ಹನಿ ಕಹಾನಿ

Author : ರಜನಿಕಾಂತ ವಿ. ಬರೂಡೆ

Pages 84

₹ 60.00
Year of Publication: 2012
Published by: ಬಿಸಿಲನಾಡು ಪ್ರಕಾಶನ
Address: 1-871 ವೆಂಕಟೇಶ ನಗರ, ಗುಲ್ಬರ್ಗಾ- 585102
Phone: 9481000094

Synopsys

ಲೇಖಕ ರಜನಿಕಾಂತ ವಿ. ಬರೂಡೆ ಅವರ ಹನಿಗವನ ಸಂಕಲನ ʻಹನಿ ಕಹಾನಿʼ. ಪುಸ್ತಕದ ಬೆನ್ನುಡಿಯಲ್ಲಿ ಲೇಖಕ ಪ್ರಭುಲಿಂಗ ನೀಲೂರೆ ಅವರು, “ ರಜನಿಕಾಂತ ವಿ. ಬರೂಡೆ ಅವರು ರಾಜ್ಯ ಗುಪ್ತವಾರ್ತೆಯ ಗುಲಬರ್ಗಾ ಘಟಕದಲ್ಲಿ ಪೊಲೀಸ್ ಪೇದೆಯಾಗಿ ಕಾರ್ಯನಿರ್ವಹಿಸುತ್ತಲೇ 'ಎದೆಯಾಳದ ಹನಿಗಳು' ಮತ್ತು 'ನನ್ನ ಊರು ನನ್ನ ಜನ' ಎಂಬ ಎರಡು ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ಅರ್ಪಿಸಿ ಭರವಸೆಯ ಬರಹಗಾರರಾಗಿ ಗುರುತಿಸಿಕೊಂಡಿದ್ದಾರೆ. ಸದಾ ಕ್ರಿಯಾಶೀಲರಾಗಿ ಹೊಸ ಹೊಸ ಆಲೋಚನೆಗಳು, ಚಿಂತನೆಯತ್ತ ಗಮನ ಹರಿಸುವ ಬರೂಡೆ ಅವರ ಆಸಕ್ತಿ ಕ್ಷೇತ್ರ ಕಾವ್ಯ. ಹಲವಾರು ಕವಿಗೋಷ್ಠಿಗಳಲ್ಲಿ ಕಾವ್ಯ ವಾಚಿಸಿ ಸಹೃದಯರ ಮನ ಗೆದ್ದಿದ್ದಾರೆ. ಬೆಂಗಳೂರಿನ ಸಾಹಿತ್ಯ ಪ್ರಶಸ್ತಿಗಳಿಗೆ ಸಹ ಭಾಜನರಾಗಿದ್ದಾರೆ. ಸರಳವಾಗಿ, ಸುಂದರವಾಗಿ ಹೇಳಬೇಕಾದದ್ದನ್ನು ಕಾವ್ಯದ ಮೂಲಕ ಹೇಳುವ ಬರೂಡೆ, ಬದುಕಿನ ಅನುಭವಗಳನ್ನು ಕಾವ್ಯದಲ್ಲಿ ಹೆಣೆಯುತ್ತಾ ಸಮಾಜದ ಅನೇಕ ವ್ಯವಸ್ಥೆಗಳನ್ನು ಪ್ರೀತಿಸುತ್ತಾ, ವಿಡಂಬಿಸುತ್ತಾ ಇನ್ನೂ ಗಟ್ಟಿಯಾಗಿ ನಿಂತು ಹೆಚ್ಚು ಹೆಚ್ಚು ಕೃತಿಗಳನ್ನು ರಚಿಸಲಿ” ಎಂದು ಹೇಳಿದ್ದಾರೆ.

About the Author

ರಜನಿಕಾಂತ ವಿ. ಬರೂಡೆ
(20 September 1975)

ರಜನಿಕಾಂತ ಬರೂಡೆ ಕಲಬುರಗಿ ಜಿಲ್ಲೆಯವರು. ಬಿ.ಎ. ಪದವೀಧರರು. ಪೋಲಿಸ್‌ ಇಲಾಖೆಯಲ್ಲಿ ಮುಖ್ಯ ಪೇದೆಯಾಗಿ ಸೇವೆ ಸಲ್ಲಿಸಿ ಪ್ರಸ್ತುತ ನಗರ ವಿಶೇಷ ಶಾಖೆ (GSB) ಕಲಬುರಗಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವೃತ್ತಿಯೊಂದಿಗೆ ಬರವಣಿಗೆಯಲ್ಲೂ ಆಸಕ್ತಿ.  ರಜನಿಕಾಂತ ಅವರಿಗೆ ಎಸ್.‌ ರಾಯಡು ಸಾಮಾಜಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ ಬೆಂಗಳೂರು ಅವರ ಸಾಹಿತ್ಯ ಪ್ರಶಸ್ತಿ (2017), ರಾಜ್ಯ ಮಟ್ಟದ 17ನೇ ಚುಟುಕು ಸಮ್ಮೇಳನದಲ್ಲಿ ʻಕಾವ್ಯ ಪ್ರಶಸ್ತಿʼ ಹೀಗೆ ಹಲವಾರು ಗೌರವಗಳು ಸಂದಿವೆ. ಕೃತಿಗಳು: ಎದೆಯಾಳದ ಹನಿಗಳು (ಹನಿಗವನಗಳ ಸಂಕಲನ), ನನ್ನ ಊರು...ನನ್ನ ಜನ, ಹನಿ ಕಹಾನಿ (ಹನಿಗವನಗಳ ಸಂಕಲನ) ...

READ MORE

Related Books