ಹಾಡುಗಳು ಉಳದಾವ

Author : ಕಾಶೀನಾಥ ಅಂಬಲಗೆ

Pages 79

₹ 60.00




Year of Publication: 2007
Published by: ಪ್ರಗತಿ ಪ್ರಕಾಶನ
Address: ’ಬೇವು ಬೆಲ್ಲ’, ಜಯನಗರ, ಗುಲಬರ್ಗಾ ವಿ.ವಿ.ರಸ್ತೆ ಕಲಬುರಗಿ-585103

Synopsys

ಕಾಶೀನಾಥ ಅಂಬಲಗೆ ಅವರ ಕವನ ಸಂಕಲನ- ’ಹಾಡುಗಳು ಉಳದಾವ’. ಇಲ್ಲಿಯ ಬಹುತೇಕ ಕವನಗಳು ಪ್ರಾದೇಶಿಕ ಭಾಷಾ ಸೊಗಡನ್ನುಹೊತ್ತು ಸಂಭ್ರಮಿಸಿವೆ. ಸಾಹಿತಿ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಕೃತಿಯ ಬೆನ್ನುಡಿಯಲ್ಲಿ ’ಅಂಬಲಗೆ ಅವರ ಕಾವ್ಯಲೋಕದ ಜೀವ ಸಂವೇದನೆ ವೈಯಕ್ತಿಕತೆಯ ಕಿರು ಪರಿಧಿಯಲ್ಲಿ ಹರಿಯುವುದಲ್ಲ; ಮೋಡಗಳಿಗೆ ನೀರು ಕುಡಿಸುವ, ಸೂರ್ಯನಿಗೆ ಹೆಗಲು ಕೊಡುವ, ತನ್ಮುಖೇನ ಕನಸುಗಳ ಬೀಜ ಬಿತ್ತುವ ಹಂಬಲದಲ್ಲಿ ತುಂಬಿ ಮೊರೆಯುವುದು’ ಎಂದು ಪ್ರಶಂಸಿಸಿದ್ದಾರೆ.

About the Author

ಕಾಶೀನಾಥ ಅಂಬಲಗೆ
(10 July 1947)

ಕಾಶೀನಾಥ ಅಂಬಲಗೆ ಅವರು ಹುಟ್ಟಿದ್ದು 10-07-1947 ರಲ್ಲಿ. ಬೀದರ ಜಿಲ್ಲೆಯ, ಬಸವಕಲ್ಯಾಣ ತಾಲೂಕಿನ ಮುಚಳಂಬಿ ಎಂಬ ಗ್ರಾಮದಲ್ಲಿ. ಇವರ ತಂದೆ ರಾಚಪ್ಪ ಅಂಬಲಗೆ, ತಾಯಿ ಗುರಮ್ಮ ಅಂಬಲಗೆ. ಕನ್ನಡದಲ್ಲಿ ಎಂ.ಎ ಪದವಿ ಪಡೆದ ಅಂಬಲಗೆ ಹಿಂದಿ ಭಾಷೆಯಲ್ಲೂ ಎಂ.ಎ ಪದವಿ ಗಳಿಸಿದ್ದಾರೆ. ಬಿ.ಎಡ್ ಜೊತೆಗೆ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಪಿಎಚ್.ಡಿ ಪದವಿಯನಂತರ ಅಧ್ಯಾಪಕ ವೃತ್ತಿಯನ್ನು ಆಯ್ದುಕೊಂಡ ಅವರು ಮಹಾವಿದ್ಯಾಲಯದಲ್ಲಿ 21ವರ್ಷ, ವಿಶ್ವವಿದ್ಯಾಲಯದಲ್ಲಿ 12 ವರ್ಷ ಹಿಂದಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಜೊತೆಗೆ ಪಿಎಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿಯೂ ತೊಡಗಿಸಿಕೊಂಡಿದ್ದಾರೆ.  ಕವಿ, ಲೇಖಕ, ಸಾಹಿತಿ, ಕಾದಂಬರಿಗಾರರಾದ ಅಂಬಲಗೆ ಅನುವಾದಕರಾಗಿಯೂ ಪ್ರಸಿದ್ಧರು. ಜೊತೆಗೆ ...

READ MORE

Related Books