ಧರೆಗೆ ದೊಡ್ಡವರು

Author : ಶೈಲೇಶ ಕೆ.ಎಂ

Pages 88

₹ 75.00
Year of Publication: 2017
Published by: ಬುಧ್ದ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್‌
Address: ದೀಪಾಂಜಲಿನಗರ, ಬೆಂಗಳೂರು 560026
Phone: 9448880985

Synopsys

ಧರೆಗೆ ದೊಡ್ಡವರು ಶೈಲೇಶ ಕೆ.ಎಂ ಅವರ ಕವನ ಸಂಕಲವಾಗಿದೆ. ಇದು ಹತ್ತಾರು ಶೀರ್ಷಿಕೆಯನ್ನೊಳಗೊಂಡ ಕವಿತೆಗಳು. ಹನಿಗವನಗಳು ಭಾವನೆಗಳಿಂದ ಮೊದಲ್ಗೊಂಡು ಬದುಕಿನ ನಾನಾ ಆಯಾಮಗಳನ್ನೂ, ಸ್ಥಳ ಮಹಿಮೆ (ರಾಮನಗರ) ಯಂತಹ ಭೌಗೋಳಿಕ ಪರಿಸರ ಕಾಳಜಿಯನ್ನು ರಸವತ್ತಾದ ಸಾಲುಗಳಲ್ಲಿ ಓದುಗನ ಕಣ್ಣಾಲಿಗಳನ್ನರಳಿಸಿವೆ. ಕರ್ತೃ ವೃತ್ತಿಯಲ್ಲಿ ಆರಕ್ಷಕ. ಇವರ ಸಾಹಿತ್ಯದ ಪ್ರವೃತ್ತಿ ಹವ್ಯಾಸವಾಗಿ ಮಿಳಿತಗೊಂಡು ಅಕ್ಷರ ಜೋಡಣೆ ಈ ಕವನ ಸಂಕಲನದಲ್ಲಿ ರಸವತ್ತಾಗಿದೆ ಎಂದು ಸಿದ್ದರಾಜು ಅವರು ಪುಸ್ತಕದ ಹಿತನುಡಿಯಲ್ಲಿ ತಿಳಿಸಿದ್ದಾರೆ.

About the Author

ಶೈಲೇಶ ಕೆ.ಎಂ

ಶೈಲೇಶ ಕೆ.ಎಂ ಅವರು ಮೂಲತಃ ರಾಮನಗರ ಜಿಲ್ಲೆಯ ಮಲ್ಲೇಶ್ವರ ಬಡಾವಣೆಯವರು. ಆರಕ್ಷಕ ಮುಖ್ಯ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. ಸಾಹಿತ್ಯ ಕೃತಿ : ಮೊದಲ ಹೆಜ್ಜೆ, ಧರೆಗೆ ದೊಡ್ಡವರು, ಅಗ್ರ ಸಾಲಿಗೆ, ಉತ್ತುಂಗ ಕವನ ಸಂಕಲನವಾಗಿದೆ. ನಕ್ಕರೆ ಅದೇ ಸ್ವರ್ಗ ಹಾಸ್ಯ ಲೋಕ . ...

READ MORE

Related Books