ಕಾಲನ ಕಾಲಂದುಗೆ

Author : ಪ್ರಜ್ಞಾ ಮತ್ತಿಹಳ್ಳಿ

Pages 80

₹ 70.00
Published by: ಲಡಾಯಿ ಪ್ರಕಾಶನ
Phone: 9480286844

Synopsys

’ಕಾಲನ ಕಾಲಂದುಗೆ’  ಕವನ ಸಂಕಲನದ ಬಹುಪಾಲು ಪದ್ಯಗಳು ಬಾಲ್ಯ, ನೋವು, ನೆನಪು, ಕಾವ್ಯಬರೆಯುವಂಥ ಸೃಜನಶೀಲತೆಗಳ ಕುರಿತಿವೆ. ಸರಳ ಹಾಗೂ ನಿಧಾನ ಗತಿಯ ಪದ್ಯಗಳಾಗಿದ್ದರಿಂದ ಅವುಗಳಿಗೆ ನನಗೆ ಇಷ್ಟವಾಗುವ ಒಂದು ಹಗುರವಾದ Meditative Quality ಇರುವಂತದ್ದು.

ಈ ಸಂಕಲನದಲ್ಲಿ ಇರುವ ಅನೇಕ ಕವಿತೆಗಳಲ್ಲಿ ಇರುವ ಅನುಭವಗಳನ್ನು ಹೊಸದಾಗಿ ಕಟ್ಟಿಕೊಳ್ಳುವ ಪ್ರಯತ್ನ ಕಾಣುತ್ತದೆ. ಹಾಗೆ ನೋಡಿದರೆ ಇಲ್ಲಿರುವ ಕವಿತೆಗಳು ಹೆಣ್ಣುನೋಟದ ಕವಿತೆಗಳೆಂದು ಮೇಲ್ನೋಟಕ್ಕೆ ತಿಳಿಯುವಂತಿವೆ. ಕುಟುಂಬದ ಮೂಲಕ ಜಗತ್ತನ್ನು ನೋಡುವ, ಆ ಕನ್ನಡಿಯಲ್ಲಿ ತನ್ನತನವೇನೆಂದು ಹುಡುಕಿಕೊಳ್ಳುವ ಹೆಣ್ಣು ಬರಹವಣಿಗೆಯ ವಿನ್ಯಾಸವಿಲ್ಲಿದೆ. ಕುಟುಂಬದ ಮೂಲಕ ಕಾಲದ ಚಲನೆಯನ್ನು ಗುರುತಿಸುವ ಕ್ರಮ ಹಾಗು ತಲೆಮಾರುಗಳಲ್ಲಿ ಸರಿಯುವ ಕಾಲದ ಕುರುಹುಗಳನ್ನು ಹುಡುಕುವುದು ಇತ್ಯಾದಿ ಕ್ರಿಯೆಗಳು ಸಹಜವಾಗಿ ಎನ್ನುವಂತೆ ಇಲ್ಲಿ ಎತ್ತಿಕೊಳ್ಳಲಾಗಿದೆ.

ಕವಿ ಪ್ರಜ್ಞಾ ಮತ್ತಿಹಳ್ಳಿ ಕನ್ನಡದ ಹೊಸ ತಲೆಮಾರಿನ ಒಬ್ಬ ಸಂಯಮಶೀಲ ಲೇಖಕಿ. ಅವರ ಉತ್ಕಟ ಕಾಯುವಿಕೆ; ಕಾವ್ಯದ ಆಂತರಿಕ ಬಲವನ್ನು ಹೆಚ್ಚಿಸಿದಂತೆಯೇ ಬಹಿರಂಗದ ಚಲನೆಯನ್ನೂ ಮಿಂಚಿಸುವಂಥದ್ದು.  ಹೆಣ್ಣು ಪಡುವ ಪಾಡುಗಳೆಲ್ಲ ಹಾಡಾಗಿ ಬೆರಳ ತುದಿಗಿಳಿದು ಬಂದಂತೆ ಪ್ರಜ್ಞಾ ಕಾವ್ಯ, ಹಲವು ನೂಲುಗಳು ಒಂದಾಗಿ ಏಕ ಸೀರೆಯಾಗುವ ವಿಸ್ಮಯದಲ್ಲಿ ಅರಳಿವೆ.

