ಕಾರುಣ್ಯದ ಮೋಹಕ ನವಿಲುಗಳೆ

Author : ಆರನಕಟ್ಟೆ ರಂಗನಾಥ

Pages 78

₹ 80.00




Year of Publication: 2020
Published by: ಪಲ್ಲವ ಪ್ರಕಾಶನ
Address: ಚನ್ನಪಟ್ಟಣ ಪೋಸ್ಟ್, ಎಮ್ಮಿಗನೂರು, ಬಳ್ಳಾರಿ- 583113

Synopsys

‘ಕಾರುಣ್ಯದ ಮೋಹಕ ನವಿಲುಗಳೆ’ ಆರನಕಟ್ಟೆ ರಂಗನಾಥ ಅವರ ಕವಿತೆಗಳ ಸಂಕಲನ. ಕನ್ನಡ ಪುಸ್ತಕ ಪ್ರಾಧಿಕಾರದಿಂದ ಧನಸಹಾಯ ಪಡೆದಿರುವ  ಕೃತಿ ಇದು.  ಹಿರಿಯ ಸಾಹಿತಿ ಮಹದೇವ ಶಂಕನಪುರ ಅವರು ಮುನ್ನುಡಿ ಬರೆದಿದ್ದಾರೆ. ಈ ಸಂಕಲನದಲ್ಲಿ ಒಟ್ಟು 38 ಕವಿತೆಗಳಿವೆ. ‘ಈಗಲೂ ಉರಿಯುತ್ತಿದೆ ಬೀಡಿ, ಕರಿಮಯ್ಯ ಕಸವು, ಕರಿಯಜ್ಜನ ಯಶೋಗಾಧೆ, ನಲ್ಲಮುತ್ತು ಕೇರಾಫ್ ಚಟಾಕು ಸುಬ್ಬನ್ ಮುಂತಾದ ಕವಿತೆಗಳಲ್ಲಿ ಅಜ್ಜ, ತಂದೆ, ತಾಯಿ, ಪೂರ್ವಿಕರಾಧಿಯಾಗಿ ತುತ್ತು ಅನ್ನಕ್ಕೆ ತಮ್ಮ ಕಬ್ಬಿಣದ ಕುಡದಂತಹ ಶರೀರಗಳನ್ನು ಉಳ್ಳವರ ಜಮೀನುಗಳಲ್ಲಿ ತೇದುಕೊಂಡದ್ದು ಕವಿತೆಗಳಲ್ಲಿ ಬೆವರ ಗಂಧವಾಗಿ ಹರಡಿಕೊಂಡಿದೆ’. ಕವಿಯು ಬಾಲ್ಯದಲ್ಲಿ ಕಂಡು ಉಂಡ ಅಸಹಾಯಕ ಮುಗ್ಧ ಕಣ್ಣುಗಳಲ್ಲಿನ ಚಿತ್ರಣ ಹೊಸ ನುಡಿಗಟ್ಟುಗಳಲ್ಲಿ ಕಾವ್ಯವಾಗಿದೆ’  ಎಂದು ಪ್ರಶಂಸಿಸಿದ್ದಾರೆ.  

About the Author

ಆರನಕಟ್ಟೆ ರಂಗನಾಥ

ಕವಿ ಆರನಕಟ್ಟೆ ರಂಗನಾಥ ಅವರು 1985 ಜುಲೈ 15ರಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಆರನಕಟ್ಟೆಯಲ್ಲಿ ಜನಿಸಿದರು. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರಗಿಯಿಂದ ‘ಕನ್ನಡ ಮತ್ತು ತಮಿಳು ದಲಿತ ಕತೆಗಳಲ್ಲಿ ಪ್ರತಿಭಟನೆ’ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ. ಬಳ್ಳಾರಿಯ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯ ಕೊಪ್ಪಳ ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ಅತಿಥಿ ಉಪನ್ಯಾಸಕರಾಗಿ ವೃತ್ತಿ ಆರಂಭ. ಪ್ರಜಾವಾಣಿ, ವಿಜಯ ಕರ್ನಾಟಕ, ಸಂವಾದ, ಅನಿಕೇತನ( ಸಾ.ಅಕಾಡೆಮಿ ಪತ್ರಿಕೆ), ಅವಧಿ, ಮೊದಲಾದ ಪತ್ರಿಕೆಗಳಲ್ಲಿ ಇವರ ಪದ್ಯಗಳು ಪ್ರಕಟಣೆ ಕಂಡಿವೆ. ತಮಿಳಿನಿಂದ ಕನ್ನಡಕ್ಕೆ ಅನೇಕ ಲೇಖನಗಳು, ಕವಿತೆಗಳನ್ನು ಅನುವಾದಿಸಿದ್ದು ನಾಡಿನ ಹಲವು ಪತ್ರಿಕೆ ...

READ MORE

Related Books