ಸಾಂಗತ್ಯ

Author : ಹರೀಶ್‌ ಮಂಜೊಟ್ಟಿ

Pages 41

₹ 65.00
Year of Publication: 2018
Published by: ಭವಿಷ್ಯ ಪ್ರಕಾಶನ
Address: ಮಂಜೊಟ್ಟಿ, ಪೆರಾಜೆ, ಬಂಟ್ವಾಳ- 574253

Synopsys

ಲೇಖಕರಾದ ಹರೀಶ್‌ ಮಂಜೊಟ್ಟಿ ಹಾಗೂ ಭವ್ಯಾ ಹರೀಶ್‌ ಅವರ ಕವನ ಸಂಕಲನ ಕೃತಿ ʻಸಾಂಗತ್ಯʼ. ಪುಸ್ತಕದ ಮುನ್ನುಡಿಯಲ್ಲಿ ಡಾ. ಶ್ರೀಧರ ಎಚ್.ಜಿ. ಮುಂಡಿಗೆಹಳ್ಳ ಅವರು, “ಇಬ್ಬರದೂ ಅನುರೂಪ ದಾಂಪತ್ಯ; ಸೂಕ್ಷ್ಮ ಸಂವೇದನೆಯುಳ್ಳ ಕವಿ ಹೃದಯ. ಪತಿ-ಪತ್ನಿಯರು ಒಂದಾಗಿ ಕವನ ಸಂಕಲನವನ್ನು ಪ್ರಕಟಿಸುತ್ತಿರುವ ಅಪರೂಪದ ಸಂಗತಿಯಿದು. ಸಾಂಗತ್ಯ ಎಂದರೆ ಹೊಂದಾಣಿಕೆ, ಸಾಮರಸ್ಯ ಎಂದರ್ಥ. 'ಸಾಂಗತ್ಯವಿಲ್ಲದ ಸಂಸಾರವೇತಕೆ ಬರಿಯ ಸಾಹಿತ್ಯವೇ ಸಾಕೆ' ಎಂಬ ಮಾತು ಇಲ್ಲಿ ನೆನಪಾಗುತ್ತಿದೆ. ಇಲ್ಲಿನ ಕವಿತೆಗಳನ್ನು ಓದುತ್ತಿದ್ದಂತೆ ಇಬ್ಬರಲ್ಲಿಯೂ ಬದುಕನ್ನು ಗ್ರಹಿಸುವುದಕ್ಕೆ ಸಂಬಂಧಿಸಿ ಇರುವ ಮನೋಧರ್ಮ ಗಮನಕ್ಕೆ ಬರುತ್ತದೆ. ಭವ್ಯಾ ಅವರಲ್ಲಿ ಕಾವ್ಯತ್ವದ ಗುಣಗಳು ಹೆಚ್ಚಿದೆ. ಹರೀಶ್ ಅವರಲ್ಲಿ ವರ್ತಮಾನದ ಸಾಮಾಜಿಕ ಸಂಕಟಗಳಿಗೆ ತೀವ್ರ ಸ್ವರೂಪದ ಪ್ರತಿಕ್ರಿಯೆ ಇದೆ. ಭವ್ಯಾ ಅವರ ಕವಿತೆಗಳು ಬಾಲ್ಯದ ನೆನಪುಗಳೊಂದಿಗೆ ಚಕ್ಕಂದವಾಡುತ್ತಾ ತಟ್ಟನೆ ವರ್ತಮಾನಕ್ಕೆ ಮುಖಾಮುಖಿಯಾಗಿ ನಿಲ್ಲುತ್ತವೆ. ಹೀಗಾಗಿ ಆಧುನಿಕ ಬದುಕಿನ ಸಾಂಸ್ಕೃತಿಕ ತಲ್ಲಣಗಳು, ಶೋಷಣೆ, ದೌರ್ಜನ್ಯ, ರಾಜಕಾರಣದ ಲೇವಡಿ, ಅಸಹಾಯಕತೆಯ ಸೂಕ್ಷ್ಮಗಳು ಇಲ್ಲಿ ಅನಾವರಣಗೊಂಡಿವೆ. ಬದುಕಿನ ವಿಷಮ ಸ್ಥಿತಿಯಲ್ಲಿಯೂ ಲೇಖಕಿ ಭರವಸೆ, ಆಶಾವಾದವನ್ನು ಕಳೆದುಕೊಳ್ಳುವುದಿಲ್ಲ” ಎಂದು ಹೇಳಿದ್ದಾರೆ.

About the Author

ಹರೀಶ್‌ ಮಂಜೊಟ್ಟಿ

ಲೇಖಕ ಹರೀಶ್‌ ಮಂಜೊಟ್ಟಿ ಅವರು ಮೂಲತಃ ಬಂಟ್ವಾಳ ತಾಲೂಕಿನ ಪೆರಾಜೆ ಗ್ರಾಮದ ಮಂಜೊಟ್ಟಿಯವರು. ದಿ. ಚಂದಪ್ಪ ಗೌಡ ಹಾಗೂ ಯಶೋಧಾ ಅವರ ಮಗನಾಗಿ ಜನಿಸಿದ ಇವರು, ಬಂಟ್ವಾಳದ ಸರಕಾರಿ ಪ್ರಾಥಮಿಕ ಶಾಲೆ ಪೆರಾಜೆಯಲ್ಲಿ ಪ್ರಾಥಮಿಕ ಶಿಕ್ಷಣ, ಬೆಳ್ತಂಗಡಿಯ ಕರಾಯದಲ್ಲಿ ಪ್ರೌಢ ಶಿಕ್ಷಣ, ವಿವೇಕಾನಂದ ವಿದ್ಯಾ ಸಂಸ್ಥೆಯಲ್ಲಿ ಪಿ.ಯು.ಸಿ. ಮತ್ತು ಪದವಿ ಶಿಕ್ಷಣಗಳನ್ನು ಪಡೆದಿದ್ದಾರೆ. ಪ್ರಸ್ತುತ ಮಂಗಳೂರಿನ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಸುಮಾರು 15 ವರ್ಷಗಳಿಂದ ಹೆಡ್ ಕಾನ್ಸ್‌ಟೇಬಲ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪೋಲಿಸ್ ಇಲಾಖೆ ನಡೆಸುವ ಕ್ರೀಡಾಕೂಟದಲ್ಲಿ ಸತತ ಎರಡು ಬಾರಿ ರಾಜ್ಯ ಮಟ್ಟದಲ್ಲಿ ಆಡಿದ ಅನುಭವ ...

READ MORE

Related Books