ಮೈ ಮರೆತು ಕುಣಿವೆ

Author : ಚಿಂತಾಮಣಿ ಕೊಡ್ಲೆಕೆರೆ

Pages 104

₹ 90.00




Year of Publication: 2021
Published by: ವಸಂತ ಪ್ರಕಾಶನ
Address: #360, 10ನೇ ’ಬಿ’ ಮೈನ್ ಜಯನಗರ ಮೂರನೇ ಬ್ಲಾಕ್, ಬೆಂಗಳೂರು-560011
Phone: 08022443996

Synopsys

ಚಿಂತಾಮಣಿ ಕೊಡ್ಲೆಕೆರೆ ಅವರ ’ ಮೈ ಮರೆತು ಕುಣಿವೆ ಕೃತಿಯು ಕವನಸಂಕಲನವಾಗಿದೆ. ಈ ಕೃತಿಗೆ ಬೆನ್ನುಡಿ ಬರೆದಿರುವ ನರೇಂದ್ರ ಪೈ ಅವರು, ಕಣ್ಣು ಸರಿಯಾಗಿ ಕಾಣಿಸದ ಕಣರಿ ತನ್ನ ತಪಸ್ಸಾದ ರಾಮನಿಗಾಗಿ ಸಿಹಿಸಿಹಿಯಾದ ಬಗುಲಿಯನ್ನೇ ಆಯ್ದು ಸೇರಿಸಿದಂತೆ, ಕವಿಯು ತಮ್ಮ ಕವನದ ಪ್ರತಿ ಶಬ್ದವನ್ನೂ ಸಹನೆಯಿಂದ ಹಾದು ಇರಿಸಿದಂತಿದೆ. ಚಿಂತಾಮಣಿಯವರ ಕತೆಗಳಲ್ಲಿ ದೇವರು ಪ್ರತ್ಯಕ್ಷವಾಗುವುದು ಸಾಮಾನ್ಯ ವಿದ್ಯಮಾನ. ಇದನ್ನು ಜಯಂತ ಕಾಯ್ಕಿಣಿಯವರು ಕನ್ನಡದಲ್ಲಿ ವಿಶಿಷ್ಠ ವಿನೋದದಿಂದ ಎದುರು ಹಾಕಿಕೊಂಡ ಅಪರೂಪದ ಕವಿ ನೀನು ಎಂದು ಗುರುತಿಸಿಕೊಂಡಿದ್ದಾರೆ. ಚಿಂತಾಮಣಿಯವರ ದೇವರು ಧಾರ್ಮಿಕ, ರಾಜಕೀಯ, ಆಧ್ಯಾತ್ಮಿಕ ವಲಯದ ದೇವರಲ್ಲ, ನಾನು ಕಂಡುಕೊಂಡ ದೇವರೇ ಬೇರೆ ಎನ್ನುತ್ತಾರೆ.  ಇಲ್ಲಿನ ಕವಿತೆಗಳಲ್ಲಿರುವ ಚಿತ್ರಗಳು ಮನಸ್ಸಿನಲ್ಲಿ ಬಹುಧೀರ್ಘಕಾಲ ಉಳಿಯುವಂತಿದೆ. ಹೀಗೆ ಪಾರಮಾರ್ಥಿಕಕ್ಕೂ, ವರ್ತಮಾನಕ್ಕೂ ಏಕಕಾಲಕ್ಕೆ ಸಲ್ಲುವಂತೆ, ಬುದ್ಧಿಗೂ ಭಾವಕ್ಕೂ ಏಕಕಾಲಕ್ಕೆ ಒದಗುವಂತೆ ಕವಿತೆ ಕಟ್ಟಬಲ್ಲ ಕವಿ ಚಿಂತಾಮಣಿಯವರು ಎಂದಿದ್ದಾರೆ.

About the Author

ಚಿಂತಾಮಣಿ ಕೊಡ್ಲೆಕೆರೆ
(13 January 1961)

ಚಿಂತಾಮಣಿ ಕೊಡ್ಲೆಕೆರೆ ಅವರು 1961 ಜನವರಿ 13ರಂದು ಗೋಕರ್ಣ ಬಳಿಯ ಅಘನಾಶಿನಿ ಗ್ರಾಮದಲ್ಲಿ ಜನಿಸಿದರು. ತಂದೆ ಎಂ.ಎ. ಭಟ್ಟ. ತಾಯಿ ರಾಧೆ. ಹಿರೇಗುತ್ತಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಧಾರವಾಡದಲ್ಲಿ ಬಿಎಸ್‌ಸಿ ಪದವಿ ಪಡೆದರು. ತ್ರಿವೆಂಡ್ರಮ್‌ನಲ್ಲಿ ಟೆಲಿ ಕಮ್ಯುನಿಕೇಶನ್ಸ್‌ನಲ್ಲಿ ಒಂದು ವರ್ಷದ ಇಂಜಿನಿಯರಿಂಗ್ ತರಬೇತಿ ಹಾಗೂ ಬೆಂಗಳೂರಿನಲ್ಲಿ ಎಂ.ಬಿ.ಎ ಪದವಿ ಪಡೆದರು.  ಬಾಲ್ಯದಿಂದಲೂ ಸಾಹಿತ್ಯಾಸಕ್ತಿ ಇದ್ದ ಕೊಡ್ಲೆಕೆರೆ ಅವರು ಮಾಸ ಪತ್ರಿಕೆಗಳಿಗೆ ಹನಿಗವನಗಳನ್ನು ಬರೆಯಲು ಆರಂಭಿಸಿದರು. ಕನ್ನಡಪ್ರಭ, ವಿಜಯಕರ್ನಾಟಕ ಸೇರಿದಂತೆ ಹಲವಾರು ಪತ್ರಿಕೆಗಳಲ್ಲಿ ಇವರು ಬರೆದ ಅಂಕಣ, ಕತೆ, ಕವನಗಳಿಗೆ ಬಹುಮಾನವನ್ನು ಪಡೆದಿದ್ದಾರೆ.  ಇವರ ಪ್ರಮುಖ ಕೃತಿಗಳೆಂದರೆ ...

READ MORE

Conversation

Related Books