ಒಡಲು

Author : ವಿಶ್ವನಾಥ ಎನ್ ಗೌಡ

Pages 96

₹ 100.00




Year of Publication: 2019
Published by: ಕನಸು ಪ್ರಕಾಶನ
Address: ಕೊಪ್ಪಲು, ಹೊಸೂರ್ ತಾಲೂಕು, ಮೈಸೂರು ಜಿಲ್ಲೆ

Synopsys

‘ಒಡಲು’ ಕವಿ ವಿಶ್ವನಾಥ ಎನ್ ಗೌಡ ಅವರ ಚೊಚ್ಚಲ ಕವನ ಸಂಕಲನ. ಕುವೆಂಪು, ದ.ರಾ.ಬೇಂದ್ರೆ, ಸಿದ್ದಲಿಂಗಯ್ಯ, ದೇವನೂರು ಮಹಾದೇವ ಇಂತಹ ಮಹಾನ್ ಚೇತನಗಳ ಬರಹಗಳಿಂದ ಪ್ರೇರಣೆ ಪಡೆಯುತ್ತಾ ಅವರು ಹಾಕಿಕೊಟ್ಟ ಹಾದಿಯಲ್ಲಿ ಹೆಜ್ಜೆ ಇಡುತ್ತಿರುವ ಯುವ ಕವಿ ವಿಶ್ವನಾಥ ಎನ್ ಗೌಡ. ಅವರ ಚೊಚ್ಚಲ ಕೃತಿಯಲ್ಲಿ ತಾಯಿಯ ಮಮತೆ, ಪ್ರಕೃತಿ ಸೌಂದರ್ಯ, ರೈತನ ಬವಣೆ, ಅಪ್ಪನ ಅಕ್ಕರೆ, ತಾತನ ನೆನಪು, ಪ್ರೀತಿಯ ನವಿರಾದ ಭಾವಗಳು, ಜನರ ಮೂಢತನದ ಡಾಂಭಿಕ ಭಕ್ತಿ ಭಾಷಾಭಿಮಾನ ಹೀಗೆ ಹತ್ತು ಹಲವು ರೀತಿಯಲ್ಲಿ ಭಾವಪರವಶಗೊಂಡ ನವರಸಗಳು ಮಿಳಿತಗೊಂಡ ಕವನಗಳು, ಗ್ರಾಮೀಣ ಸೊಗಡಿನೊಂದಿಗೆ ಓದುಗನ ಮನಸೂರೆಗೊಳ್ಳುತ್ತವೆ. ಸುಲಲಿತವಾಗಿ ಓದಿಸಿಕೊಂಡು ಹೋಗುವ ಭಾಷಾಶೈಲಿ ಸುಂದರ ಪದಪುಂಜ ಭರಿತವಾದ ಇವರ ಕವನ ಸಂಕಲನ ಒಡಲು ಸಾಹಿತ್ಯಿಕ ಕಡಲು ಎನ್ನಬಹುದು.

About the Author

ವಿಶ್ವನಾಥ ಎನ್ ಗೌಡ
(15 July 1988)

ವಿಶ್ವನಾಥ ಎನ್ ಗೌಡ ಅವರು ಮೂಲತಃ ಮೈಸೂರಿನವರು. ಮೈಸೂರಿನ ಹುಣಸೂರು ತಾಲೂಕಿನ ರಂಗಯ್ಯನ ಕೊಪ್ಪಲು ಇವರ ಹುಟ್ಟೂರು. ತಂದೆ ನಾಗೇಗೌಡ, ತಾಯಿ- ಲಲಿತ. ಕುವೆಂಪು, ಬೇಂದ್ರೆ, ಸಿದ್ದಲಿಂಗಯ್ಯ, ದೇವನೂರು ಮಹಾದೇವ ಇಂತಹ ಮಹಾನ್ ಚೇತನಗಳ ಬರಹಗಳಿಂದ ಪ್ರೇರಣೆ ಪಡೆದು ಸಾಹಿತ್ಯ ರಚನೆಯಲ್ಲಿ ತೊಡಗಿದವರು. ವಿಶ್ವನಾಥ ಎನ್ ಗೌಡ ಅವರ ಚೊಚ್ಚಲ ಕವನ ಸಂಕಲನ ‘ಒಡಲು’ ಪ್ರಕಟಗೊಂಡಿದೆ.  ...

READ MORE

Related Books