ರೆಡ್ ಲೈಟ್ ಮತ್ತಿತರ ಕವನಗಳು

Author : ನಳಿನ ಡಿ.

Pages 96

₹ 70.00
Year of Publication: 2013
Published by: ಮಿಷಾ ಪ್ರಕಾಶನ
Address: ಬೆಂಗಳೂರು

Synopsys

‘ರೆಡ್ ಲೈಟ್ ಮತ್ತಿತರ ಕವನಗಳು’ ಕೃತಿಯು ಲೇಖಕಿ  ನಳಿನಿ ಡಿ. ಅವರ ಕವನ ಸಂಕಲನವಾಗಿದೆ. ಕನ್ನಡ ಪುಸ್ತಕ ಪ್ರಾಧಿಕಾರದ ಧನಸಹಾಯ ಪಡೆದ ಕೃತಿ.. ಕೃತಿಗೆ ಬೆನ್ನುಡಿ ಬರೆದಿರುವ ಎಚ್. ಎಸ್. ವಿ. ಅವರು, ‘ ಒಳ್ಳೆಯ ಕವಿತೆಗೆ ಅತ್ಯಗತ್ಯವಾದ ಭಾಷೆ-ಲಯ-ಪ್ರತಿಮಾ ವಿಧಾನಗಳ ಹುಡುಕಾಟದಲ್ಲಿ ಈ ಕವಿ ಇದ್ದಾರೆ. ಗಂಡು-ಹೆಣ್ಣಿನ ನಡುವಿನ ಆಕರ್ಷಣೆ-ವಿಕರ್ಷಣೆಗಳು ಅವರ ಪ್ರಧಾನ ಆಸಕ್ತಿ ಜೊತೆಗೆ ಸ್ತ್ರೀತ್ವದ ಆಸ್ಮಿತೆಯನ್ನು ಸ್ಥಾಪಿಸುವ ಛಲ. ಕವಿತೆಯ ವಿಧಾನ ಪ್ರಧಾನವಾಗಿ ಭಾವಗೀತಾತ್ಮಕವಾದುದು, ಪ್ರಣತಿ, ನಿರೀಕ್ಷೆ, ಬೆಳ್ಳಿಗೆರೆ, ಮಹಾವೃಕ್ಷ ಮುಂತಾದ ರಚನೆಗಳು ಕಾವ್ಯಾಸಕ್ತರ ಆಸಕ್ತಿ ಕುದುರಿಸುವಂತಿವೆ’ ಎಂದಿದ್ದಾರೆ.

 

About the Author

ನಳಿನ ಡಿ.
(16 August 1982)

ಕವಯತ್ರಿ ನಳಿನ ಡಿ. ಅವರು 1982 ಆಗಸ್ಟ್ 16 ರಂದು ಚಿಕ್ಕಮಂಗಳೂರಿನಲ್ಲಿ ಜನಿಸಿದರು. ಕನ್ನಡಪ್ರಭದ 'ಬೈಟು ಕಾಫಿ'ಗೆ ’ದೋಣಿ ವಿಭಾ’ಕ್ಕೆ ಹಲವಾರು ಪ್ರಮುಖ ಕವಿಗಳ ಸಂದರ್ಶನ ಮಾಡಿದ್ದಾರೆ. ಅವರ ಮಹಿಳಾ ಪರವಾದ ಹತ್ತಾರು ಲೇಖನಗಳನ್ನು ಕನ್ನಡದ ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 'ಭಾವ-ಬೆಳಕು' ಅಂಕಣ ಸುವರ್ಣ ಟೈಮ್ಸ್ ಆಫ್ ಕರ್ನಾಟಕದಲ್ಲಿ ಪ್ರಕಟವಾಗಿತ್ತು. ರೆಡ್ ಲೈಟ್ ಮತ್ತಿತರ ಕವನಗಳು ಎಂಬ ಪುಸ್ತಕವು ಕನ್ನಡ ಪುಸ್ತಕ ಪ್ರಾಧಿಕಾರದ ಪ್ರೋತ್ಸಾಹ ಧನ ಪಡೆದು ಪ್ರಕಟವಾಗಿದೆ. ಕರ್ನಾಟಕ ಲೇಖಕಿಯರ ಸಂಘದಿಂದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ ಪ್ರಶಸ್ತಿ ಲಭಿಸಿದೆ. ...

READ MORE

Related Books