ರಾಬಿಯಾ

Author : ಮುರ್ತುಜಾಬೇಗಂ ಕೊಡಗಲಿ

Pages 140

₹ 125.00
Year of Publication: 2022
Published by: ಬೆರಗು ಪ್ರಕಾಶನ
Address: ಕಡಣಿ- 586 202, ತಾ.ಆಲಮೇಲ, ಜಿ.ವಿಜಯಪುರ
Phone: 7795341335

Synopsys

ಮುರ್ತುಜಾಬೇಗಂ ಕೊಡಗಲಿ ಅವರ ಕವನ ಸಂಕಲನ ‘ರಾಬಿಯಾ’. ಅಲ್ಲಾಗಿರಿರಾಜ್ ಕನಕಗಿರಿ ಅವರು ಈ ಕೃತಿಗೆ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ರಾಜಶೇಖರ ಮಠಪತಿ ಅವರು ಕೃತಿಯಲ್ಲಿ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ,ಪಾಸ್ತಾದ ಬಂಡಾಯದ ಧ್ವನಿ ರಾಜಿಯಾ, ಇವಳನ್ನು ಓದಬಹುದು, ಆದರೆ ಅರಿತುಕೊಳ್ಳಲು ಬೇರೆಯದೇ ಸಿದ್ಧತೆ ಬೇಕಾಗುತ್ತದೆ. ಈ ಪ್ರಾಮಾಣಿಕತೆ ಇಲ್ಲದ ಪಾಷಾಂಡತನವೇ ಕಾರಣವಿರಬಹುದೇನೋ ರಾಜಯಾ ಬರಬೇಕಾದ ಪ್ರಮಾಣದಲ್ಲಿ ಪ್ರಪಂಚದ ಯಾವ ಸಾಹಿತ್ಯದಲ್ಲೂ ಬರಲೇ ಇಲ್ಲ. ಅವಳು ಬರೆಯಲೂ ಇಲ್ಲ. ತನ್ನಿಚ್ಛೆಯ ಪ್ರಯೋಗಶೀಲತೆಯನ್ನು ಬದುಕಿದಳು. ಇವಳ ಕುಲ ನೆಲೆಯ ಮಾತನಾಡುವುದಾದರೆ ನನ್ನ ಉತ್ತರವಿಷ್ಟ, ಇವಳು ಜಲದ ವಿಸ್ತಾರದವಳು, ಯುಗದ ಅಲಿವಿನವಳು ಮತ್ತು ಬೆಂಕಿಯ ಜಾತಿಯವಳು, ಹೀಗಾಗಿ ಇವುಗಳೊಂದಿಗೆಯೇ ರಾಜಯಾ ಸ್ವರ್ಗಕ್ಕೆ ಹೋಗುವ ಕನಸು ಕಂಡಳು. ನೋವುಂಡವರ ನೋವಿನ ಭಾಷೆ ಅರಿತುಕೊಳ್ಳಬಲ್ಲರು ಎನ್ನುವಂತೆ ಕನ್ನಡಕ್ಕೀಗ ಒಂದು ಹಂತದ ಪೂರ್ಣತೆಯೊಂದಿಗೆ ಮುರ್ತುಜಾ ಬೇಗಂ ಅವರಿಂದ ರಾಜಯಾ ಹತ್ತಿರವಾಗಿದ್ದಾಳೆ. ತಾಂತ್ರಿಕತೆ ಮತ್ತು ತಲ್ಲಣಗಳು ಒಂದಾಗದ, ಒಂದೆನ್ನಿಸದ ಅನ್ಯ ಲೇಖಕ/ಕಿಯನ್ನು ನಮ್ಮದಾಗಿಸಿಕೊಳ್ಳಲಾಗದು. ಮುರ್ತುಜಾ ಅವರ ರಾಜಯಾ ಈ ಕಾರಣಕ್ಕಾಗಿಯೇ ಕನ್ನಡದಲ್ಲಿ ಪಲ್ಲವಿಸಿದ್ದಾಳೆ. ರಾಜಯಾ ಕವಿಯತ್ರಿ ಮುರ್ತುಟಾಳ ಅತ್ಯದ ಧ್ವನಿಯಂತೆ ಇಲ್ಲ. ಅನಾವರಣಗೊಂಡಿದ್ದಾಳೆ. ಇಸ್ಲಾಮಿಕ್ ಸಾಹಿತ್ಯದ ಬೇರೆ ಬೇರೆ ಸಾಧನೆಗಳ ನೀರಿಕ್ಷೆಯಲ್ಲಿದ್ದ ನನ್ನಂಥ ಅದಷ್ಟೂ ಓದುಗರ ಕುತೂಹಲವನ್ನು ತಣಿಸಿದ್ದಾಳೆ. ಮುರ್ತುಜಾರಾಜಯಾಆಗ ದಕ್ಕಬೇಕಾದ ಕನ್ನಡದ ಕಾವ್ಯಭೂಮಿ, ಪ್ರಸ್ತುತ ಈ 'ಜರುಗಾಆಯ ಹಾಡು' ಬರೀ ಓದುವ ಪುಸ್ತಕವಲ್ಲ, ಓದಿಸಬೇಕಾದ ಸಂಸ್ಕೃತಿ ಮತ್ತು ದಕ್ಕಿಸಿಕೊಳ್ಳಬೇಕಾದ ಬೆಳಕು. ಮಿತಭಾಷೆಯ ರಾಜಯಾಗೆ ಮಿತ ಬರಹದ ಮುರ್ತುಜಾ ಒಂದು ಸುಂದರ, ಸೂಕ್ಷ್ಮ, ಸಂಬಂಧ, ನಾನು ಗಮನಿಸಿದಂತೆ, ಪ್ರಸ್ತುತ ಈ ಕೃತಿ ಸ್ವರ್ಗ ನರಕ, ಧರ್ಮ ಕರ್ಮ, ಬದುಕು ಸಾವುಗಳು ಹೆಣದ ಮೇಆನ ಲೋವಾನ, ಇಲ್ಲಿ ಅಭಿಪ್ರಾಯದ ಪಮ್ಮತಿ, ಸಹಮತಿಗಾಗಿ ಯಾರೂ ಕಾಯುತ್ತಿರುವಂತಿಲ್ಲ, ಬೇಕನಿಸಿದರೆ ಬಾಚಿಕೊಳ್ಳಬೇಕು. ಅಷ್ಟೇ 'ಪಳಕಿ'ಗೆ ಬೇಕು ಬೇಡಗಳೆಂಬ ಅರ್ಥ ಸೂತತದ ಹಂಗಿಲ್ಲ.ಇದು ಮುರ್ತುಜಾ, ಇದು ರಾಜಯಾ, ಇದು ಲೋಪ ಉಂಡ ತಾಯಂದಿರ ಹಾಡು, ನಿಮ್ಮದಾಗುವುದೇ? ಎಂಬುದಾಗಿ ಹೇಳಿದ್ದಾರೆ.