 

About the Author

ಪ್ರಜ್ಞಾ ಮತ್ತಿಹಳ್ಳಿ
(02 April 1969)

ಲೇಖಕಿ ಪ್ರಜ್ಞಾ ಮತ್ತಿಹಳ್ಳಿ ಅವರು ಉತ್ತರ ಕನ್ನಡ ಜಿಲ್ಲೆಯ ಶಿರಸಿಯವರು. 1969ರ ಏಪ್ರಿಲ್  02ರಂದು ಜನಿಸಿದ ಅವರು ವಾಣಿಜ್ಯಶಾಸ್ತ್ರದಲ್ಲಿ ಉನ್ನತ ವ್ಯಾಸಂಗ ಮಾಡಿದ್ದಾರೆ.  ಪ್ರಜ್ಞಾ ಮತ್ತಿಹಳ್ಳಿ ಅವರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸೃಜನಶೀಲ ಪ್ರಯೋಗ ಮಾಡುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಥೆ, ಕಾವ್ಯದ ಜೊತೆಗೆ ಹಾಸ್ಯ ಲೇಖನಗಳನ್ನು ಬರೆದಿರುವ ಅವರಿಗೆ ನಾಟಕ ರಚನೆ ಕೂಡ ಆಸಕ್ತಿಯ ಕ್ಷೇತ್ರ. ಅವರ ಕಥೆಗಳು ಮತ್ತು ಕವನಗಳು ನಾಡಿನ ವಿವಿಧ ಪತ್ರಿಕೆಗಳ ವಿಶೇಷಾಂಕಗಳ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿವೆ. ನುರಿತ ಯಕ್ಷಗಾನ ಕಲಾವಿದೆಯೂ ಆಗಿರುವ ಅವರು ಅದಕ್ಕಾಗಿ ಶಾಸ್ತ್ರೀಯ ತರಬೇತಿ ಪಡೆದಿದ್ದಾರೆ. ಅವರ ಪ್ರಕಟಿತ ...

READ MORE

Excerpt / E-Books

ದುಂಡು ಕಲ್ಲುಗಳ ಅಂಗೈ ಮುಂಗೈ 

ಮೇಲಾಡಿಸಿ ನೆಲಕ್ಕೆ ಬೀಳದಂತೆ 

ಸಂಭಾಳಿಸಿ ಹಾರಿಸಿ ಒಂದೊಂದೇ ಮೇಲೆ 

ಉಳಿದ ಕಲ್ಲುಗಳ ಗುಂಪಾಗಿಸಿ 

ಹಿಡಿದು ಮುಷ್ಟಿಯಲ್ಲಿ 

ಹಾರಿಸಿದ ಒಂದು ನೆಲದ 

ನಾಲ್ಕಕ್ಕೆ ಗಬಕ್ಕನೆ ಕೂಡಿಸಿದಾಗ ಅಬ್ಬಾ ಗೆಲುವು


 

ಮುಷ್ಟಿಯೊಳಗಿನ ಕಲ್ಲು ಹೋದೀತೆಲ್ಲಿ ಬಿಡು 

ಹಾರಿಸಿದರೂ ಹಿಡಿವ ಗರ್ಜಿಲ್ಲದ ತಾತ್ಸಾರ 

ಆಡಿ ಒಡನಾಡಿ ದಡ್ಡುಗಟ್ಟಿದ ಅ೦ಗೈ 

ಸವೆದ ಕಲ್ಲಿನ ಕನಸಲ್ಲಿ ಮಣ್ಣಗಂಧ  

ಮುಗಿಲಿಗೆ ಮೂಗಿಗಿಕ್ಕಿದ ಮಿನಾರಿನ 

ರೇಶಿಮೆ ಕೂದಲಿಗೆ.

ಮದರಂಗಿ ಹಚ್ಚುತ್ತಾಳೆ 

ನಿರ್ದಯಿ ಸುಲ್ತಾನನ 

ಖಡ್ಗಕ್ಕೆ ಕತೆಗಳ ಅಫೀಮು ಬಳಿದ ಶಹಜಾದೆ 

ಹಗುರಕೆ ಕರಗುತ್ತದೆ ಕಲ್ಲು 

ಒಳಹರಿವಿನ ಸಳಸಳ ನಾದಕ್ಕೆ 

ಸಣ್ಣಗೆ ತೆರೆಯುತ್ತದೆ ಬೆಳಕು

Related Books