ದಾಂಪತ್ಯ ಗೀತೆಗಳು

Author : ಜೀವರಾಜ ಹ ಛತ್ರದ

Pages 94

₹ 110.00
Year of Publication: 2020
Published by: ಖುಷಿ ಪಬ್ಲಿಕೇಷನ್ಸ್
Address: #117, ಶ್ರಾವಣಿ ಪ್ಯಾಲೇಸ್, ಹಿರೇಹಳ್ಳಿ ಪೋಸ್ಟ್, ತುಮಕೂರು ತಾಲ್ಲೂಕು, ಜಿಲ್ಲೆ- 572168
Phone: 9844203877

Synopsys

ಲೇಖಕ ಜೀವರಾಜ ಹ ಛತ್ರದ ಅವರ ’ದಾಂಪತ್ಯ ಗೀತೆಗಳು’ ಜನಪದ ಕವನ ಸಂಕಲನ. ಜನಪದ ಜನಪದರ ಬದುಕಿನ ಪಾಡು ಹಾಡಾಗಿರುವುದೇ ಜನಪದ ಸಾಹಿತ್ಯದ ವೈಶಿಷ್ಟ್ಯ.ಈ ಕೃತಿಗೆ ಮುನ್ನುಡಿ ಬರೆದ ಹೆಚ್. ಎ. ಭಿಕ್ಷಾವರ್ತಿಮಠ ಅವರು, ದಾಂಪತ್ಯ ಗೀತೆಗಳು ನಾವು ತಿಳಿದಂತೆ ಪ್ರೇಮ ಗೀತೆಗಳಲ್ಲ, ಮಧುರ ಬಾಂಧವ್ಯದ ಚಿಂತನೆಗಳ ಕೌಟುಂಬಿಕ ಗೀತೆಗಳು, ಈ ಗೀತೆಗಳನ್ನು ಗಟ್ಟಿಯಾದ ಜನಪದ ಶೈಲಿಯಲ್ಲಿ ಕಲಾತ್ಮಕವಾದ ಶೈಲಿಯಲ್ಲಿ ಬರೆದ ಹೃದಯ ಗೀತೆಗಳಾಗಿವೆ. ಈ ಎಲ್ಲಾ ಕವನ ವಸ್ತು ವಿಷಯ ಕುಟುಂಬ, ಗಂಡ ಹೆಂಡತಿ, ಅಪ್ಪ ,ಅಮ್ಮ, ಮಕ್ಕಳು ಮತ್ತು ಬಂಧು ಬಾಂಧವರು, ಇವೆಲ್ಲರ ಸುಮಧುರ ಬಾಂಧ್ಯವ್ಯಗಳು ಇವರೊಂದಿಗೆ ಸಾಮಾಜಿಕ ಸಂಬಂಧಗಳು, ಶಿಕ್ಷಕ ನೌಕರಿಯ ಬದುಕು, ಬವಣೆ, ಆದರ್ಶ, ಜನ್ಮಭೂಮಿ,ಕರ್ಮಭೂಮಿ ಮುಂತಾದವುಗಳ ಮಾನವ ಸಂಬಂಧಗಳ ಸರಪಳಿಯ ಅನುಭವಗಳು ಈ ದಾಂಪತ್ಯ ಭಾಷೆ, ಉತ್ತರ ಕರ್ನಾಟಕ ಭಾಷೆಯ ಸೊಗಡಿನಿಂದಾಗಿ ಈ ಎಲ್ಲ ಕವನಗಳಿಗೆ ತಾಜಾತನ ಮತ್ತು ಅಭಿವ್ಯಕ್ತಿಯ ಲವಲವಿಕೆ ಕಂಡುಬರುತ್ತವೆ ’ ಎಂದು ಪ್ರಶಂಸಿಸಿದ್ದಾರೆ. 

About the Author

ಜೀವರಾಜ ಹ ಛತ್ರದ

ಲೇಖಕ ಜೀವರಾಜ ಹನುಮಂತಪ್ಪ ಛತ್ರದ ಮೂಲತಃ ಹಾವೇರಿ ಜಿಲ್ಲೆಯ ಬ್ಯಾಡಗಿಯವರು. ಸರ್ಕಾರಿ ಪ್ರೌಢಶಾಲಾ ಶಿಕ್ಷಕರು. ಹಾವೇರಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷರು.  ಪ್ರಸ್ತುತ ಬ್ಯಾಡಗಿ ತಾಲೂಕಿನ ಮಾಸನಗಿ ಸರಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.  ಕೃತಿಗಳು: ಖುಷಿ ತರಲಿ ಕೃಷಿ, ಅಕ್ಕಡಿ ಕಾಳು( ವೈಚಾರಿಕ ಲೇಖನಗಳು), ಯಾಲಕ್ಕಿ ಹಾಲಕ್ಕಿ, ರಮ್ಯಗಾನ, ಅನುವಿನು, ದಾಂಪತ್ಯ ಗೀತೆಗಳು, ಜೀವಣ್ಣನ ಆಧುನಿಕ ತ್ರಿಪದಿಗಳು, ಅಸಲಿ ಮಳೆ, ಹನಿ ಹನಿ ಕಾವ್ಯಧಾರೆ, ಮಂಜೂರ್ಶಿ, ಸೂರು ಗುಡ್ಡ, ಉದಯ ರಶ್ಮಿ (ಕವನ ಸಂಕಲನಗಳು) ...

READ MORE

Related Books