ಒಡಲ ಬೆಂಕಿ

Author : ವಿಠ್ಠಲ ಭಂಡಾರಿ

Pages 40

₹ 10.00
Published by: ಚಿಂತನ ಪುಸ್ತಕ
Address: # 1863, 11 ನೇ ಮುಖ್ಯರಸ್ತೆ , 38 ನೇ ಅಡ್ಡ ರಸ್ತೆ, 4 ಟಿ ಬ್ಲಾಕ್ , ಜಯನಗರ , ಬೆಂಗಳೂರು -560041

Synopsys

ಕನ್ನಡ ಕವಿಗಳು ತಮ್ಮ ಕವನಗಳಲ್ಲಿ ಹಸಿವಿನ ಸಮಸ್ಯೆಯನ್ನು ಹೇಗೆ ಕಂಡಿದ್ದಾರೆ ಎಂದು ದಾಖಲಿಸುವ ಕವನಗಳು , ಜಾನಪದ ರಚನೆಗಳು , ವಚನಗಳು , ತತ್ವಪದಗಳ  ಸಂಕಲನ ಒಡಲ ಬೆಂಕಿ. ಈ ಸಂಕಲನದಲ್ಲಿ ಕವಿಗಳು ಜನಪದ ಗೀತೆಗಳಿಂದ ಹಿಡಿದು ಚಳವಳಿಯ ಉಪವಸ್ತುವಿನಂತಿರುವ ವಚನ ಸಾಹಿತ್ಯವನ್ನೂ ಒಳಗೊಂಡು ಕನ್ನಡದ ಬಹುಮುಖ್ಯ ಹಿರಿಯ ಕಿರಿಯ ಕವನಗಳು ಸೇರಿವೆ. 

About the Author

ವಿಠ್ಠಲ ಭಂಡಾರಿ
(27 June 1970 - 07 May 2021)

.ಲೇಖಕ ವಿಠ್ಠಲ ಭಂಡಾರಿ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ  ಹೊನ್ನಾವರ ತಾಲ್ಲೂಕಿನ ಕೆರೆಕೋಣ ಗ್ರಾಮದವರು. ಸದ್ಯ, ಎಂಜಿಎಸ್ ಮತ್ತು ಜಿಎಚ್ ಡಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದಾರೆ. ದೇಶದ ಪ್ರಜಾಪ್ರಭುತ್ವ ಮೌಲ್ಚಗಳನ್ನು ಪ್ರತಿಪಾದಿಸುವ ‘ಸಂವಿಧಾನದ ಓದು’ ಚಳವಳಿಯ ಮೂಲಕ ರಾಜ್ಯದಾದ್ಯಂತ ಚಿರಪರಿಚಿತರು. ಸಾಹಿತಿ ಆರ್.ವಿ.ಭಂಡಾರಿ ಅವರ ಪುತ್ರರು. ಕೃತಿಗಳು: ಒಡಲ ಬೆಂಕಿ (ಕವನ ಸಂಕಲನ) ಹಾಗೂ ಪ್ರೀತಿಯ ಕಾಳು (ಮಕ್ಕಳ ಕವನ ಸಂಕಲನ) ರಚಿಸಿದ್ದರು. ಕೋವಿಡ್ ನಿಂದ ಅಸ್ವಸ್ಥರಾಗಿದ್ದ ಅವರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ 2021ರ ಮೇ 7 ರಂದು ನಿಧನರಾದರು.    ...

READ MORE

Related Books