ಎದೆನೆಲದ ಕಾವು

Author : ರತ್ನಾಕರ ಸಿ. ಕುನುಗೋಡು

Pages 144

₹ 150.00
Year of Publication: 2022
Published by: ಕಾಳಿಂಗ ಪ್ರಕಾಶನ
Address: ಶ್ರೀರಂಗ, ನಂ 59, 2ನೇ ಹಂತ, ಅಲ್- ಹರೀಂ ಬಡಾವಣೆ, ಗೋಪಾಳ, ಶಿವಮೊಗ್ಗ - 577201
Phone: 9449951746

Synopsys

ರತ್ನಾಕರ ಸಿ. ಕುನುಗೋಡು ಅವರ ಕವನಗಳ ಸಂಕಲನ ಎದೆನೆಲದ ಕಾವು . 2022ನೇ ಸಾಲಿನ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಪುರಸ್ಕೃತ ಕೃತಿ ಇದಾಗಿದೆ. ಕೃತಿಗೆ ಹರಸಿದ ಹಿರಿಯ ಸಾಹಿತಿಗಳು ಡಾ.ನಾ.ಡಿಸೋಜ ಅವರು ಮುನ್ನುಡಿ ಬರೆದಿದ್ದಾರೆ. ಡಾ. ಕಲೀಮ್ ಉಲ್ಲಾ ಅವರು ಬೆನ್ನುಡಿಯ ಮಾತುಗಳನ್ಕೃನು ಬರೆದಿದ್ದಾರೆ.

About the Author

ರತ್ನಾಕರ ಸಿ. ಕುನುಗೋಡು

ಡಾ.ರತ್ನಾಕರ ಸಿ. ಕುನುಗೋಡು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಎರೆಕೊಪ್ಪದವರು. ತಾಯಿ-ನಿಂಗಮ್ಮ, ತಂದೆ- ಚನ್ನಬಸಪ್ಪ. ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ, ಪ್ರಸ್ತುತ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸ.ಪ್ರ.ದ.ಕಾಲೇಜು, ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆ ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮೊದಲಿನಿಂದಲೂ ಸಾಹಿತ್ಯ, ರಂಗಭೂಮಿ, ಸಂಘಟನೆ, ಸಾಮಾಜಿಕ ಪರಿವರ್ತನೆಗಳತ್ತ ಒಲವು ಮೂಡಿಸಿಕೊಂಡು ಕ್ರಿಯಾಶೀಲರಾಗಿರುವ ಅವರು ಕವಿತೆಗಳು ಮತ್ತು ಸಂಶೋಧನಾ ಲೇಖನಗಳ ಬರಹದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರು ಪಿಹೆಚ್ ಡಿ ಗಾಗಿ ಬೇರು ಬಿಳಲು ಎಂಬ ಸಂಶೋಧನಾ ಮಹಾಪ್ರಬಂಧವನ್ನು ರಚಿಸಿ ಪ್ರಕಟಿಸಿದ್ದಾರೆ. ...

READ MORE

Related Books