ಮುಸ್ಸಂಜೆಯ ನೋಟ

Author : ಅರುಣ ರಾವ್

Pages 60

₹ 60.00
Year of Publication: 2019
Published by: ಅನನ್ಯ ಪ್ರಕಾಶನ
Address:  #22, ಕನಕಧಾರಾ, ಅಂದ್ರಹಳ್ಳಿ, ತಿಗಳರ ಪಾಳ್ಯ ಮುಖ್ಯರಸ್ತೆ, ಬೆಂಗಳೂರು-58
Phone: 9449133457

Synopsys

ಕವಯತ್ರಿ ಅರುಣ ರಾವ್ ಅವರ ಮೊದಲ ಕವನ ಸಂಕಲನ-ಮುಸ್ಸಂಜೆಯ ನೋಟ. ಖ್ಯಾತ ಹನಿಗವಿ ಜರಗನಹಳ್ಳಿ ಶಿವಶಂಕರ್ ಕೃತಿಗೆ ಮುನ್ನುಡಿ ಬರೆದು ‘ ಇಲ್ಲಿಯ ಕವನಗಳಲ್ಲಿ ವಿಶೇಷತೆ ಎಂದರೆ ಗೇಯತೆ. ಪ್ರಸ್ತುತ ಸಂದರ್ಭದಲ್ಲಿ ಗೇಯತೆ, ಪ್ರಾಸಕ್ಕೆ ಹೆಚ್ಚು ಮಾನ್ಯತೆ ನೀಡುತ್ತಿಲ್ಲ. ಆದರೆ, ಈ ಕವಯತ್ರಿ, ನವೋದಯ ಸಂದರ್ಭದ ಕವಿತೆಗಳಲ್ಲಿದಟ್ಟವಾಗಿ ಕಾಣಬರುವ ಭಕ್ತಿ, ನಾಡು-ನುಡಿ ಅಭಿಮಾನ, ಗೇಯತೆಯನ್ನು ಹೆಚ್ಚಾಗಿ ಅನುಸರಿಸಿದ್ದಾರೆ. ಯಾವುದೇ ತಿಣುಕಾಟವಿಲ್ಲದೆ ಸರಳ, ಸುಂದರವಾಗಿ ಸಹೃದಯರನ್ನು ತಲುಪುತ್ತವೆ. ಈ ಸಂಕಲನದ ಕವಿತೆಗಳು ಒಂದು ಸೀಮಿತ ವಯೋಮಾನಕ್ಕೆಂದು ಗುರುತಿಸಿಕೊಳ್ಳದೇ ಮಕ್ಕಳಿಂದ ಮುದುಕರವರೆಗೆ ಸಲ್ಲುತ್ತದೆ ಎಂದು ನನ್ನ ಮೆಚ್ಚುಗೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

 

 

About the Author

ಅರುಣ ರಾವ್

ಲೇಖಕಿ ಅರುಣ ರಾವ್ ಅವರು ಮೂಲತಃ ಬೆಂಗಳೂರಿನವರು. 1978ರಲ್ಲಿ ಜನನ. ಬೆಂಗಳೂರು ವಿಶ್ವ ವಿದ್ಯಾನಿಲಯದಿಂದ ಕನ್ನಡದಲ್ಲಿ ಎಂಎ ಹಾಗೂ ಬಿ.ಎಡ್ ಪದವೀಧರರು. ತರಂಗ, ಮಂಗಳ, ಕರ್ಮವೀರ, ಜನಮಿತ್ರ, ಪ್ರಜಾಪ್ರಗತಿ ಮುಂತಾದ ಪತ್ರಿಕೆಗಳಿಗೆ ಕತೆ, ಕವನ, ಲೇಖನಗಳನ್ನು ಬರೆದಿದ್ದಾರೆ.  ಪ್ರಸ್ತುತ ಬೆಂಗಳೂರಿನ ಆರ್.ಪಿ.ಸಿ ಬಡಾವಣೆಯ ನ್ಯೂ ಕೇಂಬ್ರಿಡ್ಜ್ ಪ್ರೌಢ ಶಾಲೆಯಲ್ಲಿ ಕನ್ನಡ ಅಧ್ಯಾಪಕಿಯಾಗಿದ್ದಾರೆ. ಮುಸ್ಸಂಜೆಯ ನೋಟ-ಎಂಬುದು ಅವರ ಮೊದಲ ಕವನ ಸಂಕಲನ.  ...

READ MORE

Related Books