ಕಪ್ಪು ಬಿಳುಪಿನ ನಡುವೆ

Author : ಯಶಸ್ವಿನಿ ಶ್ರೀಧರ ಮೂರ್ತಿ

Pages 93

₹ 100.00




Year of Publication: 2020
Published by: ಪ್ರಿಂಟ್ ಮೀಡಿಯಾ
Address: ಸಿರಸಿ,
Phone: 9449148165

Synopsys

’ಕಪ್ಪು ಬಿಳುಪಿನ ನಡುವೆ’ ಕೃತಿಯು ಯಶಸ್ವಿನಿ ಶ್ರೀಧರ ಮೂರ್ತಿ ಅವರ ಕವನಸಂಕಲನವಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ರಾಜೀವ ಅಜ್ಜಿಬಳ ಅವರು, ಕವಯಿತ್ರಿಯ ಕಾವ್ಯಪಥದ ಸ್ಪಷ್ಟವಾದ ದಿಕ್ಕನ್ನು ಗುರುತಿಸಬಹುದಾದ ಕವನಗಳು ಮೌನವಾಗಿ ಮಾತಾಡಿದೆ. ಬಹುತೇಕ ಕವನಗಳಲ್ಲಿ ಕವಯಿತ್ರಿಯ ಸ್ವಂತಿಕೆ, ಕಾವ್ಯರಚನೆಯ ಕುರಿತಾದ ಆಸಕ್ತಿ, ಲವಲವಿಕೆ ಕಂಡುಬರುತ್ತದೆ. ಬಹಳಷ್ಟು ಕವನಗಳು ಜೀವನ್ಮುಖಿಯಾಗಿದ್ದರೂ, ಅಲ್ಲಲ್ಲಿ ವಿಷಾದ, ಹತಾಶೆಗಳು ಇಣುಕಿವೆ. ಇಂದಿನ ಸಂದರ್ಭಗಳಲ್ಲಿ ಅದು ಸಹಜವೂ ಹೌದು. ಯಾಕೆಂದರೆ ಕವಿತೆಗಳು ಆ ಋತುಮಾನದ ಸ್ಥಿತಿಗತಿಗಳ ಮಾನದಂಡವಾಗಿರಲು ಸಾಧ್ಯವಿದೆ. ಕವಿತೆಯ ಗುಣಮಟ್ಟವಿರುವುದು ಅದರ ಕಲಾತ್ಮಕ ಅಭಿವ್ಯಕ್ತಿಯಲ್ಲಿ, ಅಂತಹ ಪ್ರಯತ್ನವನ್ನು ಕವಯಿತ್ರಿ ಪಾಮಾಣಿಕವಾಗಿ ಮಾಡಿದ್ದು ಅವರ ಕವನಗಳಲ್ಲಿ ಕಂಡುಬರುತ್ತದೆ. ಪ್ರಕೃತಿಯನ್ನು ಕುರಿತಾಗಿ ಬರೆಯುವಾಗ ಅದರ ಸಹಜ ಸೌಂದರ್ಯದಲ್ಲಿ ಕವಯಿತಿ ಮೈಮರೆಯುತ್ತಾರೆ ಎನ್ನುತ್ತಾರೆ.

About the Author

ಯಶಸ್ವಿನಿ ಶ್ರೀಧರ ಮೂರ್ತಿ
(06 July 1984)

ಯಶಸ್ವಿನಿ ಶ್ರೀಧರ ಮೂರ್ತಿ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮೇಣಸಿಕೇರಿಯವರು. ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೀಪನಳ್ಳಿಯಲ್ಲಿ ಪಡೆದ ಇವರು ಪ್ರೊಗ್ರೆಸ್ಸಿವ್ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಪ್ರೌಢಶಿಕ್ಷಣವನ್ನು ಪೂರೈಸಿದರು. ಶಿರಸಿಯ ಎಮ್.ಇ.ಎಸ್. ಮಹಾವಿದ್ಯಾಲಯದಲ್ಲಿ ವಿಜ್ಞಾನ ವಿಭಾಗದಲ್ಲಿ ಪದವಿಪೂರ್ವ ಶಿಕ್ಷಣ ಹಾಗೂ ಪದವಿ ಶಿಕ್ಷಣವನ್ನು ಪೂರೈಸಿ, ಮೈಸೂರಿನ ಶಾರದಾ ವಿಲಾಸ ಮಹಾವಿದ್ಯಾಲಯದಿಂದ ಬಿ. ಎಡ್. ಪದವಿ, ಶಿವಮೊಗ್ಗದ ಕುವೆಂಪು ವಿಶ್ವ ವಿದ್ಯಾಲಯದಿಂದ ಗಣಿತ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ. ಪುಸ್ತಕಗಳನ್ನು ಓದುವುದು, ಚಿತ್ರ ಬಿಡಿಸುವುದು, ಕಥೆ, ಕವನ, ಲೇಖನಗಳನ್ನು ಬರೆಯುವುದು ಇವರ ...

READ MORE

Related Books