ನಾ ಕಂಡ ಕನಸು

Author : ಪ್ರತಿಭಾ ಆರ್ ಮರಗೋಳ್

Pages 80

₹ 100.00
Year of Publication: 2021
Published by: ತನುಶ್ರೀ ಪ್ರಕಾಶನ
Address: ಸೂಲೇನಹಳ್ಳಿ , ಮೊಳಕಾಲೂರು ತಾಲ್ಲೂಕು, ಚಿತ್ರದುರ್ಗ ಜಿಲ್ಲೆ- 577535 
Phone: 9741566313

Synopsys

ಲೇಖಕಿ ಪ್ರತಿಭಾ ಆರ್ ಮರಗೋಳ್. ಅವರ ಚೊಚ್ಚಲ ಕವನ ಸಂಕಲನ ‘ನಾ ಕಂಡ ಕನಸು’.   ಐವತ್ತು ಕವನಗಳನ್ನು ಒಳಗೊಂಡಿದೆ. ಕೃತಿಗೆ ಮುನ್ನುಡಿ ಬರೆದ ಕಾದಂಬರಿಕಾರ ಹಾಗೂ ಪ್ರಕಾಶಕ ಎಸ್. ರಾಜುಕವಿ ಸೂಲೇನಹಳ್ಳಿ ಅವರು ‘ಆರಂಭದ ಕವನಗಳು ಮತ್ತು ಅವುಗಳ ಶೀರ್ಷಿಕೆಗಳು ಕನ್ನಡದ ಈಗಿನ ಸ್ಥಿತಿ ಗತಿ, ಕರೋನಾ, ಒಲ್ಲದ ಮದುವಿಗೆ, ಸಿರಿತನ ಬಂದರೂ ಬಡತನ ಇದ್ದರೂ, ನನ್ನೆಲ್ಲ ಪದಗಳು ನೀವು, ಯುಗದ ಕವಿ, ನಗಬೇಕು ನೀನು, ಕವನ ಎನ್ನೋ ಊರಿಗೆ, ತಾಯಿ ನೀನು, ನನ್ನ ಒಳಗೊಂದು ಪ್ರಪಂಚ, ಬಿಸಿ ಬಿಸಿ ಹುಗ್ಗಿ, ತೂಗುವೇ ತೊಟ್ಟಿಲ, ಹರಸಿದಳು ಹಡೆದವ್ವ ನಾನೊಮ್ಮೆ ಮರವಾದೆ, ನಾ ಕಂಡ ಕನಸು, ಎ ಜೀವನವೇ, ಅವಳಿಗೆ ಗೌರವಿಲ್ಲವೇ, ಮಳೆಯ ಮುತ್ತಿನ ಮಣಿಗಳು, ಕಂಗೊಳಿಸುತ್ತಿದೆ ಕಲಬುರ್ಗಿ, ಅನ್ನದಾತ, ಕನ್ನಡ ನಾಡು, ಪ್ರಶ್ನಾರ್ಥಕವಾಗಿದೆ. ಸೊಳ್ಳೆಯ ಸಾಮ್ರಾಜ್ಯ ಈ ಎಲ್ಲಾ ಕವನಗಳನ್ನು ಪರಿ ಪರಿಯಾಗಿ ಅರ್ಥೈಸಿಕೊಂಡು ಓದಿದಾಗ ನಿಜಕ್ಕೂ ಇವರ ಆಗಾಧ ಜ್ಞಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಬೇಕು. ಕನ್ನಡ ಕುರಿತು ಅಪಾರ ಪ್ರೇಮದ ಕವಿತೆ ಎಷ್ಟು ಚೆಂದ ತೋರಿಸುತ್ತದೆ ನಂತರ ಕರೋನಾ ಹಾವಳಿ ತತ್ತರಿಸಿದ ಬದುಕಿನ ಕವನ ಅಚ್ಚುಕಟ್ಟಾಗಿ ಮೂಡಿ ಬಂದಿದೆ. ಇನ್ನೂ ಮುಂತಾಗಿ ಒಂದೊಂದು ಕವನದಲ್ಲಿ ಪದಗಳ ಬಳಕೆ ಆದರ ಸಾರ ವಿವರಣೆ ಮನ ಸೆಳೆಯಿತು ಎಲ್ಲಾ ಕವಿತೆ ಪ್ರತಿಯೊಂದು ವಿಷಯದ ಬಗ್ಗೆ ಮಾತನಾಡುತ್ತೇವೆ ಯಾವುದೇ ಕವನದಲ್ಲಿ ಪುನರಾವರ್ತನೆಯಾಗಿಲ್ಲ ಹೊರತಾಗಿ ಆ ವಿಷಯದ ಮಹತ್ವದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕವನ ಮೂಡಿ ಬಂದಿರುವುದು ಶ್ಲಾಘನೀಯ ಎನ್ನಬಹುದು. ಇಲ್ಲಿ ಕವಯತ್ರಿ ಕೇವಲ ತನ್ನನ್ನು ಕೇಂದ್ರಿಕರಿಸದೇ ಸಮಾಜದಲ್ಲಿ ತಾ ಕಾಣುವ ದೃಶ್ಯಗಳನ್ನು ಎಳೆ ಎಳೆಯಾಗಿ ಅವುಗಳಿಗೆ ಪರಿಹಾರ ಕೊಡುವ ಮಾರ್ಗದಲ್ಲಿ ಕವನ ರಚನೆ ಮಾಡಿದ್ದಾರೆ. ಅವುಗಳ ಮೌಲ್ಯ ಎತ್ತಿ ಹಿಡಿಯುವ ಪ್ರಯತ್ನ ಮಾಡಿದ್ದಾರೆ ಎಂದರೆ ತಪ್ಪಾಗಲಾರದು. ಇಲ್ಲಿ ರೈತ, ಹೆಣ್ಣು, ಕನ್ನಡ, ಪ್ರಕೃತಿ, ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿ ಕವನ ರಚಿಸಿರುವುದು ಸೋಜಿಗ ಆಗಿದೆ’ ಎಂದು ಪ್ರಶಂಸಿಸಿದ್ದಾರೆ. 


 

About the Author

ಪ್ರತಿಭಾ ಆರ್ ಮರಗೋಳ್
(26 August 2000)

ಲೇಖಕಿ ಪ್ರತಿಭಾ ಆರ್. ಮರಗೋಳ್ ಅವರು ಮೂಲತಃ ಕಲಬುರಗಿ ಜಿಲ್ಲೆಯ ಶಹಾಬಾದ ತಾಲೂಕಿನ ಹೊನಗುಂಟಾ ಗ್ರಾಮದವರು. ತಂದೆ ರಾಜು ಮರಗೋಳ್. ತಾಯಿ ರೇಣುಕಾ ಆರ್ ಮರಗೋಳ್. ಪ್ರಸ್ತುತ ಬಿ. ಇಡಿ  ವಿದ್ಯಾರ್ಥಿನಿ. ಕೃತಿಗಳು: ನಾ ಕಂಡ ಕನಸು ಪ್ರಶಸ್ತಿ-ಪುರಸ್ಕಾರಗಳು: ಉದಯೋನ್ಮಖ ಕಾವ್ಯ ಚೇತನಾ ರಾಜ್ಯ ಪ್ರಶಸ್ತಿ. ...

READ MORE

Related Books