ಮತ್ತೆ ಬಂತು ಶ್ರಾವಣ

Author : ವಿಕ್ರಮ ವಿಸಾಜಿ

Pages 220

₹ 200.00
Published by: ಕ್ರೈಸ್ಟ್ ಯೂನಿವರ್ಸಿಟಿ ಕನ್ನಡ ಸಂಘ, ಬೆಂಗಳೂರು
Phone: 080-26757159

Synopsys

ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘವು 1982ರಿಂದ ಕನ್ನಡದ ವರಕವಿ ಡಾ. ದ.ರಾ. ಬೇಂದ್ರೆಯವರ ನೆನಪಿನಲ್ಲಿ ಅಂತರಕಾಲೇಜು ಕವನ ಸ್ಪರ್ಧೆಯನ್ನು ಹಮ್ಮಿಕೊಂಡು ಬರುತ್ತಿದ್ದು, ಈ ಅವಧಿಯಲ್ಲಿ ನಾಡಿನಾದ್ಯಂತ ಅನೇಕ ಕಾಲೇಜು ವಿದ್ಯಾರ್ಥಿಗಳು ಈ ಕವಿತಾ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. ಹಾಗೆ ಪಡೆದುಕೊಂಡ ಯುವ ಕವಿಗಳೆಲ್ಲ ಇಂದು ಹಿರಿ ಕವಿಗಳಾಗಿ ಗಮನ ಸೆಳೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ, ಕಾವ್ಯ ಸಾಲಿನ ಹಿಂದು, ಇಂದು ಮತ್ತು ಮುಂದುಗಳನ್ನು ಸಂಧಿಸುವ ಕೃತಿಯಾಗಿ ಮತ್ತೆ ಬಂತು ಶ್ರಾವಣ' ಗಮನ ಸೆಳೆಯುತ್ತದೆ. ಮುನ್ನುಡಿಯಲ್ಲಿ ವಿಸಾಜಿಯವರು ಹೇಳುವಂತೆ, ಮೂವತ್ತೆರಡು ವರ್ಷಗಳ ಇಲ್ಲಿನ ಕಾವ್ಯಲೋಕ ತಾರುಣ್ಯದ ವಿಲಾಸ ವೈಚಿತ್ರಗಳಿಂದ ಕೂಡಿದೆ ಮಾತ್ರವಲ್ಲ, ಅಪರೂಪದ ಭಾವಕೋಶಗಳನ್ನು ಹಿಡಿಯಲೆತ್ನಿಸಿದೆ. ಸೀಮಿತ ಅವಧಿಯ ಮೂರು ತಲೆಮಾರುಗಳ ಕಾವ್ಯದ ಕ್ರಿಯಾಶೀಲ ಸ್ಪಂದನವನ್ನು ನಾವಿಲ್ಲಿ ಕಾಣಬಹುದು.

About the Author

ವಿಕ್ರಮ ವಿಸಾಜಿ

ಕಲಬುರ್ಗಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕರಾಗಿರುವ ವಿಕ್ರಮ ವಿಸಾಜಿ ಅವರು ಕವಿ-ವಿಮರ್ಶಕ. ಬೀದರ ಜಿಲ್ಲೆಯ ಭಾಲ್ಕಿಯವರಾದ ವಿಕ್ರಮ ಅವರ ತಂದೆ ಹೆಸರಾಂತ ಕವಿ-ಲೇಖಕರು. ಬಾಲ್ಯದಲ್ಲಿಯೇ ಕವಿತೆ ಬರೆಯುವುದನ್ನು ಆರಂಭಿಸಿದ ವಿಕ್ರಮ ಅವರು ಹೈಸ್ಕೂಲಿನಲ್ಲಿದ್ದಾಗಲೇ ಕವನ ಸಂಕಲನ ಪ್ರಕಟಿಸಿದ್ದರು.  ಕಲಬುರ್ಗಿಯ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ (ಎಂ.ಎ) ಪದವಿ ಪಡೆದ ಅವರು ಕಂಬಾರರ ಕಾವ್ಯದ ಮೇಲೆ ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಎಚ್‌.ಡಿ. ಪದವಿ ಪಡೆದಿದ್ದಾರೆ. ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ವೃತ್ತಿ ಆರಂಭಿಸಿ ಸೊಂಡೂರು, ರಾಯಚೂರು ಸ್ನಾತಕೋತ್ತರ ಕೇಂದ್ರಗಳಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದರು.  ಕನ್ನಡ ಸಾಹಿತ್ಯ ಪರಿಷತ್ತು ...

READ MORE

Related Books