ಯಕ್ಷ-ಯಕ್ಷಿ

Author : ದ.ರಾ. ಬೇಂದ್ರೆ (ಅಂಬಿಕಾತನಯದತ್ತ)

Pages 77

₹ 60.00
Year of Publication: 1958
Published by: ಶ್ರೀಮಾತಾ ಪ್ರಕಾಶನ
Address: ವಿಶ್ವಶ್ರಮ ಚೇತನ, ಹುಬ್ಬಳ್ಳಿ-580 003

Synopsys

ಮುಗಿಲ ಮಲ್ಲಿಗೆ ಕವನ ಸಂಕಲನದ ನಂತರ 1962 ರಲ್ಲಿ ಬೇಂದ್ರೆಯವರು ಪ್ರಕಟಿಸಿದ ಸಂಕಲನ ಯಕ್ಷ-ಯಕ್ಷಿ. ಈ ಸಂಕಲನದಲ್ಲಿ 42 ಕವಿತೆಗಳಿವೆ. ಆಷಾಢ, ಶುಕ್ಲ ಏಕಾದಶಿಗೆ ಶಯನಿ ಏಕಾದಶಿ ಎನ್ನುತ್ತಾರೆ. ಈ ಏಕಾದಶಿಗೆ ಸಂಬಂದಿಸಿದಂತೆ ಒಬ್ಬ ಯಕ್ಷನ ಕುರಿತ ಕತೆಯೊಂದಿದೆ.

ಪಾಂಡವರಲ್ಲಿ ಹಿರಿಯನಾದ ಧರ್ಮರಾಯನಿಗೆ ಶ್ರೀಕೃಷ್ಣ ಹೇಳಿದ ಕಥೆಯಿದು. ಕುಬೇರನಿಗೆ ಹೇಮಾಮಾಲಿ ಎಂಬ ಸೇವಕ ಇದ್ದ. ಆ ಸೇವಕ ಹೂವು ಕೊಡುವ ಕೆಲಸದಲ್ಲಿ ತಪ್ಪಿದ.ಅದಕ್ಕಾಗಿ ಕುಬೇರನು ಅವನಿಗೆ ಶಾಪ ನೀಡಿದ. ಏಕಾದಶಿ ದಿನ ದೇವರನ್ನು ಮಲಗಿಸಲಾಗುತ್ತದೆ. ದೇವರೇ ನಿದ್ದೆ ಮಾಡುವ ದಿನ ಯಕ್ಷ-ಯಕ್ಷಿಗೆ ಅನ್ಯಾಯವಾದದ್ದು ಸಹಜವೇ ಸರಿ. ಇದಕ್ಕೆ ಯೋಗಿನಿ ಏಕಾದಶಿ ಎಂದು ಹೇಳುತ್ತಾರೆ. ಅದೇ ದಿನ ಯಕ್ಷಣಿಗೆ ಯೋಗ ಶಕ್ಷೆ. ಕಾರ್ತಿಕ ಶುಕ್ಲ ಏಕಾದಶಿಯನ್ನು ಉತ್ಥಾನ ಏಕಾದಶಿ-ಭೋಧಿನಿ ಏಕಾದಶಿ ಎಂದು ಕರೆಯುತ್ತಾರೆ. ಅಂದು ದೇವರು ಏಳುತ್ತಾನೆ. ತುಳಸಿಯ ಕೂಡ ಅವನ ಮದುವೆಯಾಗುತ್ತದೆ. ಕರಿಯ ತುಳಸಿಗೆ ಕುಬೇರಕ ಎನ್ನುತ್ತಾರೆ. ಭಾಗವತ ಸಂಪ್ರದಾಯಕ್ಕೆ ಸೇರಿದ ಜನ ಆಷಾಢ ಮತ್ತು ಕಾರ್ತಿಕ ಏಕಾದಶಿಗೆ ಪಂಢರಪುರಕ್ಕೆ ಹೋಗುತ್ತಾರೆ. ಒಂದು ವ್ರತ ಕಥೆಯನ್ನು ಕಾವ್ಯವಾಗಿ ಪರಿವರ್ತನೆ ಮಾಡಿದ್ದು ಕಾಳಿದಾಸ.

