ಸೋಜುಗದ ಸೂಜು ಮಲ್ಲಿಗೆ

Author : ಎ.ಎಸ್. ಮಕಾನದಾರ

Pages 160

₹ 175.00




Year of Publication: 2020
Published by: ನಿರಂತರ ಪ್ರಕಾಶನ
Address: ಗದಗ

Synopsys

ಲೇಖಕ ಎ.ಎಸ್. ಮಕಾನದಾರ ಅವರು ಸಂಪಾದಿಸಿದ ಮಹಿಳಾ ಪ್ರಾತಿನಿಧಿ ಕವನ ಸಂಕಲನ-ಸೂಜುಗದ ಸೂಜು ಮಲ್ಲಿಗೆ. ರಾಜ್ಯದ 10 ಜಿಲ್ಲೆಯ 10 ಕವಯತ್ರಿಯರ ತಲಾ 10 ಕವಿತೆಗಳನ್ನು ಹೀಗೆ ಒಟ್ಟು 100 ಕವಿತೆಗಳನ್ನು ಸಂಪಾದಿಸಿದ ಲೇಖಕರ ಶ್ರಮ ಇಲ್ಲಿದೆ.  101ನೆಯ ಹಾಗೂ ಕೊನೆಯ ಕವಿತೆಯಾಗಿ ‘ಖಾಲಿ ಕವಿತೆ” ಎಂಬ ಶೀರ್ಷಿಕೆಯಡಿ ಗಮನ ಸೆಳೆಯುತ್ತದೆ. ಪ್ರತಿ ಕವಿತೆಗೂ ರೇಖಾಚಿತ್ರಗಳಿದ್ದು, ಸಂಕಲನದ ವೈಶಿಷ್ಟ್ಯವನ್ನು ಹೆಚ್ಚಿಸಿದೆ. 

ಕೃತಿಗೆ ಬೆನ್ನುಡಿ ಬರೆದ ಸಾಹಿತಿ ಯಲ್ಲಪ್ಪ ಬಿ. ಹಿಮ್ಮಡಿ ‘ಕರ್ನಾಟಕದ ಆಯ್ದ ಮಹಿಳಾ ಕವಯತ್ರಿಯರ ಕವಿತೆಗಳನ್ನು ಪ್ರಾತಿನಿಧಿಕವಾಗಿ ಸಂಗ್ರಹಿಸಿ, ಸಂಪಾದಿಸಿದ್ದೇ ಈ ಕೃತಿ.  ವೈರುಧ್ಯಗಳ ನಡುವೆ ನರಳುವ ಅಸಂಖ್ಯಾತ ಮಹಿಳೆಯರ ನೋವು, ಪುಟಿಯುವ ಜೀವನ ಪ್ರೀತಿಯನ್ನು ಇಲ್ಲಿಯ ಕವಿತೆಗಳು ತುಂಬಾ ಕಲಾತ್ಮಕವಾಗಿ ಅನಾವಣಗೊಳಿಸುತ್ತವೆ. ಹೊಸ ಹೊಸ ಪರಿಭಾಷೆಗಳನ್ನು ಕಟ್ಟಿಕೊಡುತ್ತವೆ. ಹೀಗಾಗಿ, ಕವಿತೆಗಳಲ್ಲಿ ಗಟ್ಟಿತನವಿದೆ’ ಎಂದು ಪ್ರಶಂಸಿಸಿದ್ದಾರೆ.  

 

About the Author

ಎ.ಎಸ್. ಮಕಾನದಾರ

ಲೇಖಕ ಎ. ಎಸ್. ಮಕಾನದಾರ ಅವರ ಹುಟ್ಟೂರು ಗಜೇಂದ್ರಗಡ. ಪ್ರಸ್ತುತ ಗದುಗಿನ ಒಂದನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದಾರೆ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ 10 ಸ್ವತಂತ್ರ ಕೃತಿಗಳನ್ನು, 16 ಸಂಪಾದಿತ ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ವಿಶ್ವವಿದ್ಯಾಲಯದ ಬಿ.ಎ., ಬಿ.ಕಾಂ., ಬಿ.ಎಸ್ಸಿ., ಬಿ.ಎಸ್.ಡಬ್ಲೂ ಮೊದಲ ಸೆಮಿಸ್ಟರ್ ಗೆ ‘ಅಮ್ಮನ ಬಿಕ್ಕಳಿಕೆ ನಿಲ್ಲಿಸುವಿರಾ’ ಎಂಬ ಇವರ ಕವಿತೆ ಪಠ್ಯ ವಾಗಿ ಸೇರ್ಪಡೆ ಯಾಗಿದೆ.  ಪ್ರಶಸ್ತಿ-ಗೌರವಗಳು:  ಸರಕಾರದಿಂದ ಜಿಲ್ಲಾ ಸರ್ವೋತ್ತಮ ಸೇವಾ ಪುರಸ್ಕಾರ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪುರಸ್ಕಾರ, ಸಂತ ಶಿಶುನಾಳ ಶರೀಫ ಪುರಸ್ಕಾರ, ಭಾವೈಕ್ಯ ಪುರಸ್ಕಾರ, ರಾಷ್ಟ್ರಕೂಟ ಸಾಹಿತ್ಯ ಶ್ರೀ ಪುರಸ್ಕಾರ, ಕೊಪಳ ...

READ MORE

Related Books