ಉರಿವ ಕೆಂಡದ ಸೆರಗು

Author : ಎಚ್. ಲಕ್ಷ್ಮೀನಾರಾಯಣಸ್ವಾಮಿ

Pages 140

₹ 90.00
Year of Publication: 2013
Published by: ಸಿವಿಜಿ ಬುಕ್ಸ್
Address: ನಂ-277, 5ನೇ ಕ್ರಾಸ್, ವಿಧಾನಸೌಧ ಲೇಔಟ್, ಲಗ್ಗೆರೆ, ಬೆಂಗಳೂರು-560058

Synopsys

ಉರಿವ ಕೆಂಡದ ಸೆರಗು ಎಚ್.ಲಕ್ಷ್ಮೀನಾರಾಯಣಸ್ವಾಮಿ ಅವರ ಮೂರನೆಯ ಕವನ ಸಂಕಲನ. ಮತ್ತೆ ಮತ್ತೆ ಓದಿದ ಕವಿತೆ ಯಾವಾಗಲೂ ಚಿಟ್ಟೆ ಹಿಡಿಯುವ ಹಾಗೆ ಸಿಕ್ಕೇಬಿಟ್ಟಿತು ಎನ್ನುವ ಹೊತ್ತಿಗೆ ಹಾರಿ ಹೋಗಿರುತ್ತದೆ. ಹಾಗೆ ಹಿಡಿಯುವ ಪ್ರಯತ್ನದಲ್ಲಿ ಲಕ್ಷ್ಮೀನಾರಾಯಣ್ ಚಿಟ್ಟೆ ಹಿಡಿದ ಬೆರಳಲ್ಲಿ ಬಣ್ಣ ತೋರಿಸಿದ್ದಾರೆ ಎನ್ನುತ್ತಾರೆ ಹಿರಿಯ ಲೇಖಕ ಸುಬ್ಬು ಹೊಲೆಯಾರ್. 

ಒಂದು ಕಾಲಕ್ಕೆ ದಲಿತ ಕಾವ್ಯ ಎನ್ನುವುದು ಪ್ರತಿಭಟನೆಯ ಕಾವ್ಯ ಆಗಿದ್ದು ಮತ್ತು ಆಗ ಅದರ ಅನಿವಾರ್ಯತೆಯ ತೀರ್ವತೆ ಅಗತ್ಯ ಇತ್ತು. ಆದರೆ ಈ ಹೊತ್ತು ದಲಿತ ಕಾವ್ಯ ಅನ್ನೋದು ಜೀವ ಕಾರುಣ್ಯದ ಕಾವ್ಯವಾಗಿದೆ. ಎಲ್ಲರ ನೋವುಗಳ ಹಾಗೆ ಎಲ್ಲರ ಅವಮಾನದ ಮನಸ್ಥಿತಿ ಒಂದೇ ಎನ್ನುವ ಹಾಗೆ ದಲಿತರು ಬರೆಯುತ್ತಿದ್ದಾರೆ. ಈ ಅಂತರಗಂಗೆಯ ಜೀವರಸ ಕಾವ್ಯರಸವಾಗಿ ಲಕ್ಷ್ಮೀನಾರಾಯಣ್ ತನ್ನ ಅನುಭವದ ಮೂಸೆಯಿಂದ ಜೀವ ಕಾವ್ಯವನ್ನು ಹುಟ್ಟಿಸಿಕೊಂಡಿದ್ದಾರೆ. ಈ ಕೃತಿಯಲ್ಲಿ ಅವರ ಕಾವ್ಯ ಕಸುಬುಗಾರಿಕೆಯ ದೃಢ ಹೆಜ್ಜೆಗಳನ್ನು ಕಾಣಬಹುದಾಗಿದೆ. 

About the Author

ಎಚ್. ಲಕ್ಷ್ಮೀನಾರಾಯಣಸ್ವಾಮಿ

ಲೇಖಕ ಎಚ್. ಲಕ್ಷ್ಮೀನಾರಾಯಣ ಸ್ವಾಮಿ ಅವರು (1987) ಬೆಂಗಳೂರಿನವರು. ಬೆಂಗಳೂರು ವಿ.ವಿ ಯ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸ್ನಾತಕೋತ್ತರ ಪದವೀಧರರು. ಸದ್ಯ, ಅದೇ ಕೇಂದ್ರದಲ್ಲಿ ಹಿರಿಯ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ.  ಕೃತಿಗಳು: ಗೆಳತಿ ಮತ್ತೊಮ್ಮೆ ಯೋಚಿಸು, ಮುಟ್ಟಿನ ನೆತ್ತರಲ್ಲಿ’, ಉರಿವ ಕೆಂಡದ ಸೆರಗು (ಕವನ ಸಂಕಲನಗಳು), ಜಾಲಿಮರದ ಜೋಳಿಗೆಯಲ್ಲಿ ಎಂಬ ಖಂಡಕಾವ್ಯ ಕೃತಿ, ಇವರ ‘ತೊಗಲ ಚೀಲದ ಕರ್ಣ’ ಕೃತಿಗೆ 2017 ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿ ಲಭಿಸಿದೆ.ತೊಗಲ ಚೀಲದ ಕರ್ಣ, ಸಾಣೆಗಲ್ಲು, ಬಹುಪರಾಕಿನ ಸಂತೆಯೊಳಗೆ (ವಿಮರ್ಶಾ ಕೃತಿ) ಡಾ. ಎಸ್ ಎನ್ ಲಕ್ಷ್ಮೀನಾರಾಯಣ ಭಟ್ಟರ ಕುರಿತ ಕಿರು ಹೊತ್ತಿಗೆ ಪ್ರಕಟಿಸಿದ್ದಾರೆ. ಬೆಂಗಳೂರು ಸಾರಿಗೆ ಸಂಸ್ಥೆ ನೀಡುವ ...

READ MORE

Related Books