ಎಲೆಕ್ಟ್ರಿಕ್ ಬೇಲಿ ಮತ್ತು ಪಾರಿವಾಳ

Author : ಲಕ್ಷ್ಮಣ ವಿ.ಎ

Pages 124

₹ 100.00
Year of Publication: 2018
Published by: ಮೈತ್ರಿ ಪ್ರಕಾಶನ
Address: C/o ಶ್ರೀಮತಿ ಅಂಜಲಿ ದೇಸಾಯಿ, 504, ಎರಡನೇ ಕ್ರಾಸ್‌, ಎರಡನೇ ಬ್ಲಾಕ್‌, ಬಿ.ಎಸ್‌.ಕೆ. ಮೊದಲ ಹಂತ, ಬೆಂಗಳೂರು - 560050

Synopsys

ಕವಿತೆ ಕಟ್ಟುವ ಉತ್ಸಾಹಕ್ಕಿಂತ ಈ ಅನುಭವ ಕವಿತೆಯ ಶರೀರಕ್ಕೆ ದಕ್ಕಬಲ್ಲುದೆ ಎಂಬ ಸಣ್ಣ ಶಂಕೆ ಮತ್ತು ಮುಜುಗರದಿಂದಲೇ ಕವಿ ಲಕ್ಷಣ್ ಕವಿತೆ ಬರೆಯುತ್ತಾರೆ. ‘‘ಎಲೆಕ್ಟ್ರಿಕ್ ಬೇಲಿ ಮತ್ತು ಪಾರಿವಾಳ' ಗೂಡು ಕಟ್ಟಿದ ಗುಬ್ಬಚ್ಚಿಯೊಂದು ಗೂಡಿನ ಸ್ವರೂಪವನ್ನು ನೋಡುಗರ ಎದುರಿಗೆ ಇಟ್ಟು ಸಂಕೋಚದಿಂದ ಕೂತ ಜೀವದ ಯಾನದಂತೆ ಗೋಚರಿಸುತ್ತದೆ.

About the Author

ಲಕ್ಷ್ಮಣ ವಿ.ಎ

ಡಾ. ಲಕ್ಷ್ಮಣ ವಿ.ಎ ಮೂಲತಃ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಮೋಳೆ ಗ್ರಾಮದವರು. ಮಹಾಗಣಪತಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ವೈದ್ಯಕೀಯ ಪದವಿ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿ ಪಡೆದಿದ್ದಾರೆ. ಓದು, ಬರಹವನ್ನು ಹವ್ಯಾಸವಾಗಿಸಿಕೊಂಡಿರುವ ಲಕ್ಷ್ಮಣ್ ಅವರು ಎಲೆಕ್ಟ್ರಿಕ್ ಬೇಲಿ ಮತ್ತು ಪಾರಿವಾಳ ಎಂಬ ಕವನ ಸಂಕಲವನ್ನು ಪ್ರಕಟಿಸಿದ್ದಾರೆ. ಪ್ರಸ್ತುತ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಖಾಸಗೀ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಅಪ್ಪನ ಅಂಗಿ’ ಅವರ ಇತ್ತಿಚಿನ ಕೃತಿ. ...

READ MORE

Related Books