ನಾ ಬರುತ್ತೇನೆ ಕೇಳು

Author : ಸವಿತಾ ನಾಗಭೂಷಣ

Pages 58

₹ 12.00




Year of Publication: 1987
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು-577417, ತಾಲ್ಲೂಕು ಸಾಗರ, ಜಿಲ್ಲೆ: ಶಿವಮೊಗ್ಗ.

Synopsys

ಕವಯತ್ರಿ ಸವಿತಾ ನಾಗಭೂಷಣ ಅವರ ಕವನ ಸಂಕಲನ-ನಾ ಬರುತ್ತೇನೆ ಕೇಳು. ಬೆಟ್ಟ ಹತ್ತುವುದು, ಗಿಡ ಮರ ಹತ್ತುವುದು, ಮೋಡಗಳನ್ನು ನೋಡುವುದು, ಮಳೆಯಲ್ಲಿ ನೆನೆಯುವುದು, ಕಣಿವೆ-ಕಂದರಗಳನ್ನು ಸುತ್ತುವುದು ಹೀಗೆ ಎಲ್ಲವನ್ನು ಸಂಭ್ರಮಿಸುವುದನ್ನು ಇಷ್ಟಪಡುತ್ತೇನೆ ಹಾಗೂ ಇತರರಿಂದ ಪ್ರೀತಿಸಲ್ಪಡುವ ಆಸೆಯೂ ಇದೆ. ಹೀಗಾಗಿ, ಇವುಗಳನ್ನು ಯಾರೂ ದ್ವೇಷಿಸಲಾರರು. ಈ ವಿಷಯಗಳ ಕುರಿತೇ ಕವನಗಳನ್ನು ಬರೆದಿದ್ದು ತಮಗೂ ಇಷ್ಟವಾಗಬಹುದು ಎಂದುಕೊಂಡಿದ್ದೇನೆ ಎಂದು ಸ್ವತಃ ಕವಯತ್ರಿ ಸವಿತಾ ಅವರು ಓದುಗರೊಂದಿಗೆ ತಮ್ಮ ಮನದಾಳವನ್ನು ಹಂಚಿಕೊಂಡಿದ್ದಾರೆ. ಅವರ ಮಾತುಗಳು ಹೇಳುವಂತೆ ಇಲ್ಲಿಯ ಕವಿತೆಗಳ ವಸ್ತು ಆಗಿವೆ. ಪರಿಣಾಮಕಾರಿ ಹಾಗೂ ಆಕರ್ಷಕ ಶೈಲಿಯು ಓದುಗರ ಗಮನ ಸೆಳೆಯುತ್ತವೆ.

About the Author

ಸವಿತಾ ನಾಗಭೂಷಣ

ಚಿಕ್ಕಮಗಳೂರಿನಲ್ಲಿ ಜನಿಸಿದ ಸವಿತಾ ನಾಗಭೂಷಣ ಅವರು ಬೆಳೆದದ್ದು ಮತ್ತು ಶಿಕ್ಷಣ ಪಡೆದದ್ದು ಶಿವಮೊಗ್ಗದಲ್ಲಿ. ಮಲೆನಾಡಿನ ಅನುಭವದ ಹಿನ್ನೆಲೆಯಲ್ಲಿ ಅವರ ಬಹಳಷ್ಟು ಕವಿತೆಗಳಲ್ಲಿ ಗಿಡ-ಮರ, ಹಸಿರು-ಹೂ-ಹಣ್ಣು ಮತ್ತು ಹೊಳೆ-ಮಳೆ- ಮೋಡಗಳ ಜೀವಂತ ರೂಪಕ ಒಳಗೊಂಡಿರುತ್ತವೆ. ವರ್ತಮಾನದ ಮನುಷ್ಯನ ಆಳದ ಸಂತೋಷ-ನೆಮ್ಮದಿ, ದುಃಖ- ವಿಷಾದಗಳನ್ನು ಅಂತಃಕರಣಪೂರ್ವಕವಾಗಿ ದಾಖಲಿಸುತ್ತವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕಾವ್ಯಕ್ಕಾಗಿ ನೀಡುವ ಪ್ರಶಸ್ತಿ ಪಡೆದ ಮೊದಲ ಕವಯತ್ರಿಯಾದ (ನಾ ಬರುತ್ತೇನೆ ಕೇಳು) ಸವಿತಾ ಅವರ ಎಲ್ಲ ಸಂಕಲನಗಳಿಗೆ ವಿವಿಧ ಸಂಘ-ಸಂಸ್ಥೆಗಳ ಬಹುಮಾನ -ಪ್ರಶಸ್ತಿ ಸಂದಿವೆ. ಅವರ ವಿಶಿಷ್ಟ ಕಾದಂಬರಿ ’ಸ್ತ್ರೀಲೋಕ’ಕ್ಕೆ ಎಂ.ಕೆ. ಇಂದಿರಾ ಮತ್ತು ಬಿ.ಎಚ್. ಶ್ರೀಧರ್‍ ...

READ MORE

Awards & Recognitions

Related Books