ಸುಂದರ ಭೂಮಿ

Author : ಹ.ಶಿ. ಭೈರನಟ್ಟಿ

₹ 60.00
Year of Publication: 2014
Published by: ವಿವಿದ್ಲಿಪಿ
Address: ಬೆಂಗಳೂರು

Synopsys

‘ಸುಂದರ ಭೂಮಿ’ ಕೃತಿಯು ಹ.ಶಿ. ಭೈರನಟ್ಟಿ ಅವರ ಕವನಸಂಕಲನವಾಗಿದೆ. ಇಲ್ಲಿಯ ಕವನಗಳಲ್ಲಿ ತಿಳಿಹಾಸ್ಯವಿದೆ. ಆಳವಾದ ಚಿಂತನ- ಮಂಥನಗಳಿವೆ. ಎದೆ ತಲುಪಿ ಮನವರಳಿಸುವ ಸೂಕ್ಷ್ಮ ಸಂವೇದನಾ ಭಾವನೆಗಳಿವೆ, ಸಮಾಜ, ದೇಶದ ಭವಿಷ್ಯ ಕುರಿತ ದುಗುಡ ಇದೆ. ಸ್ವಾರ್ಥಿಗಳ ಆಷಾಢಭೂತಿಗಳ ವಿಡಂಬನೆ ಇದೆ. ಕೆಲವೇ ಸಾಲುಗಳಲ್ಲಿ ಓದುಗನನ್ನು ಸುದೀರ್ಘ ಚಿಂತನೆಗೆ ಹಚ್ಚಿ, ಆತ್ಮಾವಲೋಕನ ಮಾಡಿಕೊಳ್ಳುವಂತೆ ಪ್ರೇರೇಪಿಸುವ ಗುಣ ಈ ಕವನಗಳಲ್ಲಿವೆ.

About the Author

ಹ.ಶಿ. ಭೈರನಟ್ಟಿ
(02 May 1950 - 05 May 2019)

ವೈಜ್ಞಾನಿಕ ಕಾದಂಬರಿ ಪ್ರಕಟಿಸಿರುವ ಹನುಮಂತ ಶಿ. ಭೈರನಟ್ಟಿ ಅವರು ಕನ್ನಡದ ಪ್ರಮುಖ ಚಿಂತಕ-ಲೇಖಕರಲ್ಲಿ ಒಬ್ಬರು. ಮೂಲತಃ ಬೆಳಗಾವಿ ಜಿಲ್ಲೆಯ ಕುಲಗೋಡ ಗ್ರಾಮದವರು. 1950ರ ಮೇ 2ರಂದು ಜನಿಸಿದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಎಂ.ಎಸ್ಸಿ ಪದವಿ ಪಡೆದಿದ್ದರು. ಜೀವ ವಿಮಾ ನಿಗಮ (ಎಲ್‌.ಐ.ಸಿ.)ದಲ್ಲಿ 35 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.ಹಲವು ವೈಜ್ಞಾನಿಕ ಕೃತಿಗಳನ್ನು ಪ್ರಕಟಿಸಿದ್ದರು. ಅವರು 2019ರ ಮೇ 5ರಂದು ಧಾರವಾಡದಲ್ಲಿ ನಿಧನರಾದರು. ...

READ MORE

Related Books