೇರಿದಂತೆ ಹಲವು ಸಂಸ್ಥೆಗಳಿಂದ ರಮೇಶ್ ಅವರಿಗೆ ಸನ್ಮಾನಗಳು ಸಂದಿವೆ. ...

READ MORE

Related Books