About the Author

ಮುರ್ತುಜಾಬೇಗಂ ಕೊಡಗಲಿ

ಮುರ್ತುಜಾಬೇಗಂ ಕೊಡಗಲಿ ಅವರು ಇಳಕಲ್ಲು ಮೂಲದವರು. ಪ್ರಸ್ತುತ ಬಾಗಲಕೋಟೆ ಜಿಲ್ಲೆಯ ಹಿರೇಬಾದವಾಡಗಿಯ ಸರಕಾರಿ ಪ್ರೌಢಶಾಲೆಯಲ್ಲಿ ಆಂಗ್ಲಭಾಷಾ ಸಹಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಕಟಿತ ಪುಸ್ತಕಗಳು: ಮೊನ್ನೆ ಬಂದ ಮಳೆಗೆ, ಭಾವಬದುಕು, ರಾಬಿಯಾ-ಬಿರುಗಾಳಿಯ ಹಾಡು ಪ್ರಶಸ್ತಿಗಳು: ದ ರಾ ಬೇಂದ್ರೆ ಗ್ರಂಥ ಬಹುಮಾನ, ಶಿವಮೊಗ್ಗ ಕನ್ನಡ ಸಂಘದಿಂದ ಪಿ ಲಂಕೇಶ್ ಪ್ರಶಸ್ತಿ, ಜಗಜ್ಯೋತಿ ಕಲಾವ್ರಂದ ಮುಂಬೈನಿಂದ ರಾಷ್ಟ್ರಮಟ್ಟದ ಮಹಿಳೆಯರಿಗೆ ಏರ್ಪಡಿಸಲಾದ ಸ್ಪರ್ಧೆಯಲ್ಲಿ ಪಿ ಸುಶೀಲಾ ಸ್ಮರಣಾರ್ಥ ಪ್ರಶಸ್ತಿ, ಸಂಚಯ ಕಾವ್ಯ ಪ್ರಶಸ್ತಿ, ಸಂಕ್ರಮಣ ಕಾವ್ಯ ಮತ್ತು ಚುಟುಕು ಪ್ರಶಸ್ತಿ, ಇಳಕಲ್ಲ ಶ್ರೀಮಠದಿಂದ ಬಸವಭೂಷಣ ಪ್ರಶಸ್ತಿ, ಜಿಲ್ಲೆಯ ಕ್ರಿಯಾಶೀಲ ಲೇಖಕಿ ಪ್ರಶಸ್ತಿ, ಅಡ್ವೈಜರ್ ...

READ MORE

Related Books