ದಾರಿ ಎಸೆದ ಹೆಜ್ಜೆ

Author : ನ. ಗುರುಮೂರ್ತಿ ಜಯಮಂಗಲ

Pages 131

₹ 115.00
Year of Publication: 2020
Published by: ಚಂದ್ರಮ ಜಾಲ ವಾಹಿನಿ ಪ್ರಕಾಶನ
Address: ಜಯಮಂಗಲ ಗ್ರಾಮ, ಲಕ್ಕೂರು ಹೋಬಳಿ, ಮಾಲೂರು ತಾಲೂಕು, ಕೋಲಾರ ಜಿಲ್ಲೆ-563163
Phone: 9141129912

Synopsys

ಕವಿ ನ. ಗುರುಮೂರ್ತಿ ಜಯಮಂಗಲ (ನ.ಗು. ಜಯಮಂಗಲ) ಅವರ ಮೂರನೇ ಕವಿತಾ ಸಂಕಲನವಿದು-ದಾರಿ ಎಸೆದ ಹೆಜ್ಜೆ. ಸಾಹಿತಿ ಪ್ರೊ. ಕಾಳೇಗೌಡ ನಾಗವಾರ ಅವರು ಕೃತಿಗೆ ಮುನ್ನುಡಿ ಬರೆದು ‘ಇಲ್ಲಿಯ ಬಹುಪಾಲು ಕವಿತೆಗಳು ಹೊಸ ಬದುಕಿನ ಪಯಣದ ಹಾದಿಯಲ್ಲಿರುವ ಹೆಚ್ಚು ನೋವು-ಆತಂಕಗಳ ಬಗೆಗಿನ ಅಸಹನೆ ಮತ್ತು ಆರೋಗ್ಯಕರ ಚಿಂತನೆಗಳ ಸಾಕಾರದ ಹಂಬಲದಲ್ಲಿ ಮುಳುಗಿವೆ. ಮಂಗಳಕರ ಆಶಯಗಳೂ ಹೇರಳವಾಗಿವೆ. ಸಮಾಧಿಗಳನ್ನು ಕೆದಕಿ ಇರುವ ನೆಮ್ಮದಿ ಕಳೆದುಕೊಳ್ಳುವ ಬದಲು ಹೆಮ್ಮೆಯ ಬುನಾದಿಗಳಿಗಾಗಿ ಸಿದ್ಧರಾಗೋಣ ಎಂಬ ಬದ್ಧತೆಯ ಕವಿಯಾಗಿರುವ ನ.ಗುರುಮೂರ್ತಿ, ಸಹಾಯಕರ ಸಕಲ ಮೌನಗಳಿಗೆ ಕೊರಳಾಗುವ, ಚೈತನ್ಯದಾಯಕ ಸೊಗಸುಗಳಿಗೆ ಅರ್ಪಿಸಿಕೊಳ್ಳುವ ಚೇತೋಹಾರಿ ಮನಸ್ಥಿತಿಯಲ್ಲಿದ್ದಾರೆ. ಸರಾಗ ಉಸಿರಾಟದ ತಾಜಾ ಹಂಬಲ ಇಲ್ಲಿಯ ಕವಿತೆಗಳಲ್ಲಿ ಅಂತರ್ಜಲವಾಗಿ ಹರಿಯುತ್ತಿದೆ’ ಎಂದು ಪ್ರಶಂಸಿಸಿದ್ದಾರೆ.

ಕಾಣದಾಯಿತು ಗರಿ ಬಿಚ್ಚಿದ ನವಿಲು, ದಾರಿ ಎಸೆದ ಹೆಜ್ಜೆ, ತಾಯಿ ಎಂಬ ಮೌನರಾಗ, ನೋಯಿಸಬೇಡಿ ನೋವನ್ನು, ಕೊಳಲು ಮಾರುವ ಹುಡುಗ, ನೀನೊಂದು ಶದ್ಬಕೋಶ ಹೀಗೆ ಒಟ್ಟು 30 ಕವಿಗಳಿವೆ, ವಸ್ತುವಿನ ದೃಷ್ಟಿಯಿಂದ ವೈವಿಧ್ಯತೆ ಇದೆ. ಶೈಲಿಯು ಗಮನ ಸೆಳೆಯುವಂತಿದೆ. ಕವಿಗೆ ಇರಲೇಬೇಕಾದ ಸಾಮಾಜಿಕ ಹೊಣೆಗಾರಿಕೆಯ ಎಚ್ಚರವನ್ನು ಪ್ರತಿ ಕವನದಲ್ಲೂ ಕಾಣಬಹುದು.  

About the Author

ನ. ಗುರುಮೂರ್ತಿ ಜಯಮಂಗಲ
(01 July 1969)

ನಗು ಜಯಮಂಗಲ- ಕಾವ್ಯನಾಮದಿಂದ ನ.ಗುರುಮೂರ್ತಿ ಜಯಮಂಗಲ ಅವರು ಪರಿಚಿತರು. ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಜಯಮಂಗಲ ಗಡಿ (ಜನನ: 01-07-1969) ಗ್ರಾಮದವರು.ತಂದೆ ದಿ.ನಲ್ಲಪ್ಪ ತಾಯಿ ಮುನಿಯಮ್ಮ. ಮಾಲೂರು ತಾಲ್ಲೂಕಿನ ಲಕ್ಕೂರು ಹೋಬಳಿಯ ಚಿಕ್ಕತಿರುಪತಿ ಸಂಕೀರ್ಣದ ಸಿದ್ದನಹಳ್ಳಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ಕೋಲಾರ ಜಿಲ್ಲೆಯ ದಲಿತ ಚಳವಳಿಗಳಲ್ಲಿ ಭಾಗವಹಿಸಿದ ಅನುಭವಗಳೊಂದಿಗೆ ಸಾಹಿತ್ಕಾಸಕ್ತಿ ಬೆಳೆಸಿಕೊಂಡಿದ್ದರ ಫಲವಾಗಿ  'ಹೆಬ್ಬೆರಳ ಬೆವರು' ಕವನ ಸಂಕಲನ (2016) ಪ್ರಕಟಿಸಿದ್ದು,  ಈ ಕೃತಿಯು ರಾಜ್ಯಮಟ್ಟದ ಕ.ಸಾ.ಪ ಪ್ರೊ.ಡಿ.ಸಿ. ಅನಂತಸ್ವಾಮಿ ಸಂಸ್ಮರಣೆ ದತ್ತಿ ಪ್ರಶಸ್ತಿ ಪಡೆದಿದೆ. 2018 ರಲ್ಲಿ ಪ್ರಕಟಿತ ಮತ್ತೊಂದು ಕವನ ಸಂಕಲನ-'ಅರ್ಜಿ ಹಾಕಿ ಹುಟ್ಟಿದವರ ನಡುವೆ' . ಅದಕ್ಕೂ ಅದೇ ಸಾಲಿನ ...

READ MORE

Related Books