ಕಾಳಿದಾಸನ ಮಹಾಪ್ರತಿಭೆ ಯಕ್ಷ-ಯಕ್ಷಿಯರನ್ನು ಕಾವ್ಯವಾಗಿ ಮಾರ್ಪಡಿಸಿದೆ. ವರಾಹ ಪುರಾಣವು ಕಾರ್ತಿಕದಲ್ಲಿ ಶಕುಂತಲೆ ಧರಣಿ ವ್ರತ ಆಚರಿಸಿದ್ದಳು ಎಂದು ಹೇಳುತ್ತದೆ. ಇದನ್ನು ಯೋಗೇಶ್ವರ ದ್ವಾದಶಿ ವ್ರತ ಎನ್ನುತ್ತಾರೆ. ಯಕ್ಷನ ವಿಯೋಗ ಹೋಗಿ ಯೋಗವಾಗುವುದರಿಂದ ಅದನ್ನು ಯೋಗೇಶ ದ್ವಾದಶಿ ಎನ್ನಲಾಗುತ್ತದೆ. ಮಹಾಕವಿ ಕಾಳಿದಾಸನ ಕಾವ್ಯ ಕಲ್ಪನೆಯಲ್ಲಿ ಅರಳಿದ ಯಕ್ಷ –ಯಕ್ಷಿಯರು ಅಂಬಿಕಾತನಯದತ್ತರ ಕಾವ್ಯ ಮೂಸೆಯಲ್ಲಿ ಮರುಹುಟ್ಟು ಪಡೆಯುತ್ತಾರೆ. ಇದೊಂದು ಮಹತ್ವದ ಅನುಸೃಷ್ಟಿ. ಯಕ್ಷ-ಯಕ್ಷಿಯರ ವಿರಹ ವೇದನೆ ಈ ಕಾವ್ಯದ ಪ್ರಮುಖ ಸಂಗತಿ.

