ಹಂಗಿಲ್ಲದ ಅಂಗಳ

Author : ಸತ್ಯಾನಂದ ಪಾತ್ರೋಟ

Pages 146

₹ 150.00




Year of Publication: 2017
Published by: ಸಮತಾ ಪ್ರಕಾಶನ
Address: ನಂ.42, ಮ.ನಂ:44, ನವನಗರ, ಬಾಗಲಕೋಟ-587103
Phone: 9845012151

Synopsys

ಸತ್ಯಾನಂದ ಪಾತ್ರೋಟ ಅವರ ’ಹಂಗಿಲ್ಲದ ಅಂಗಳ’ ಕವನ ಸಂಕಲನದ ಕವಿತೆಗಳ ಆಂತರ್ಯವು ಪರಿಶುದ್ಧತೆಯೇ ಆಗಿದೆ. ಮಾತಿನ ಮಲಿನತೆ ಕುರಿತ ಆತಂಕ ಕವಿತೆಗಳಲ್ಲಿ ಕಾಣುತ್ತದೆ.

ಮಾತಿನ ಸೂತಕದಿಂದ ಇಡೀ ಜಗತ್ತಿನ ಸಂಬಂಧಗಳು ಕಳಂಕಿತವಾಗುತ್ತಿರುವುದನ್ನು ಅವರ ಕವಿತೆಗಳು ಬಿಚ್ಚಿಡುತ್ತಾ ಹೋಗುತ್ತವೆ.

ವಚನಕಾರರ ನಡೆ ಮತ್ತು ನುಡಿಗಳ ಅಭಿನ್ನತೆ ಸಮರ್ಥಿಸಿಕೊಳ್ಳುತ್ತಾರೆ. ವಚನಗಳ ಸಂರಚನೆಯಲ್ಲಿ ಇದೊಂದು ನೈತಿಕವಾದ ಜವಾಬ್ದಾರಿಯ ಜೊತೆಗೆ ಆಧ್ಯಾತ್ಮಿಕತೆಯತ್ತ ನಡೆಯುವ ದಾರಿ ಕೂಡ ಆಗಿದೆ ’ಮಾತಿರಬೇಕು, ಮಾತನಾಡಬೇಕು ಮನಕರಗಿ ಹಗುರಾಗುವಂತೆ, ಕಲ್ಲುಕರಗಿ ನೀರಾಗುವಂತೆ ಮಾತನಾಡಬೇಕು ಗಾಳಿಯೊಳಗೆ ಗಂಧ ತೀಡಿದಂತೆ’ ಇಲ್ಲಿ ಕವಿ ಮಾತಿನ ಸತ್ಯದ ಪರಂಪರೆಯನ್ನೆ ಗುರುತಿಸಿಕೊಳ್ಳುತ್ತಿದ್ದು, ಸೂತಕವಾಗುವ ಮಾತಿಗೆ ಆಮಿಷಳಿಗೆ ಬಲಿಯಾಗುವ ಲಾಲಸೆ, ವಂಚನೆಗಳು ಕಾರಣವಿರಬಹುದೆನ್ನುವ ಅರಿವನ್ನು ಕಂಡುಕೊಳ್ಳುತ್ತಾರೆ. ಇದಕ್ಕಾಗಿ ನೀಗಿಕೊಳ್ಳುವ ಉಪಾಯಗಳನ್ನು ಕಂಡುಕೊಳ್ಳಬೇಕು. ಬಸವಾದಿ ಶರಣರು ಹಾಗೂ ಬುದ್ಧನನ್ನು ಮೂಲ ಮಾದರಿಗಳಾಗಿ ಸ್ವೀಕರಿಸಿದ್ದರೂ ಸಹ ಆಳದಲ್ಲಿ ಕವಿಗೆ ಈ ಆತಂಕ ಇದ್ದೇ ಇದೆ. ಆದ್ದರಿಂದ, ಆಶಯ ಎನ್ನುವುದರ ಒಳಗೆ ಕೇಳುವ ಆತಂಕದ ದನಿ ಕಾವ್ಯವನ್ನು ಜೀವಂತವಾಗಿಡುವಂತಾಗಿದೆ.

About the Author

ಸತ್ಯಾನಂದ ಪಾತ್ರೋಟ

ಸತ್ಯಾನಂದ ಪಾತ್ರೋಟ ಅವರು ಕನ್ನಡದ ಹೊಸ ಸಂವೇದನೆಯ ಕವಿ, ಲೇಖಕರು. ‘ಪುಟ್ಟ ಗುಡಿಸಲಿನಲ್ಲಿ ಕೆಟ್ಟ ಕನಸುಗಳಿಲ್ಲ..ಮನಸು-ಕನಸುಗಳಲ್ಲಿ ಜಾಜಿ ಮಲ್ಲಿಗೆ..ಎನ್ನುವ ಮೂಲಕ ನಾಡಿನಾದ್ಯಂತ ಜಾಜಿ ಮಲ್ಲಿಗೆ ಕವಿ ಎಂದೇ ಖ್ಯಾತರಾದವರು. ಕೃಷ್ಣಾ ನದಿ ತೀರದ ಸತ್ಯಾನಂದ ಪಾತ್ರೋಟ ದಲಿತ ಲೋಕದ ಬಂಡಾಯ ಪ್ರತಿಭೆ. ಇವರು ಬಾಗಲಕೋಟೆಯಲ್ಲಿ ನಡೆದ ಅಖಿಲ ಭಾರತ ಆರನೇ ದಲಿತ ಸಾಹಿತ್ಯ ಸಮ್ಮೇನಳದ ಅಧ್ಯಕ್ಷತೆ ವಹಿಸಿದ್ದರು. ಕವಿ ಸತ್ಯಾನಂದ ಪಾತ್ರೋಟ ಅವರ ಲೇಖನಿಯಿಂದ ಸೃಜಿಸಿದ ಕವನಗಳು ನಾಡಿನ ಶಾಲಾ ಕಾಲೇಜಿನಿಂದ ಆರಂಭಗೊಂಡು ವಿಶ್ವವಿದ್ಯಾಲಯದ ಪಠ್ಯಗಳಲ್ಲೂ ಸ್ಥಾನ ಪಡೆದಿವೆ. ಧಾರವಾಡದ ಕರ್ನಾಟಕ ವಿ.ವಿ.ಗುಲ್ಬರ್ಗ, ಮಂಗಳೂರು, ತುಮಕೂರು, ಬೆಳಗಾವಿ ರಾಣಿ ...

READ MORE

Related Books