ಅವಳೂ ನೀರೆ

Author : ಇಂದುಚೇತನ ಬೋರುಗುಡ್ಡೆ

Pages 48

₹ 75.00




Year of Publication: 2020
Published by: ಇಂದುಚೇತನ ಬೋರುಗುಡ್ಡೆ
Address: ಪದಿಮನೆ, ಬಳೆಂಜ, ನೆಲ್ಲಿಕಾರು ಗ್ರಾಮ, ವಾಲ್ಪಡಿ ಪೋಸ್ಟ್, ಮೂಡಬಿದಿರೆ ತಾಲೂಕು, ದ.ಕ ಜಿಲ್ಲೆ-574236
Phone: 9845697666

Synopsys

‘ಅವಳೂ ನೀರೆ’ ಕೃತಿಯು ಇಂದುಚೇತನ ಬೋರುಗುಡ್ಡೆ ಅವರ ಕವನಸಂಕಲನವಾಗಿದೆ. ಇಲ್ಲಿರುವ ಬಹಳಷ್ಟು ಕವನಗಳು ವಿವಿಧ ಹಂತದಲ್ಲಿ ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರಗೊಂಡವುಗಳು. ಅಲ್ಲದೆ, ತಾಲೂಕು ರಾಜ್ಯ ಮಟ್ಟದ ಕವಿಗೋಷ್ಠಿಗಳಿಗೆ ಆಯ್ಕೆಯಾಗಿ ವಾಚಿಸಲ್ಪಟ್ಟವುಗಳು ಎಂದಿದ್ದಾರೆ.  ಈ ಕೃತಿಗೆ ಬೆನ್ನುಡಿ  ಬರೆದಿರುವ ಜಯಪ್ರಕಾಶ ಮಾವಿನಕುಳಿ ಅವರು, ಇಲ್ಲಿರುವ ಕವನಗಳ ಗೇಯತೆ ನನಗೆ ಇಷ್ಟವಾಯಿತು. ‘ಬುದ್ಧನೆಂಬವನೊಬ್ಬ’ ಕವಿತೆಯಲ್ಲಿ ಒಂದು ಸಾಮಾಜಿಕ ವ್ಯಂಗ್ಯ ಇದೆ. ಒಳ್ಳೆಯ ಕವಿಯ ಸೃಜನಶೀಲತೆಯ ಲಕ್ಷಣ ಇದು. ಸಾಮಾಜಿಕ ಜೀವನದ ಸುತ್ತ ಕಣ್ಣು ಹಾಯಿಸುತ್ತಿದ್ದೀರಿ. ನಮ್ಮ ಲಾಂದ್ರದಿಂದ ಬರುವ ಬೆಳಕೇ ನಮಗೆ ಭರವಸೆ ಎನ್ನುವುದೊಂದು ಉತ್ತಮ ರೂಪಕದ ಮಾತು. ಇಂತಹ ರೂಪಕಗಳನ್ನು ಬಹಳಷ್ಟು ಕಡೆ ಸಮರ್ಥವಾಗಿ ಬಳಸಿದ್ದೀರಿ. ಕವಿತೆಗಳ ಶಕ್ತಿ ಇರುವುದೇ ರೂಪಕಗಳ ಮೂಲಕ ಮಾತನಾಡಿದಾಗ. ರೂಪಕಗಳನ್ನು ಮುಂದೆಯೂ ಹೆಚ್ಚು ಬಳಸಬೇಕು ಎಂದು ಹೇಳಿದ್ದಾರೆ. 

About the Author

ಇಂದುಚೇತನ ಬೋರುಗುಡ್ಡೆ

ಕವಿ ಇಂದುಚೇತನ ಬೋರುಗುಡ್ಡೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕು ಬೋರುಗುಡ್ಡೆಯವರು. ಇವರು ಬಿ.ಬಿ.ಎಂ, ಎಂ.ಕಾಂ ಪಧವೀದರರು. ಇವರಿಗೆ ಪ್ರಭಾಕರ ನೀರುಮಾರ್ಗ ಯುವ ಸಾಹಿತ್ಯ ಪ್ರಶಸ್ತಿ 2021 ಲಭಿಸಿದೆ. ಇವರ ಮುರಳಿಗಾನ ಕವನ ಸಂಕಲನ ಜನಮನ್ನಣೆ ಗಳಿಸಿ ಕನ್ನಡ ಪ್ರಾಧಿಕಾರದ ಚೊಚ್ಚಲ ಯುವಬರಹಗಾರರ ಪ್ರೋತ್ಸಾಹಧನಕ್ಕೆ ಆಯ್ಕೆಯಾಗಿದೆ. ಕೃತಿಗಳು: ಮುರಳಿಗಾನ, ಅವಳೂ ನೀರೆ (ಕವನ ಸಂಕಲನ). ...

READ MORE

Related Books