ಚೀನಾದ ತತ್ವಜ್ಞಾನಿ ಲಾ-ಓ-ಸೇ ಯ ಬರಹಗಳಿಂದ ಪ್ರೇರಿತರಾದ ಬೇಂದ್ರೆ ಮೂರು ಕವಿತೆಗಳನ್ನು ರಚಿಸಿದ್ದಾರೆ. ಬೇಂದ್ರೆಯವರು 4 ಭಾಗಗಳ ಒಂದು ಪ್ರಗಾಥ ರಚಿಸಿದ್ದಾರೆ. ಮೊದಲ ’ರಾಮಕೃಷ್ಣ ಹರೇ ವಿಠ್ಠಲ’ ಎಂಬ ಭಾಗ ’ಸಂಚಯ’ದಲ್ಲಿ ಪ್ರಕಟವಾಗಿತ್ತು. ಈ ಸಂಕಲನದಲ್ಲಿ ವಸಂತದರ್ಶನ, ಆಂಜನಯ ಜನ್ಮ ರಾಮಾಯಣದ ಅಶೃತ ಧ್ವನಿ ಎಂಬ ಭಾಗಗಳು ಯಕ್ಷ-ಯಕ್ಷಿ ಸಂಕಲನದಲ್ಲಿ ಸೇರಿಕೊಂಡಿವೆ. ’ಉತ್ತರಾಯಣ’ ಸಂಕಲನದಲ್ಲಿ ’ಜೀವಪುಷ್ಪ’ ಎಂಬ ಕವಿತೆಯ ಮೊದಲ ಮೂರು ನುಡಿಗಳು ಪ್ರಕಟವಾಗಿದ್ದವು. ಅದರ ಇಡಿಯಾದ ಕವಿತೆ ಈ ಸಂಕಲನದಲ್ಲಿದೆ. ಕಲೆಯಿಂದ ಉದ್ದಾರವೂ ಆದೀತು. ಸಂಹಾರವೂ ಆದೀತು. ಕಲಾವಂತನಲ್ಲಿ ಜೀವದ ಶುದ್ದಿ ಬೇಕು. ಪೈಶಾಚಿನ ಉನ್ಮತ್ತತೆ ನಡೆಯದು. ಕಲೆಯ ಭಯಾನಕತೆಯನ್ನು ಅನುಭವಿಸಿ ಬರೆದ ಪಂಚಬಾಣ, ಹಾಗೂ ಸಾಧನಕೇರಿಯ ದಾರಿಯಲ್ಲಿ ಬೇಂದ್ರೆಯವರು ನಡೆಯುವಾಗ ಕುನ್ನಿಯೊಂದು ಕಾಲಕಾಲಲ್ಲಿ ಅಡ್ಡ ಬರುತ್ತಿತ್ತು. ಅವರು ಸಂತೆಗೆ ಹೋಗಿ ಮರಳಿ ಬರುವಷ್ಟರಲ್ಲೆ ಯಾರದೊ ಕಾರಿಗೆ ಸಿಕ್ಕಿ ಸತ್ತು ಬಿದ್ದಿತ್ತು. ಆ ತಳಮಳ ಮತ್ತು ಅದರ ಸಾಂತ್ವನಕ್ಕಾಗಿ ಬರೆದ ಕವಿತೆ ’ನೀಗಿತು ಜನ್ಮ ನಾಯಿಯ ಕುನ್ನಿ’ ಹೀಗೆ ವೈವಿದ್ಯಮಯ ಕವಿತೆಗಳಿರುವ ಯಕ್ಷ-ಯಕ್ಷಿ ಓದುಗನ ಮನ ಸೆಳೆಯುತ್ತದೆ.

About the Author

ದ.ರಾ. ಬೇಂದ್ರೆ (ಅಂಬಿಕಾತನಯದತ್ತ)
(31 January 1896 - 26 October 1981)

ಕನ್ನಡ ಕಾವ್ಯದ ಸೊಬಗು-ಸೊಗಸು ಹೆಚ್ಚಿಸಿದ ‘ಅಂಬಿಕಾತನಯದತ್ತ’ ಕಾವ್ಯನಾಮದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರನ್ನು ‘ವರಕವಿ’, ‘ಗಾರುಡಿಗ’ ಎಂದು ಗುರುತಿಸಲಾಗುತ್ತದೆ. ತಂದೆ ರಾಮಚಂದ್ರ ತಾಯಿ ಅಂಬವ್ವ. ಧಾರವಾಡದಲ್ಲಿ 1896ರ ಜನವರಿ 31ರಂದು ಜನಿಸಿದರು. ಧಾರವಾಡದಲ್ಲಿ ಮೆಟ್ರಿಕ್ (1913) ಮುಗಿಸಿದ ಮೇಲೆ ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಬಿ.ಎ. (1918) ಪದವಿ ಪಡೆದರು. ಕೆಲವು ಕಾಲ ಅಧ್ಯಾಪಕ ವೃತ್ತಿ ಮಾಡಿದ ಮೇಲೆ ಮುಂಬಯಿ ವಿಶ್ವವಿದ್ಯಾನಿಲಯದಿಂದ ಎಂ.ಎ. (1935) ಪದವಿ ಪೂರ್ಣಗೊಳಿಸಿದರು. ಗದುಗಿನ ವಿದ್ಯಾದಾನ ಸಮಿತಿ ಪ್ರೌಢಶಾಲೆಯಲ್ಲಿ ಹೆಡ್ ಮಾಸ್ಟರ್ ಆಗಿ ವೃತ್ತಿ ಆರಂಭಿಸಿದ ಅವರು ನಂತರ ಹುಬ್ಬಳ್ಳಿಯ ನ್ಯೂ ...

READ MORE

Related Books