ಪಯಣಿಗನ ಕಾವ್ಯಗಳು

Author : ಸೋಮೇಶ್ವರ ಗುರುಮಠ

Pages 35

₹ 152.00
Year of Publication: 2021
Published by: ರೈಟರ್ಸ್‌ಗ್ರಾಮ್ ಪಬ್ಲಿಕೇಷನ್ಸ್

Synopsys

ಲೇಖಕ ಸೋಮೇಶ್ವರ ಗುರುಮಠ ಅವರ ಪಯಣಿಗನ ಕಾವ್ಯಗಳು. ಕೃತಿಯಲ್ಲಿರುವ ಲೇಖಕರ ಮಾತಿನಂತೆ, "ಪುಟ್ಟ ಕನಸೊಂದನ್ನು ಹೊತ್ತು, ನನಸಾಗಿಸುವ ಸರ್ವಪ್ರಯತ್ನಗಳ ಸಾಲು ಅಂತಿಮದಲ್ಲಿ ಸಾಕಾರರೂಪಗೊಳ್ಳುವಾಗ ಅಂತರಂಗದಲ್ಲಿ ಮೂಡುವ ಆನಂದಕೆ ಸಾಟಿಯಿಲ್ಲ. 25 ದಿನದಲ್ಲಿ 25 ಕವಿತೆಯನ್ನು ಬರೆದೊಪ್ಪಿಸುವ 'ಸ್ಪರ್ಧಾತ್ಮಕ ಸವಾಲನ್ನು' ಕಳೆದ ಡಿಸೆಂಬರ್ ನಲ್ಲಿ ಸ್ವೀಕರಿಸಿದ್ದೆ. ಅದರ ಅಂಗವಾಗಿ ಹೊರಬಂದಿರುವ ನನ್ನ ಪುಟ್ಟ ಕವನ ಸಂಕಲನ "ಪಯಣಿಗನ ಕಾವ್ಯಗಳು". 'ಪ್ರೀತಿ ಎಂಬುದು ನೀರಿಕ್ಷೆಗಿಂತ ತ್ಯಾಗದಲ್ಲಡಗಿದೆ''. ಹೊತ್ತಿಗೆಯೊಳಗಿನ ಕಾವ್ಯಗಳು ನಿಮ್ಮನ್ನು ಸುಂದರವಾದ ಪಯಣಕ್ಕೆ ಕರೆದೊಯ್ಯುವುದರಲ್ಲಿ ಅನುಮಾನವಿಲ್ಲ. ಒಂದು ಬಾರಿ ಪಯಣಿಸಿ, ನಿಮ್ಮ ಅನುಭವ ಹಂಚಿಕೊಳ್ಳಿ ಎಂದಿದ್ದಾರೆ.

About the Author

ಸೋಮೇಶ್ವರ ಗುರುಮಠ

ಸೋಮೇಶ್ವರ ಗುರುಮಠ ಅವರು ಲೇಖಕ, ಕಿರುಚಿತ್ರ ನಿರ್ದೇಶಕ, ಹಾಡುಗಾರ, ಕವಿ, ನಿರೂಪಕ, ಅಂಕಣಗಾರ ಹಾಗೂ ನಟನಾಗಿ ಗುರುತಿಸಿಕೊಂಡವರು. ಈಗಾಗಲೇ 'ನಾನು ನನ್ನ ಜಗತ್ತು', 'ಪಯಣಿಗನ ಕಾವ್ಯಗಳು' ಮತ್ತು 'ಅನನ್ಯ ನಮನಗಳು' ಎಂಬ ಮೂರು ಕವನ ಸಂಕಲನಗಳನ್ನು ಹೊರತಂದಿದ್ದಾರೆ. ತಮ್ಮ ಬರವಣಿಗೆಯ ಮೂಲಕ ವಿಭಿನ್ನ ಛಾಪನ್ನು ಸಾಹಿತ್ಯ ಲೋಕದಲ್ಲಿ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ...

READ MORE

Related Books