ಕಾವ್ಯ ಜ್ಯೋತಿ

Author : ಎ. ಸರಸಮ್ಮ

Pages 388

₹ 310.00




Year of Publication: 2020
Published by: ಎಸ್.ಎಲ್.ಎನ್ ಪಬ್ಲಿಷಿಂಗ್ ಹೌಸ್
Address: ನಂ.237, 6ನೇ ಮುಖ್ಯರಸ್ತೆ, 10ನೇ ಕ್ರಾಸ್, ಎಚ್.ಎಂ.ಟಿ ಲೇಔಟ್, ಆರ್.ಟಿ.ನಗರ, ಬೆಂಗಳೂರು-32
Phone: 6361370460

Synopsys

‘ಕಾವ್ಯ ಜ್ಯೋತಿ’ ಎ.ಸರಸಮ್ಮ ಅವರ ಕವನ ಸಂಕಲನ. ಈ ಸಂಕಲನದ ಕುರಿತು ವಿವರಿಸುತ್ತಾ ‘ನಮ್ಮ ಬಾಳು ನವರಸಗಳಿಂದ ತುಂಬಿ ಜೀವನ ಸಾಗಿಸಲು ಸಂತೋಷ ಸಂಭ್ರಮಗಳಿಂದ ನಾವು ಬಾಳುವೆವು, ಹಾಡು, ಕಥೆ, ಸಂಗೀತ, ಸಾಹಿತ್ಯ ಹೀಗೆ ಹಲವಾರು ವಿಷಯಗಳಲ್ಲಿ ನಾವು ತೊಡಗಿಕೊಂಡಾಗ ಮನಸು ಪುಳಕಿತಗೊಂಡು ಹೊಸಹೊಸ ಭಾವಗಳು ಮನದಲ್ಲಿ ಮೂಡುವುದು. ಹಾಗೂ ನಮ್ಮ ದಿನ ನಿತ್ಯದ ಕಾಯಕದಲ್ಲಿ ತೊಡಗಲು ಉಲ್ಲಾಸವು ತುಂಬಿ ಚೈತನ್ಯ ಮೂಡುವುದು. ಈ ನಿಟ್ಟಿನಲ್ಲಿ ಓದುಗರ ಮೆಚ್ಚುಗೆ ಪಡೆದು ಹಲವಾರು ಕಾದಂಬರಿ, ಕವನ ಸಂಕಲನ, ಚುಟುಕು ಸಂಕಲನ, ಕಥಾ ಸಂಕಲನಗಳನ್ನು ರಚಿಸಿರುತ್ತೇನೆ ಎಂದಿದ್ದಾರೆ ಲೇಖಕಿ ಸರಸಮ್ಮ.

ಎಳೆಯರಿಂದ ಹಿಡಿದು ಮುಪ್ಪಿನವರೆಗೂ ಎಲ್ಲರೂ ಓದಬಹುದಾದಂತ “ಕಾವ್ಯ ಜ್ಯೋತಿ” ಎಂಬ ಕವನ ಸಂಕಲನವು ಹಲವಾರು ವಿಷಯಗಳನ್ನು ಒಳಗೊಂಡಿದೆ. ದೇಶಭಕ್ತಿಗಳು, ಕನ್ನಡ ಭಾಷೆ, ನಾಡು, ನುಡಿ, ಶಿಕ್ಷಣ, ಗುರುಗಳು, ಮಹಾನ್ ವ್ಯಕ್ತಿಗಳು, ಹಬ್ಬಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಮಹಾನ್ ನಾಯಕರು, ಹೆಣ್ಣು(ಜನ್ಮದಾತೆ) ಪ್ರೇಮಗೀತೆಗಳು, ವಿರಹಗೀತೆಗಳು, ಶಿಶುಗೀತೆಗಳು ಹೀಗೆ ನಾನಾ ವಿಷಯಗಳನ್ನು ಒಳಗೊಂಡ ಈ ಕವನ ಸಂಕಲನವು ಬಾಲ್ಯ, ಯೌವ್ವನ, ಮುಪ್ಪು ಎಲ್ಲಾ ವಯೋಮಾನದವರಿಗೂ ಓದಲು ಅನ್ವಯವಾಗುತ್ತದೆ.

About the Author

ಎ. ಸರಸಮ್ಮ

ಲೇಖಕಿ ಎ. ಸರಸಮ್ಮ ಅವರು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಸಾಹಿತ್ಯ ಅವರ ವಿಶೇಷ ಆಸಕ್ತಿಯಾಗಿದೆ. ವೃತ್ತಿಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಪ್ರಸ್ತುತ ನಿವೃತ್ತರಾಗಿದ್ದರೆ.  ಕೃತಿಗಳು: ಮೋಸದ ಜಾಲ(ಕಾದಂಬರಿ), ಬಾಡಿಗೆ ಮನೆ, ಮನೆ ಮಗ, ನೀತಿ ಕಥೆಗಳು, ದನಗಳ ಚೆನ್ನಿ, ನಂದಾದೀಪ, ಜಾಲಿಯ ನೆರಳು, ಕಾವ್ಯ ಜ್ಯೋತಿ, ವಿಧಿ ನಿಯಮ, ಸನ್ಮಾರ್ಗ, ಹೆಣ್ಣಿನ ಬಾಳು, ಗುರಿ, ಪಾಪ ಪುಣ್ಯ, ಭಕ್ತಿಸಾರ, ಸ್ನೇಹ ಬಂಧನ, ಕಾಮನಬಿಲ್ಲು, ಮೋಸದ ಜಾಲ ...

READ MORE

Related Books